ಇಬ್ರಾಹಿಂ ಅಂದಾಕ್ಷಣ ದೇವೇಗೌಡರು ಭುಸುಗುಡಲಾರಂಭಿಸಿದರು, ಅವರ ಮಾತಿನಲ್ಲಿ ಕೋಪ, ಅಸಹನೆ ಮತ್ತು ಹೇವರಿಕೆ!
ಜೆಡಿಎಸ್ ಪಕ್ಷದ ಭವಿಷ್ಯ ಕುತೂಹಲಕಾರಿ ಘಟ್ಟ ತಲುಪಿದೆ. ತಮ್ಮೊಂದಿಗೆ ಸಾವಿರಾರು ಕಾರ್ಯಕರ್ತರನ್ನು ಹೊದಿರುವ ಇಬ್ರಾಹಿಂ ಪಕ್ಷ ತಮ್ಮದು ಅಂತಿದ್ದಾರೆ. ಅದನ್ನು ಕಟ್ಟಿ ಬೆಳೆಸಿದ ದೇವೇಗೌಡರಿಗೆ ಇಬ್ರಾಹಿಂ ಮಾತುಗಳಿಂದ ಸಹಜವಾಗೇ ಕೋಪ ಬರುತ್ತದೆ. ಮುಂಬರುವ ದಿನಗಳಲ್ಲಿ ಪಕ್ಷದ ಒಡೆತನ ಕದನ ಕೋರ್ಟ್ ಮೆಟ್ಟಿಲು ಹತ್ತಿದರೆ ಆಶ್ಚರ್ಯವಿಲ್ಲ.
ಬೆಂಗಳೂರು: ಜೆಡಿಎಸ್ ಕಾರ್ಯಕರ್ತರು ಮತ್ತು ಶಾಸಕರೊಂದಿಗೆ (JDS MLAs and workers) ಸಭೆ ನಡೆಸಿದ ಬಳಿಕ ಜೆಡಿಎಸ್ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ (HD Devegowda) ಅವರನ್ನು ಭೇಟಿಯಾಗುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳುತ್ತಾರೆ. ಅದರೆ ದೇವೇಗೌಡರ ಮನೆಯಲ್ಲಿ ಅವರಿಗೆ ಎಂಥ ಸ್ವಾಗತ ಸಿಗಲಿದೆ ಅನ್ನೋದು ಮಾಜಿ ಪ್ರಧಾನಿ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಪ್ರತಿಕ್ರಿಯೆಯಿಂದ ಗೊತ್ತಾಗುತ್ತದೆ. ಸರ್, ಇಬ್ರಾಹಿಂ ಅವರು ಜೆಡಿಎಸ್ ಪಕ್ಷ ತಮಗೆ ಸೇರಿದ್ದು ಅಂತ ಹೇಳುತ್ತಿದ್ದಾರಲ್ಲ ಅಂತ ಮಾಧ್ಯಮದವರು ಬೆಂಗಳೂರಲ್ಲಿ ದೇವೇಗೌಡರನ್ನು ಕೇಳಿದಾಗ, ಅವರ ಅಸಹನೆ ಮತ್ತು ಕೋಪದಿಂದ ಸಿಡುಕಿದರು. ಹೋಗ್ರೀ ಆಚೆ ಅಂತ ಮಾಧ್ಯಮದವರಿಗೆ ಹೇಳಿದ್ದರಲ್ಲಿ ಇಬ್ರಾಹಿಂ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಿಟ್ಟಿನ ಜೊತೆ ಅವರ ಮುಖದಲ್ಲಿ ಹೇವರಿಕೆಯೂ ವ್ಯಕ್ತವಾಯಿತು. ನಂತರ ಅವರು ವ್ಯಂಗ್ಯವಾಗಿ ನಕ್ಕು ಇನ್ನು 3-4 ದಿನಗಳಲ್ಲಿ ಎಲ್ಲ ಗೊತ್ತಾಗುತ್ತದೆ ಅಂತ ಗೊಣಗುತ್ತಾ ಹೇಳಿದರು. ಜೆಡಿಎಸ್ ಪಕ್ಷದ ಭವಿಷ್ಯ ಕುತೂಹಲಕಾರಿ ಘಟ್ಟ ತಲುಪಿದೆ. ತಮ್ಮೊಂದಿಗೆ ಸಾವಿರಾರು ಕಾರ್ಯಕರ್ತರನ್ನು ಹೊದಿರುವ ಇಬ್ರಾಹಿಂ ಪಕ್ಷ ತಮ್ಮದು ಅಂತಿದ್ದಾರೆ. ಅದನ್ನು ಕಟ್ಟಿ ಬೆಳೆಸಿದ ದೇವೇಗೌಡರಿಗೆ ಇಬ್ರಾಹಿಂ ಮಾತುಗಳಿಂದ ಸಹಜವಾಗೇ ಕೋಪ ಬರುತ್ತದೆ. ಮುಂಬರುವ ದಿನಗಳಲ್ಲಿ ಪಕ್ಷದ ಒಡೆತನ ಕದನ ಕೋರ್ಟ್ ಮೆಟ್ಟಿಲು ಹತ್ತಿದರೆ ಆಶ್ಚರ್ಯವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ