ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ ಕೂಗಿದ ಎರಡು ಸಮುದಾಯಗಳು
ಈದ್ ಮಿಲಾದ್ ಮೆರವಣಿಗೆಯಲ್ಲಿ ಕೂಡಲಸಂಗಮ ಸ್ವಾಮೀಜಿ, ವಕೀಲರು ಎದುರಾದ ಘಟನೆ ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ನಡೆದಿದೆ. ಸ್ವಾಮೀಜಿ ಬರ್ತಿದ್ದಂತೆ ನಾರಹೈ ತಕ್ವಿರ್ ಅಲ್ಲಾ ಹುಂ ಅಕ್ಬರ್ ಎಂದು ಘೋಷಣೆ ಕೂಗಿದರೆ, ಇತ್ತ ಇವರು ಹರ ಹರ ಮಹಾದೇವ ಎಂದು ಘೋಷಣೆ ಕೂಗಿದರು.
ಬೆಳಗಾವಿ, ಸೆ.22: ಈದ್ ಮಿಲಾದ್ ಮೆರವಣಿಗೆಯಲ್ಲಿ ಕೂಡಲಸಂಗಮ ಸ್ವಾಮೀಜಿ, ವಕೀಲರು ಎದುರಾದ ಘಟನೆ ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ನಡೆದಿದೆ. ಸ್ವಾಮೀಜಿ ಬರ್ತಿದ್ದಂತೆ ನಾರಹೈ ತಕ್ವಿರ್ ಅಲ್ಲಾ ಹುಂ ಅಕ್ಬರ್ ಎಂದು ಘೋಷಣೆ ಕೂಗಿದರೆ, ಇತ್ತ ಇವರು ಹರ ಹರ ಮಹಾದೇವ ಎಂದು ಘೋಷಣೆ ಕೂಗಿದರು. ಬಳಿಕ ಮೆರವಣಿಗೆಯಲ್ಲಿದ್ದ ಯುವಕರನ್ನ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸಮಾಧಾನ ಪಡಿಸಿದರು. ನಂತರ ಬಸವ ಜಯಮೃತ್ಯಂಜಯ ಸ್ವಾಮೀಜಿ ಗಾಂಧಿ ಭವನದಿಂದ ನಡೆದುಕೊಂಡು ಬಂದು ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಈದ್ ಮಿಲಾದ್ ಮೆರವಣಿಗೆಯ ಡಿಜೆಗಳನ್ನ ಪೊಲೀಸರು ಬಂದ್ ಮಾಡಿಸಿದರು. ಬಳಿಕ ಹಾರ ಹಾಕಿಸಿ ಬಂದೋಬಸ್ತ್ನಲ್ಲಿ ಸ್ವಾಮೀಜಿಯನ್ನು ಪೊಲೀಸರು ಕಳುಹಿಸಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ