ನಾನು ಪಕ್ಷದ ಚುನಾಯಿತ ಅಧ್ಯಕ್ಷ, ನನ್ನ ಆಯ್ಕೆಗೆ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ವೋಟು ಮಾಡಿದ್ದಾರೆ: ಸಿಎಂ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ
ರಾಷ್ಟ್ರಕವಿ ಕುವೆಂಪು ಅವರನ್ನು ಒಪ್ಪಿಕೊಳ್ಳುವವರು ತನ್ನ ಮಾತಾನ್ನೂ ಒಪ್ಪಬೇಕಾಗುತ್ತದೆ ಅಂತ ಇಬ್ರಾಹಿಂ ಹೇಳುತ್ತಾರೆ. ಡಾ ಬಿಆರ್ ಅಂಬೇಡ್ಕರ್, ಬಸವಣ್ಣ ಮತ್ತು ಪುಟ್ಟಪ್ಪನವರು ಹೇಳಿದ ಸಿದ್ಧಾಂತವನ್ನೇ ತಾನು ಹೇಳುತ್ತಿರೋದು ಎನ್ನುವ ಇಬ್ರಾಹಿಂ, ಶಾಸಕರು ಮತ್ತು ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ಬಳಿಕ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾಗುವುದಾಗಿ ಹೇಳುತ್ತಾರೆ.
ಬೆಂಗಳೂರು: ಪಕ್ಷದಿಂದ ತನ್ನನ್ನು ಉಚ್ಚಾಟಿಸಬೇಕಾದರೆ 2/3 ಬಹುಮತ ಬೇಕಾಗುತ್ತದೆ, ನಾನು ಪಕ್ಷದ ಚುನಾಯಿತ ಅಧ್ಯಕ್ಷನಾಗಿದ್ದೇನೆ, ನನ್ನನ್ನು ಅ ಹುದ್ದೆಗೇರಿಸಲು ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಜಿಟಿ ದೇವೇಗೌಡ (GT Devegowda) ಸೇರಿದಂತೆ ಎಲ್ಲರೂ ವೋಟು ಮಾಡಿದ್ದಾರೆ, ಹಾಗೆಲ್ಲ ನನ್ನನ್ನು ತೆಗೆಯಲು ಬರಲ್ಲ ಎಂದು ಜೆಡಿಎಸ್ ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿದರು. ತಮ್ಮ ನಿವಾಸದಲ್ಲಿ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಇಬ್ರಾಹಿಂ ಅವರ ಧ್ವನಿಯಲ್ಲಿ ನಿನ್ನೆಯ ಉತ್ಸಾಹ, ಆತ್ಮವಿಶ್ವಾಸ ಕಾಣಿಸಲಿಲ್ಲ. ನಿಮ್ಮ ಮಾತಿಗೆ ಕುಮಾರಸ್ವಾಮಿ ಒಪ್ಪಿಕೊಳ್ಳುತ್ತಾರಾ ಅಂತ ಕೇಳಿದ ಪ್ರಶ್ನೆಗೆ, ರಾಷ್ಟ್ರಕವಿ ಕುವೆಂಪು ಅವರನ್ನು ಒಪ್ಪಿಕೊಳ್ಳುವವರು ತನ್ನ ಮಾತಾನ್ನೂ ಒಪ್ಪಬೇಕಾಗುತ್ತದೆ ಅಂತ ಹೇಳುತ್ತಾರೆ. ಡಾ ಬಿಆರ್ ಅಂಬೇಡ್ಕರ್, ಬಸವಣ್ಣ ಮತ್ತು ಪುಟ್ಟಪ್ಪನವರು ಹೇಳಿದ ಸಿದ್ಧಾಂತವನ್ನೇ ತಾನು ಹೇಳುತ್ತಿರೋದು ಎನ್ನುವ ಇಬ್ರಾಹಿಂ, ಶಾಸಕರು ಮತ್ತು ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ಬಳಿಕ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾಗುವುದಾಗಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ