ರಾಮನಗರ: ಅಪರೂಪದ ದೃಶ್ಯವೊಂದರಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷದ ನಾಯಕರು ಕೆಂಪೇಗೌಡ ಪ್ರತಿಮೆಗೆ ಒಟ್ಟಾಗಿ ಪುಷ್ಪಾರ್ಚನೆ ಮಾಡಿದರು!
ಸಾಮಾನ್ಯವಾಗಿ ಅನಿತಾ ಕುಮಾರಸ್ವಾಮಿಯವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಆದರೆ, ಅವರು ರಾಮನಗರದ ಶಾಸಕಿಯಾಗಿರುವುದರಿಂದ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿತ್ತು.
ಇದೊಂದು ಅಪರೂಪದ ದೃಶ್ಯ ಮತ್ತು ಸನ್ನಿವೇಶ. ರಾಜ್ಯದ ಮೂರು ಪ್ರಮುಖ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿ(ಎಸ್) ನಾಯಕರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಒಂದೇ ವೇದಿಕೆಯಲ್ಲಿ, ವೇದಿಕೆ ಅಲ್ಲ ಮಾರಾಯ್ರೇ ಕ್ರೇನ್ ಮೇಲೆ ಸೇರುವುದು ಅಪರೂಪದ ದೃಶ್ಯವಲ್ಲದೆ ಮತ್ತೇನು? ಅವರು ಒಂದೆಡೆ ಸೇರಿದ್ದು ಮಾತ್ರ ಅಲ್ಲದೆ ಭೂಮಿಯಿಂದ ಎತ್ತರಕ್ಕೆ ಹೋಗಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆಯನ್ನೂ ಮಾಡಿದರು. ರಾಮನಗರದ ಜನತೆ ಈ ದೃಶ್ಯವನ್ನು ಸೋಮವಾರ ಕಣ್ತುಂಬಿಸಿಕೊಂಡರು. ಅಂದಹಾಗೆ, ಕ್ರೇನಲ್ಲಿ ಕಾಣಿಸಿಕೊಂಡರವರು-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದ ಸಂಸದ ಡಿಕೆ ಸುರೇಶ್ ಮತ್ತು ರಾಮನಗರದ ಶಾಸಕಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ.
ಗಣ್ಯರು ರಾಮನಗರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸೇರಿದ್ದರು. ಸಾಮಾನ್ಯವಾಗಿ ಅನಿತಾ ಕುಮಾರಸ್ವಾಮಿಯವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಆದರೆ, ಅವರು ರಾಮನಗರದ ಶಾಸಕಿಯಾಗಿರುವುದರಿಂದ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿತ್ತು.
ಅದೇನೇ ಇರಲಿ, ಬೇರೆ ಬೇರೆ ಪಕ್ಷಗಳ ನಾಯಕರನ್ನು ಒಂದೇ ವೇದಿಕೆಯಲ್ಲಿ ನೋಡುವುದು ಖುಷಿ ನೀಡುತ್ತದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ತೀವ್ರ ಸ್ವರೂಪದ ಮಂಡಿನೋವಿನಿಂದ ಬಳಲುತ್ತಿದ್ದಾರೆ. ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಹೇಳಿದ್ದರೂ ಅವರು ಹಾಗೆ ಮಾಡುವ ಸ್ಥಿತಿಯಲ್ಲಿಲ್ಲ. ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಿರುವುದು ಅವರನ್ನು ಚಿಂತೆಗೀಡು ಮಾಡಿದೆ.
ಪಕ್ಷದೊಳಗಿನ ಅವರ ಟೀಕಾಕಾರರು ಮತ್ತು ವಿರೋಧ ಪಕ್ಷಗಳ ನಾಯಕರು ಪಕ್ಷದ ಸಾಧನೆಯನ್ನು ಲೇವಡಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಬದಲಾಯಿಸಬೇಕೆಂಬ ಕೂಗು ಸಹ ಎದ್ದಿದೆ. ಬೊಮ್ಮಾಯಿ ಅವರಿಗೆ ಈಗ ಸತ್ವಪರೀಕ್ಷೆಯ ಸಮಯ.
ಇದನ್ನೂ ಓದಿ: Viral Video: ಕೊವಿಡ್ ಉಲ್ಬಣದ ಆತಂಕದ ನಡುವೆಯೇ ಗೋವಾ ಬೀಚ್‌ನಲ್ಲಿ ಮುಗಿಬಿದ್ದ ಜನರು; ವಿಡಿಯೋ ವೈರಲ್