Conversion; ಆಂಧ್ರಪ್ರದೇಶದಲ್ಲಿ ಮಾದಿಗ ಸಮುದಾಯದ ಶೇಕಡ 90 ಜನ ಮತಾಂತರಕ್ಕೊಳಗಾಗುತ್ತಿದ್ದಾರೆ: ಎ ನಾರಾಯಣಸ್ವಾಮಿ, ಕೇಂದ್ರ ಸಚಿವ
ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದರೆ ಮುಂದೆ ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ಪುನಃ ಜಾರಿಗೆ ತರುತ್ತದೆ ಎಂದು ನಾರಾಯಣಸ್ವಾಮಿ ಹೇಳಿದರು
ಚಿತ್ರದುರ್ಗ: ನೆರೆರಾಜ್ಯ ಆಂಧ್ರ ಪ್ರದೇಶದಲ್ಲಿ ಮಾದಿಗ ಸಮುದಾಯದ (Madiga community) ಶೇಕಡ 90 ರಷ್ಟು ಜನ ಮತಾಂತರಕ್ಕೊಳಗಾಗುತ್ತಿದ್ದಾರೆ (conversion) ಮತ್ತು ಕೇವಲ ಬಿರಿಯಾನಿಯ ಅಮಿಶವೊಡ್ಡಿ ಸಮುದಾಯದ ಜನರನ್ನು ಮತಾಂತರ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಕೇಂದ್ರ ಸಚಿವ ಎ ನಾರಾಯಣಸ್ವಾಮಿ (A Narayanaswamy) ಮಾಧ್ಯಮ ಪ್ರತಿನಿಧಿಗಳಿಗೆ ಇಂದು ನಗರದಲ್ಲಿ ತಿಳಿಸಿದರು. ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತಾಡಿದ ಸಚಿವರು ಕೇವಲ ಶೋಷಿತ ವರ್ಗದವರನ್ನೇ ಯಾಕೆ ಟಾರ್ಗೆಟ್ ಮಾಡಲಾಗುತ್ತದೆ ಎಂದು ಹೇಳಿದ ಸಚಿವರು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಶೇ 30 ರಷ್ಟು ಮತಾಂತರ ನಡೆಯುತ್ತಿವೆ ಎಂದರು. ಸಮುದಾಯದ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಸರ್ಕಾರ ಕಲ್ಪಿಸಿರುವ ಮೀಸಲಾತಿ ಹಾಗೂ ಇತರ ಸವಲತ್ತುಗಳನ್ನು ಕಳೆದುಕೊಳ್ಳುತ್ತಾರೆ ಎಂದ ಸಚಿವರು ಹೇಳುತ್ತಾರೆ. ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದರೆ ಮುಂದೆ ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ಪುನಃ ಜಾರಿಗೆ ತರುತ್ತದೆ ಎಂದು ನಾರಾಯಣಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ