ಬಾಳೆ ಗಿಡದಿಂದ ಅಲ್ಲ, ಸುವರ್ಣಗಡ್ಡೆಯಲ್ಲಿ ಬೆಳೆಯಿತು ದೊಡ್ಡ ಬಾಳೆ ಗೊನೆ! ಕಾಲಜ್ಞಾನಿ ವೀರಬ್ರಹ್ಮ ಹೇಳಿದಂತೆ ನಡೆಯುತ್ತಿದೆ ಎಂದರು ಜನ
Konaseema: ಐ. ಪೊಲವರಂ ಮಂಡಲದ ತಿಳಕುಪ್ಪ ಗ್ರಾಮದಲ್ಲಿ ವೇಗಿರಾಜು ಸುಬ್ಬರಾಜು ಅವರ ಮನೆ ಆವರಣದಲ್ಲಿ ಸುವರ್ಣಗಡ್ಡೆ ನೆಟ್ಟಿದ್ದರೆ ಬಾಳೆ ಹಣ್ಣಿನ ಗೊನೆ ಬಿಟ್ಟಿದೆ. ನೆಲದಡಿಯಲ್ಲಿ ಎರಡು ಕೆಜಿ ತೂಕದ ಸುವರ್ಣಗಡ್ಡೆಯೂ ಬಿಟ್ಟಿದೆ. ಮುಂದೆ ಅದು ಬಾಳೆಹಣ್ಣು ಗೊನೆ ಹಾಕಿದೆ.
ಅಂಬೇಡ್ಕರ್ ಕೋನಸೀಮ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರೈತರೊಬ್ಬರು ತಮ್ಮ ಮನೆಯ ಆವರಣದಲ್ಲಿ ಕಂದಗಡ್ಡೆ ಅಂದ್ರೆ ಸುವರ್ಣಗಡ್ಡೆಯನ್ನು ನೆಟ್ಟಿದ್ದರು. ಆದರೆ ಆ ಗಡ್ಡೆಯಿಂದ ಉದ್ದನೆಯ ಬಾಳೆ ಕಂದು ಬೆಳೆದು, ಅದರಲ್ಲಿ ದೊಡ್ಡದಾದ ಬಾಳೆ ಗೊನೆ ಬಿಟ್ಟಿದೆ. ಈ ವಿಚಿತ್ರವನ್ನು ನೋಡಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವಿಷಯ ಸುತ್ತಮುತ್ತಲಿನವರಿಗೆ ಗೊತ್ತಾಗಿದ್ದು, ಈ ವಿಚಿತ್ರ ನೋಡಲು ಜನ ಮುಗಿಬೀಳುತ್ತಿದ್ದಾರೆ. ಕಾಲಜ್ಞಾನಿ ವೀರಬ್ರಹ್ಮನ್ನ ಹೇಳಿದ್ದಂತೆ ನಡೆಯುತ್ತಿದೆ ಎಂದು ಚರ್ಚಿಸುತ್ತಿದ್ದಾರೆ.
ಐ. ಪೊಲವರಂ ಮಂಡಲದ ತಿಳಕುಪ್ಪ ಗ್ರಾಮದಲ್ಲಿ ವೇಗಿರಾಜು ಸುಬ್ಬರಾಜು ಅವರ ಮನೆ ಆವರಣದಲ್ಲಿ ಸುವರ್ಣಗಡ್ಡೆ ನೆಟ್ಟಿದ್ದರೆ ಬಾಳೆ ಹಣ್ಣಿನ ಗೊನೆ ಬಿಟ್ಟಿದೆ. ನೆಲದಡಿಯಲ್ಲಿ ಎರಡು ಕೆಜಿ ತೂಕದ ಸುವರ್ಣಗಡ್ಡೆಯೂ ಬಿಟ್ಟಿದೆ. ಆ ಗಟ್ಟೆಯಿಂದ ಎತ್ತರದ ಕಾಂಡ ಮೂಡಿದೆ. ಮುಂದೆ ಅದು ಬಾಳೆಹಣ್ಣು ಗೊನೆ ಹಾಕಿದೆ. ಮುಂಜಾನೆ ಮನೆಯ ಅಂಗಳದಲ್ಲಿ ಕಾಣಿಸಿಕೊಂಡ ಈ ವಿಚಿತ್ರವನ್ನು ಕಂಡು ಮನೆಯವರೆಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ