AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತಾಂತರ ನಿಷೇಧ ಕಾಯ್ದೆ ರದ್ದು: ಯಾವುದೇ ಸ್ವಾಮೀಜಿ ಸ್ವಾಗತಿಸಿಲ್ಲ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ- ಆರ್​.ಅಶೋಕ್​ ವಾಗ್ದಾಳಿ

R Ashoka: ನಾಳೆ ಕರ್ನಾಟಕವನ್ನು ಮಾರುತ್ತೇವೆ ಅಂದ್ರೆ ಕೇಂದ್ರ ಸರ್ಕಾರ ಯೆಸ್ ಅನ್ನಬೇಕಾ? ಸಿದ್ದರಾಮಯ್ಯನವರೇ ಅಂದು ಕೇಂದ್ರ ಸರ್ಕಾರ ಕೊಟ್ಟ ಅನ್ನಭಾಗ್ಯ ಅಕ್ಕಿಗೆ ನಿಮ್ಮ ಸೀಲ್ ಹಾಕಿದ್ರಲ್ಲಾ ನಾಚಿಕೆ ಅಗಲ್ವಾ? ಒಂದು ವರ್ಷದಲ್ಲಿ ಈ ಸರ್ಕಾರ ದಿವಾಳಿ ಎದ್ದು ಹೋಗುತ್ತದೆ - ಆರ್​.ಅಶೋಕ್

ಮತಾಂತರ ನಿಷೇಧ ಕಾಯ್ದೆ ರದ್ದು: ಯಾವುದೇ ಸ್ವಾಮೀಜಿ ಸ್ವಾಗತಿಸಿಲ್ಲ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ- ಆರ್​.ಅಶೋಕ್​ ವಾಗ್ದಾಳಿ
ಮತಾಂತರ ನಿಷೇಧ ಕಾಯ್ದೆ ರದ್ದು: ಯಾವುದೇ ಸ್ವಾಮೀಜಿ ಸ್ವಾಗತಿಸಿಲ್ಲ- ಆರ್​.ಅಶೋಕ್​ ವಾಗ್ದಾಳಿ
ಸಾಧು ಶ್ರೀನಾಥ್​
|

Updated on:Jun 16, 2023 | 1:01 PM

Share

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಮತಾಂತರದ ರಾಯಭಾರಿಯಾಗಲು ಹೊರಟಿದ್ದಾರೆ ಎಂದು ಕಾಂಗ್ರೆಸ್​ ಸರ್ಕಾರದ (congress government) ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ (anti-conversion law) ರದ್ದು ನಿರ್ಧಾರದ ವಿರುದ್ಧ ಬೆಂಗಳೂರಿನಲ್ಲಿ ಮಾಜಿ ಸಚಿವ ಆರ್​.ಅಶೋಕ್ (r ashoka) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಆರ್ಚ್ ಬಿಷಪ್ ಮಾತ್ರ ಸ್ವಾಗತ ಮಾಡಿದ್ದಾರೆ. ಆದರೆ ಯಾವುದೇ ಸ್ವಾಮೀಜಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರಾ? ರಾಜ್ಯದಲ್ಲಿ ಈವರೆಗೆ 30-40 ಹಿಂದೂಗಳು ಮತಾಂತರ ಆಗಿದ್ದಾರೆ. ಆಸ್ಪತ್ರೆ, ಶಿಕ್ಷಣ, ಲವ್ ಜಿಹಾದ್ ಇವುಗಳಿಗಾಗಿ ಹಿಂದುಗಳು ಮತಾಂತರ ಆಗಿದ್ದಾರೆ. ಕಾಂಗ್ರೆಸ್ ನಿರ್ಧಾರ ಟಿಪ್ಪು ಸಿದ್ಧಾಂತಗಳಿಗೆ ಪೂರಕವಾಗಿದೆ ಎಂದು ಕಿಡಿಕಾರಿದ್ದಾರೆ. ತಮಗೆ ಮತ ಹಾಕಿದ ಒಂದು ವರ್ಗ ಸಂತೃಪ್ತಿಗೊಳಿಸಲು ಈ ನಿರ್ಧಾರ ಕೈಗೊಂಡಿದೆ. ಕಾಂಗ್ರೆಸ್ ವೋಟ್ ಗಾಗಿ ಯಾವ ಮಟ್ಟಕ್ಕಾದರೂ ಹೋಗಬಹುದು ಎಂಬ ಭಾವನೆ ಮೂಡಿದೆ. ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಅನ್ನಿಸ್ತಿದೆ. ಅದೇ ನಾವು ಅಧಿಕಾರದಲ್ಲಿದ್ದಾಗ ಈ ಕಾಯ್ದೆ ತಂದಿದ್ದೆವು. ಆಗ ಪಿಎಫ್ ಐ ಅಂತಹವರು ಬಿಟ್ಟು ಬೇರೆ ಯಾರೂ ವಿರೋಧ ಮಾಡಿಲ್ಲ. ಕಾಯ್ದೆ ವಾಪಸ್ ಪಡೆಯದಂತೆ ಬಿಜೆಪಿ ಆಗ್ರಹಿಸುತ್ತದೆ ಎಂದು ಅಶೋಕ್ ಹೇಳಿದರು.

ಬೆಂಗಳೂರಿನಲ್ಲಿ ಮಾಜಿ ಸಚಿವ ಅಶೋಕ್ ಇನ್ನೂ ಹೇಳಿದರು:

ನಾವು ಎಪಿಎಂಸಿ ಕಾಯ್ದೆ ಜಾರಿ ಮಾಡಿರುವುದರಲ್ಲಿ ಏನು ತಪ್ಪಿದೆ. ನಿಮಗೆ ಎಪಿಎಂಸಿಗೆ ಆದಾಯ ಬರೋದು ಮುಖ್ಯವೋ ರೈತರ ಜೇಬಿಗೆ ಹಣ ಬರೋದು ಮುಖ್ಯವೋ? ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವ ಹಿಂದೆ ಹುನ್ನಾರ ಇದೆಯಷ್ಟೆ. ನಾವು ತಕ್ಕಡಿಯನ್ನು ರೈತರ ಕೈಗೆ ಕೊಟ್ಟಿದ್ದೆವು. ಕಾಂಗ್ರೆಸ್ ಈಗ ದಳ್ಳಾಳಿಗಳ ರಾಜ್ಯ ಮಾಡಲು ಹೊರಟಿದೆ ಎಂದು ಅಶೋಕ್ ವಿಷಾದಿಸಿದರು.

ಏಕಾಏಕಿ ಶಾಲಾ ಪಠ್ಯ ಪರಿಷ್ಕರಣೆ ಒಳ್ಳೆಯದಲ್ಲ. ಪಠ್ಯ ಪರಿಷ್ಕರಣೆ ಮೂಲಕ ಮಕ್ಕಳಿಗೆ ಕೆಟ್ಟ ಸಂದೇಶ ಕೊಡುತ್ತಿದ್ದಾರೆ. ಏಕಾಏಕಿ ಪಠ್ಯಪುಸ್ತಕ ಪರಿಷ್ಕರಣೆ ಒಳ್ಳೆಯದಲ್ಲ. ಸಮಯ ಇದೆ, ನಿಧಾನವಾಗಿ ಪರಿಷ್ಕರಣೆ ಮಾಡಿ ಎಂದು ಅಶೋಕ್ ಸಲಹೆ ಕೊಟ್ಟರು.

ಒಂದು ವರ್ಷದಲ್ಲಿ ಈ ಸರ್ಕಾರ ದಿವಾಳಿ ಎದ್ದು ಹೋಗುತ್ತದೆ

ವಿದ್ಯುತ್ ಬಿಲ್ ಹೇಳುವಂತೆಯೇ ಇಲ್ಲ. 10 ರೂಪಾಯಿ ಕೊಟ್ಟು, 20 ರೂಪಾಯಿ ಕಿತ್ತುಕೊಳ್ಳುತ್ತಿದ್ದಾರೆ. ಅಂದು ಗ್ಯಾರಂಟಿ ಕಾರ್ಡ್ ಮೇಲೆ ಷರತ್ತು ಅನ್ವಯ ಅಂತಾ ಬರೆಯಬೇಕಿತ್ತು‌ ಎಂದು ಅಶೋಕ್ ವ್ಯಂಗ್ಯವಾಡಿದರು.

ಅನ್ನಭಾಗ್ಯ ಅಕ್ಕಿ ವಿಚಾರ ಸುರ್ಜೇವಾಲಾ ತಮ್ಮನ್ನು ತಾವು ಕರ್ನಾಟಕದ ಕ್ಯಾಬಿನೆಟ್ ಮಿನಿಸ್ಟರ್ ಅಂತಾ ತಿಳಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಅಂದ್ರೆ ಅತ್ತೆ ಮನೆ ಅಂತಾ ತಿಳಿದುಕೊಂಡಿದ್ದೀರಾ? ಕೇಂದ್ರ ಸರ್ಕಾರ ಕಾಂಗ್ರೆಸ್ ಅತ್ತೆ ಮನೆ ಅಲ್ಲ. ನಾಳೆ ಕರ್ನಾಟಕವನ್ನು ಮಾರುತ್ತೇವೆ ಅಂದ್ರೆ ಕೇಂದ್ರ ಸರ್ಕಾರ ಯೆಸ್ ಅನ್ನಬೇಕಾ? ಸಿದ್ದರಾಮಯ್ಯನವರೇ ಅಂದು ಕೇಂದ್ರ ಸರ್ಕಾರ ಕೊಟ್ಟ ಅನ್ನಭಾಗ್ಯ ಅಕ್ಕಿಗೆ ನಿಮ್ಮ ಸೀಲ್ ಹಾಕಿದ್ರಲ್ಲಾ ನಾಚಿಕೆ ಅಗಲ್ವಾ? ಒಂದು ವರ್ಷದಲ್ಲಿ ಈ ಸರ್ಕಾರ ದಿವಾಳಿ ಎದ್ದು ಹೋಗುತ್ತದೆ. ಜನ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯುತ್ ದರದಲ್ಲಿ ಮೋಸಗಾರರು ಯಾರು ಅಂತಾ ಜನಕ್ಕೆ ಗೊತ್ತಾಗಬೇಕು ಎಂದರು.

ಗ್ಯಾರಂಟಿ ಘೋಷಣೆ ಜಾರಿ ಮಾಡದೇ ಇದ್ದರೆ ಕಾಂಗ್ರೆಸ್ ಮನೆಗೆ ಹೋಗೋದು ಖಚಿತ:

ಅನ್ನ ಭಾಗ್ಯ ಸ್ಕೀಮ್​​ಗೆ ಅಗತ್ಯವಿರುವ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲವೆಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಳ್ಳುತ್ತದಂತೆ. ಅವರಿಗೆ ಶಾಮಿಯಾನ ವ್ಯವಸ್ಥೆ ಬೇಕಿದ್ದರೆ ಮಾಡುತ್ತೇವೆ. ಧಮ್, ತಾಕತ್​ ಇದ್ರೆ ಷರತ್ತುಗಳನ್ನು ತೆಗೆದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿ. ಆಮೇಲೆ ಬೇಕಿದ್ದರೆ ಬಿಜೆಪಿಯ ಧಮ್, ತಾಕತ್ ಪ್ರಶ್ನೆ ಮಾಡಲಿ. ಅವರ ಗ್ಯಾರಂಟಿ ಘೋಷಣೆ ಜಾರಿ ಮಾಡದೇ ಇದ್ದರೆ ಕಾಂಗ್ರೆಸ್ ಮನೆಗೆ ಹೋಗೋದು ಖಚಿತ. ನೀವು ಘೋಷಣೆ ಮಾಡುವಾಗ ಕೇಂದ್ರ ಸರಕಾರವನ್ನ ಕೇಳಿ ಮಾಡಿದ್ರಾ? ಅಣ್ಣಯ್ಯ ಡಿ.ಕೆ. ಶಿವಕುಮಾರ್ ನೀನು‌ ಕೊಟ್ಟ ಭರವಸೆ ಉಳಿಸಿಕೊಳ್ಳಿ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತೊಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಡಿ. ನಿಮಗೆ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ, ನಾವು ಮಾಡುತ್ತೇವೆ. 10 ಕೆಜಿ ಅಕ್ಕಿ ನೀವು ಘೋಷಣೆ ಮಾಡಿದ್ದಾ, ಕೇಂದ್ರ ಸರ್ಕಾರ ಮಾಡಿದ್ದಾ? ಏನೇ ಆಗಲೀ ಈ ಕಾಂಗ್ರೆಸ್​ ಸರ್ಕಾರ ಲೋಕಸಭೆ ಚುನಾವಣೆವರೆಗೆ ತಳ್ಳಿಕೊಂಡು ಹೋಗಬೇಕು ಅಷ್ಟೇ, ಅಮೇಲೆ ನಾನೊಂದು ತೀರ-ನೀನೊಂದು ತೀರ ಅಷ್ಟೇ ಈ ಕಾಂಗ್ರೆಸ್ ಮಂದಿ ಎಂದು ಆರ್. ಅಶೋಕ್ ಹೇಳಿದ್ದಾರೆ.

Published On - 12:50 pm, Fri, 16 June 23