2019ರಲ್ಲಿ ಉಂಟಾದ ಪ್ರವಾಹ ಇವರ ಬದುಕನ್ನೇ ಸರ್ವನಾಶ ಮಾಡಿತು, ಸರ್ಕಾರ ಕೈಬಿಟ್ಟಿತು, ಹತಾಷ ಕುಟುಂಬಗಳು ದಯಾಮರಣ ಬಯಸಿವೆ!

2019ರಲ್ಲಿ ಉಂಟಾದ ಪ್ರವಾಹ ಇವರ ಬದುಕನ್ನೇ ಸರ್ವನಾಶ ಮಾಡಿತು, ಸರ್ಕಾರ ಕೈಬಿಟ್ಟಿತು, ಹತಾಷ ಕುಟುಂಬಗಳು ದಯಾಮರಣ ಬಯಸಿವೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 26, 2022 | 11:01 PM

ಸಂಪೂರ್ಣವಾಗಿ ನಿರ್ಗತಿಕರಾಗಿದ್ದ ಕುಟುಂಬಗಳ ಸದಸ್ಯರು ಕಳೆದ 3 ವರ್ಷಗಳಿಂದ ಜನಪ್ರತಿನಿಧಿಗಳ ಮನೆಗೆ, ಅವರ ಕಚೇರಿಗಳಿಗೆ, ಸರ್ಕಾರೀ ಕಚೇರಿಗಳಿಗೆ ಎಡತಾಕಿದ್ದಾರೆ. ಯಾರಿಂದಲೂ ಸಹಾಯವಾಗಿಲ್ಲ.

ಇವರಿಬ್ಬರ ಮುಖದಲ್ಲಿ ಕಾಣುವ ನೋವು, ಯಾತನೆ, ಹತಾಷೆ, ಅಸಹಾಯಕತೆ ಮತ್ತು ದಾರಿದ್ರ್ಯ ಗುರುತಿಸಬಲ್ಲಿರಾ ಸ್ನೇಹಿತರೇ? ಅವರ ಕೈಗಳಲ್ಲಿ ಒಂದು ಕಾಗದವಿದೆ, ಅದು 5 ಕುಟುಂಬಗಳು ದಯಾಮರಣಕ್ಕೆ (Euthanesia) ಅನುಮತಿ ಕೋರಿ ದೇಶದ ರಾಷ್ಟ್ರಪತಿಗಳಿಗೆ (The President) ಬರೆದಿರುವ ಪತ್ರವಿದೆ! ಅವರೆಂಥ ಸ್ಥಿತಿಯಲ್ಲಿದ್ದಾರೆ ಅರ್ಥಮಾಡಿಕೊಳ್ಳಲು ಈ ಪತ್ರ ಸಾಕು. ಇವರು ಚಿಕ್ಕಮಗಳೂರಿನ ಮಲೆಮನೆ (Malemane) ಗ್ರಾಮದವರು. 2019ರಲ್ಲಿ ಉಂಟಾದ ಪ್ರವಾಹದಲ್ಲಿ ಇವರ ಕುಟುಂಬಗಳು ಸೇರಿದಂತೆ 5 ಕುಟುಂಬಗಳ ಮನೆಗಳು ಕೊಚ್ಚಿ ಹೋಗಿದ್ದವು. ಅವರ ಬದುಕಿನ ಆಧಾರವಾಗಿದ್ದ ಹೊಲ ಗದ್ದೆ ಮತ್ತು ತೋಟಗಳು ಸರ್ವನಾಶವಾಗಿದ್ದವು. ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪನವರು ಪುನರ್ವಸತಿ ಮತ್ತು ಹಣಕಾಸಿನ ನೆರವು ಒದಗಿಸುವುದಾಗಿ ಭರವಸೆ ನೀಡಿ ಮರೆತು ಹೋದರು.

ಸಂಪೂರ್ಣವಾಗಿ ನಿರ್ಗತಿಕರಾಗಿದ್ದ ಕುಟುಂಬಗಳ ಸದಸ್ಯರು ಕಳೆದ 3 ವರ್ಷಗಳಿಂದ ಜನಪ್ರತಿನಿಧಿಗಳ ಮನೆಗೆ, ಅವರ ಕಚೇರಿಗಳಿಗೆ, ಸರ್ಕಾರೀ ಕಚೇರಿಗಳಿಗೆ ಎಡತಾಕಿದ್ದಾರೆ. ಯಾರಿಂದಲೂ ಸಹಾಯವಾಗಿಲ್ಲ. ಬೆಲೆಗಳು ಗಗಗನಚುಂಬಿ ಕಟ್ಟಡಗಳಿಗಿಂತ ಮೇಲೆ ಹೋಗಿರುವ ಇವತ್ತಿನ ದಿನಗಳಲ್ಲಿ ಕೈಯಲ್ಲಿ ಬಿಡಿಗಾಸಿಲ್ಲದೆ ಬದುಕು ನಡೆಸುವುದು ಸಾಧ್ಯವೇ?

ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಿರುವ ಐದು ಕುಟುಂಬಗಳು ತಮ್ಮ ಹೋರಾಟ ಮತ್ತು ಬದುಕನ್ನು ಕೊನೆಗಾಣಿಸಲು ನಿರ್ಧರಿಸಿವೆ. ಇವರ ಸ್ಥಿತಿ ನೋಡುತ್ತಿದ್ದರೆ ಸಂತ್ರಸ್ತರಿಗೆ ಸಹಾಯ ಒದಗಿಸುವ ಆಯಾಮದಲ್ಲೂ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿದೆಯಾ ಎಂಬ ಸಂಶಯ ನಮ್ಮಲ್ಲಿ ಮೂಡದಿರದು.

ಇನ್ನಾದರೂ ಸರ್ಕಾರ ನೆರವಿನ ಹಸ್ತ ಚಾಚಿ ಕುಟುಂಬಕ್ಕೆ ನೆರವಾದೀತೆ?

ಇದನ್ನೂ ಓದಿ:  ದಯಾಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್​ರಿಗೆ ಪತ್ರ ಬರೆದ 12 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು