ಜಿದ್ದಿಗೆ ಬಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ದೊಡ್ಡಬಳ್ಳಾಪುರ ನಗರಸಭೆ ಕಟ್ಟಡವನ್ನು ಎರಡೆರಡು ಬಾರಿ ಉದ್ಘಾಟಿಸಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 26, 2022 | 8:38 PM

ಅದಾಗಲೇ ಲೋಕಾರ್ಪಣೆಗೊಂಡಿದ್ದ ಕಟ್ಟಡವನ್ನು ಮತ್ತೊಮ್ಮೆ ಉದ್ಘಾಟನೆ ಮಾಡಿದ್ದರ ವಿರುದ್ಧ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇದಪ್ಪಾ ರಾಜಕೀಯ ಜಿದ್ದು ಅಂದ್ರೆ! ದೊಡ್ಡಬಳ್ಳಾಪುರ ನಗರಸಭೆಯ (Doddaballapura Corporation) ಹೊಸ ಕಟ್ಟಡ ಎರಡೆರಡು ಬಾರಿ ಲೋಕಾರ್ಪಣೆ ಕಂಡಿದೆ ಮಾರಾಯ್ರೇ!! ಮತ್ತೊಂದು ಸ್ವಾರಸ್ಯಕರ ಸಂಗತಿ ಏನು ಗೊತ್ತಾ? ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕಿತ್ತಾಟ ಮತ್ತು ಒಣ ಪ್ರತಿಷ್ಠೆಗಳಿಂದಾಗಿ ಕಟ್ಟಡದ ಉದ್ಘಾಟನೆ ಒಮ್ಮೆಯಲ್ಲ ಎರಡು ಸಲವಲ್ಲ, ನಾಲ್ಕು ಬಾರಿ ಮುಂದೂಡಲ್ಪಟ್ಟಿತ್ತು. ಹಿಂದೆ, ದೊಡ್ಡಬಳ್ಳಾಪುರದ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ (Venkatramanaiah) ಕಟ್ಟಡವನ್ನು ಉದ್ಘಾಟಿಸಿದ್ದರು. ಈ ವಿಡಿಯೋನಲ್ಲಿ ನಿಮಗದು ಕಾಣುತ್ತದೆ. ಲೇಟೆಸ್ಟ್ ಆಗಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರುಗಳಾಗಿರುವ ಆರ್ ಸುಧಾಕರ್ (R Sudhakar) ಮತ್ತು ಎಮ್ ಟಿ ಬಿ ನಾಗರಾಜ್ (MTB Nagraj) ಅವರು ರಿಬ್ಬನ್ ಕತ್ತರಿಸಿದರು!

ಅದಾಗಲೇ ಲೋಕಾರ್ಪಣೆಗೊಂಡಿದ್ದ ಕಟ್ಟಡವನ್ನು ಮತ್ತೊಮ್ಮೆ ಉದ್ಘಾಟನೆ ಮಾಡಿದ್ದರ ವಿರುದ್ಧ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತಾಡಿದ ಕಾಂಗ್ರೆಸ್ ಮುಖಂಡರೊಬ್ಬರು ಸರ್ಕಾರೀ ಕಾರ್ಯಕ್ರಮಗಳ ನೆಪದಲ್ಲಿ ದೊಡ್ಡಬಳ್ಳಾಪುರದ ನಾಗರಿಕರನ್ನು ಅವಮಾನಿಸಲಾಗುತ್ತಿದೆ. ಒಂದೇ ಕಟ್ಟಡವನ್ನು ಐದೈದು ಬಾರಿ ಉದ್ಘಾಟನೆ ಮಾಡುವ ಮೂಲಕ ಜನ ಕಷ್ಟಪಟ್ಟು ದುಡಿದು ಪಾವತಿಸುವ ತೆರಿಗೆ ಹಣದಲ್ಲಿ ಮೋಜು ಮಸ್ತಿ ಮಾಡಲಾಗುತ್ತಿದೆ. ಸ್ವಾಭಿಮಾನದಿಂದ ಬದುಕುತ್ತಿರುವ ಜನರಿಗೆ ಬಿಜೆಪಿ ಮಾಡುತ್ತಿರುವ ಅವಮಾನ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಹೊಸ ಕಟ್ಟಡಗಳನ್ನು ಉದ್ಘಾಟಿಸುವ ವ್ಯಾಮೋಹ ಸಚಿವ ನಾಗರಾಜ್ ಅವರಿಗೆ ಸ್ವಲ್ಪ ಜಾಸ್ತಿಯೇ ಇರುವಂತಿದೆ. ಯಾಕೆಂದರೆ ಹಿಂದೆಯೂ ಅವರೊಮ್ಮೆ ಹೊಸಕೋಟೆ ಕ್ಷೇತ್ರದಲ್ಲಿ ಬರುವ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆಗೆ ಸಂಬಂಧಿಸಿದಂತೆ ಅಲ್ಲಿನ ಶಾಸಕ ಶರತ್ ಬಚ್ಚೇಗೌಡ ಅವರೊಂದಿಗೆ ತೂ ತೂ ಮೈ ಮೈ ಮಾಡಿಕೊಂಡಿದ್ದರು.

ಇದನ್ನೂ ಓದಿ:   ಸಿಎಂ ಸಭೆ ಬೆನ್ನಲ್ಲೇ ಇಂದು ಅಧಿಕಾರಿಗಳ ಸಭೆ; ಕೊರೊನಾ 4ನೇ ಅಲೆ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಸಚಿವ ಕೆ.ಸುಧಾಕರ್

Follow us on