‘ಪುರುಷೋತ್ತಮ’ ಟ್ರೇಲರ್ ಲಾಂಚ್ ವೇಳೆ ಜಿಮ್ ರವಿ ಕಣ್ಣೀರು; ಬಡತನ ಕಲಿಸಿದ ಪಾಠಗಳ ಮೆಲುಕು
ಮೇ 6ರಂದು ‘ಪುರುಷೋತ್ತಮ’ ಚಿತ್ರ ರಿಲೀಸ್ ಆಗಲಿದೆ. ಜಿಮ್ ರವಿ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ಇದು.
ಬಾಡಿ ಬಿಲ್ಡಿಂಗ್ನಲ್ಲಿ ವಿಶ್ವಮಟ್ಟದ ಸಾಧನೆ ಮಾಡಿದ ಜಿಮ್ ರವಿ (Gym Ravi) ಅವರು ಮೊದಲ ಬಾರಿಗೆ ಹೀರೋ ಆಗಿ ‘ಪುರುಷೋತ್ತಮ’ (Purushottama Movie) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅಮರನಾಥ್ ನಿರ್ದೇಶನ ಮಾಡಿದ್ದಾರೆ. ನಟನೆ ಜೊತೆಗೆ ನಿರ್ಮಾಪಕನ ಸ್ಥಾನದಲ್ಲಿ ನಿಂತು ಜಿಮ್ ರವಿ ಅವರೇ ಈ ಸಿನಿಮಾ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಆದರೆ ಅವರ ಹಿಂದಿನ ಶಕ್ತಿಯಾಗಿ ನಿಂತಿರುವುದು ವಿಜಯ್ ರಾಮೇಗೌಡ. ಏ.26ರಂದು ಈ ಚಿತ್ರ ಟ್ರೇಲರ್ ಬಿಡುಗಡೆ ಆಗಿದೆ. ನಟ/ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಮ್ ರವಿ ಅವರು ತಮ್ಮ ಬಡತನದ ದಿನಗಳನ್ನು ಮೆಲುಕು ಹಾಕಿದರು. ತಾವು ಅನುಭವಿಸಿದ ಕಷ್ಟವನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಅಪೂರ್ವಾ ಅಭಿನಯಿಸಿದ್ದಾರೆ. ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಮೂಲಕ ಈ ಚಿತ್ರ ಮೇ 6ರಂದು ಬಿಡುಗಡೆ ಆಗುತ್ತಿದೆ. ಶ್ರೀಧರ್ ವಿ. ಸಂಭ್ರಮ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಪುರುಷೋತ್ತಮ’ ಚಿತ್ರದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಲು ಪ್ರಯತ್ನಿಸಿರುವುದಾಗಿ ಜಿಮ್ ರವಿ ಹೇಳಿದ್ದಾರೆ.
ಇದನ್ನೂ ಓದಿ:
ಕೊರೊನಾದಿಂದ ಸ್ನೇಹಿತನನ್ನ ಕಳೆದುಕೊಂಡು ಸ್ಮಶಾನದಲ್ಲಿ ಮರುಗಿದ ಜಿಮ್ ರವಿ
ಬ್ರೇಕಿಂಗ್ ನ್ಯೂಸ್ ನೀಡಿದ ‘ಹೊಂಬಾಳೆ ಫಿಲ್ಮ್ಸ್’: ಯುವ ರಾಜ್ಕುಮಾರ್ ಜತೆ ಹೊಸ ಸಿನಿಮಾ ಘೋಷಣೆ