Mobile Phone Ban: ಅದು ಅಮೆರಿಕದ ಅತ್ಯಂತ ಶಾಂತ, ನಿಶ್ಶಬ್ದ ಪಟ್ಟಣ -ಇಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ಬಳಸಿದರೆ ಜೈಲು ಸೇರಬೇಕಾಗುತ್ತದೆ!
Green Bank City: ಅದು ಅಮೆರಿಕದ ನಿಶ್ಶಬ್ದ, ಶಾಂತ ಪಟ್ಟಣ: ಆ ನಗರದಲ್ಲಿ ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿದರೆ ಜೈಲು ಸೇರಬೇಕಾಗುತ್ತದೆ! ಕಾರಣ ತಿಳಿದರೆ ಶಾಕ್ ಆಗುತ್ತೀರಿ. ಏಕೆಂದರೆ ಲ್ಲಿ ಸೆಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ನಿಷೇಧಿಸಲಾಗಿದೆ.
ಇಂದಿನ ಅಂತರ್ಜಾಲ ಯುಗದಲ್ಲಿ ಮೊಬೈಲ್ ಫೋನ್ ಇಲ್ಲದ ಜೀವನ ಊಹಿಸಲು ಸಾಧ್ಯವೇ!? ನವಜಾತ ಶಿಶುವಿನಿಂದ ಹಿಡಿದು ಕಾಲು ಮಡಚಿಕೊಂಡಿರುವ ಮುದುಕರವರೆಗೆ ಸೆಲ್ ಫೋನ್ ಜೀವನದ ಭಾಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸೆಲ್ ಫೋನ್ ಬಳಸುವುದನ್ನು ನಿಷೇಧಿಸಿದರೆ, ಇದು ನಿಜವೇ, ಅದು ಸಾಧ್ಯವಾದೀತಾ ಎಂದು ನೀವು ಆಶ್ಚರ್ಯಪಡುತ್ತೀರಿ. ಆದರೆ ಸೆಲ್ ಫೋನ್ (Smart Phone) ಬಳಕೆಯನ್ನು ನಿಷೇಧಿಸಿರುವ ( Ban) ನಗರವೊಂದಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಅಲ್ಲಿ ವಾಸಿಸುವ ಜನರು ಫೋನ್ ಅಥವಾ ಆಧುನಿಕ ತಂತ್ರಜ್ಞಾನವನ್ನು ಬಳಸುವುದಿಲ್ಲ. ಬನ್ನೀ ಹಾಗಾದರೆ ಅದ್ಯಾವ ಪಟ್ಟಣದಲ್ಲಿ ಫೋನ್ ಬಳಕೆ ಇಲ್ಲ ಎಂಬುದನ್ನು ತಿಳಿದುಕೊಳ್ಳೋಣ.
Mobile Phone Ban: ಎಲೆಕ್ಟ್ರಾನಿಕ್ ಉಪಕರಣ ಬಳಸಿದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ!
ಅಮೆರಿಕದಂತಹ ಅತ್ಯಾಧುನಿಕ ದೇಶದ ಪಟ್ಟಣವೊಂದರಲ್ಲಿ ಸೆಲ್ ಫೋನ್ ಮೇಲೆ ನಿಷೇಧ ಹೇರಲಾಗಿದೆ. ಅಮೆರಿಕದ ಪಶ್ಚಿಮದಲ್ಲಿರುವ ವರ್ಜೀನಿಯಾದ ಪೊಕಾಹೊಂಟಾಸ್ ಕೌಂಟಿಯಲ್ಲಿರುವ (Pocahontas County, Virginia in the American West) ಗ್ರೀನ್ ಬ್ಯಾಂಕ್ ಸಿಟಿಯ (Green Bank City) ಜನರು ತಂತ್ರಜ್ಞಾನವನ್ನು ಬಳಸುವುದಿಲ್ಲ.
Mobile Phone Ban: ಮೊಬೈಲ್, ಟಿವಿ, ರೇಡಿಯೋ ಬಳಕೆ ನಿಷೇಧ
ಈ ನಗರದಲ್ಲಿ ವಾಸಿಸುವ ಜನರು ಮೊಬೈಲ್, ಟಿವಿ ಮತ್ತು ರೇಡಿಯೋ ಬಳಸುವುದಿಲ್ಲ. ಈ ನಗರದಲ್ಲಿ ಈ ವಿದ್ಯುನ್ಮಾನ ಸಾಧನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂದರೆ ಇಲ್ಲಿ ವಾಸಿಸುವವರು ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿದರೆ ಜೈಲು ಸೇರಬೇಕಾಗುತ್ತದೆ.
Mobile Phone Ban: ಅದನ್ನು ಏಕೆ ಬಳಸಬಾರದು?
ವಾಸ್ತವವಾಗಿ, ವಿಶ್ವದ ಅತಿದೊಡ್ಡ ಸ್ಟೀರಬಲ್ ರೇಡಿಯೊ ದೂರದರ್ಶಕವು ಈ ನಗರದಲ್ಲಿದೆ. ಈ ಗ್ರಾಮದ ಜನಸಂಖ್ಯೆ ಕೇವಲ 150 ಜನರು ಅಷ್ಟೆ. ಇಲ್ಲಿರುವ ಗ್ರೀನ್ ಬ್ಯಾಂಕ್ ದೂರದರ್ಶಕ ಅತ್ಯಂತ ದೊಡ್ಡದು. ಇದರ ಉದ್ದ 485 ಅಡಿ.. ಇದರ ತೂಕ 7600 ಮೆಟ್ರಿಕ್ ಟನ್. ಈ ಟೆಲಿಸ್ಕೋಪ್ ಮೊಬೈಲ್ ದೂರದರ್ಶಕವಾಗಿದ್ದು, ಚಲಿಸಬಲ್ಲದು. ಅಂದರೆ ಅದನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು.
ಅಮೆರಿಕದ ರಾಷ್ಟ್ರೀಯ ರೇಡಿಯೋ ಖಗೋಳ ವೀಕ್ಷಣಾಲಯವು ಈ ಸ್ಟೀರಬಲ್ ರೇಡಿಯೋ ದೂರದರ್ಶಕದ ಬಳಿ ಇದೆ. ಇಲ್ಲಿಂದ ವಿಜ್ಞಾನಿಗಳು ಬಾಹ್ಯಾಕಾಶದಿಂದ ಭೂಮಿಯನ್ನು ತಲುಪುವ ಅಲೆಗಳ ಬಗ್ಗೆ ಸಂಶೋಧನೆ ನಡೆಸುತ್ತಿರುತ್ತಾರೆ.
ದೂರದರ್ಶಕವು ಬಾಹ್ಯಾಕಾಶದಲ್ಲಿ 13 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ಸಂಕೇತಗಳನ್ನು ಸಹ ಪಡೆಯಬಹುದು. ಹಾಗಾಗಿ ಇದಕ್ಕೆ ಬಾಧಕವಾಗಬಾರದು ಎಂದು ಈ ನಗರದಲ್ಲಿ ವಿದ್ಯುತ್ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Thu, 9 November 23