ಬೆಂಗಳೂರು: ATMನಲ್ಲಿ ಹಣ ಡ್ರಾ ಮಾಡಲು ಸಹಾಯ ಕೇಳುವಾಗ ಎಚ್ಚರ! ಮಾಯವಾಗುತ್ತೆ ನಿಮ್ಮ ಹಣ
ಬೆಂಗಳೂರಿನಲ್ಲಿ ಜನರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವ ಗ್ಯಾಂಗ್ವೊಂದು ಅಲರ್ಟ್ ಆಗಿದ್ದು, ಕ್ಷಣ ಮಾತ್ರದಲ್ಲಿ ನಿಮ್ಮ ಎಟಿಎಂ ಕಾರ್ಡ್ ಬದಲಾಯಿಸಿಕೊಂಡು ನಿಮ್ಮ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಾರೆ. ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು, ಆ.06: ಎಟಿಎಂ ಸೆಂಟರ್ಗಳನ್ನೆ ಟಾರ್ಗೆಟ್ ಮಾಡಿಕೊಂಡು ಬೆಂಗಳೂರಿನಲ್ಲಿ ಜನರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವ ಗ್ಯಾಂಗ್ವೊಂದು ಆ್ಯಕ್ಟೀವ್ ಆಗಿದೆ. ಕ್ಷಣ ಮಾತ್ರದಲ್ಲಿ ನಿಮ್ಮ ಎಟಿಎಂ ಕಾರ್ಡ್ ಬದಲಾಯಿಸಿಕೊಂಡು ನಿಮಗೆ ಮೋಸ ಮಾಡುತ್ತಾರೆ. ಹೌದು, ಉತ್ತರಹಳ್ಳಿಯ ಕೆನರಾ ಬ್ಯಾಂಕ್ಗೆ ಸಂಜಯ್ ಕುಮಾರ್ ಎಂಬಾತ ಒಂದೂವರೆ ಲಕ್ಷ ಹಣ ಡೆಪಾಸಿಟ್ ಮಾಡಿದ್ದ. ಅದರಂತೆ ಎಟಿಎಂ ಪಿನ್ ಚೇಂಜ್ ಮಾಡಲು ಪಕ್ಕದಲ್ಲೇ ಇದ್ದ ಎಟಿಎಂ ಗೆ ತೆರಳಿದ್ದಾನೆ. ಈ ವೇಳೆ ಪಿನ್ ಚೇಂಜ್ ಮಾಡಲು ಬರದಿದ್ದಾಗ ಅಲ್ಲೇ ಇದ್ದ ಇಬ್ಬರು ವ್ಯಕ್ತಿಗಳ ಸಹಾಯ ಕೇಳಿದ್ದ. ಅವರಿಗೆ ಎಟಿಎಂ ಕಾರ್ಡ್ ಕೊಟ್ಟು ಪಿನ್ ನಂಬರ್ ಅನ್ನು ಹೇಳಿದ್ದಾನೆ.
ಈ ವೇಳೆ ಕಾರ್ಡ್ ಬದಲಾಯಿಸಿಕೊಂಡು ಪಕ್ಕದಲ್ಲೇ ಇದ್ದ ಎಟಿಎಂ ನಿಂದ 75 ಸಾವಿರ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದು, ಈ ಬಗ್ಗೆ ಖಾತೆದಾರನಿಗೆ ಮೆಸೇಜ್ಗಳು ಬಂದಿದೆ. ಕೂಡಲೇ ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ಸಂಜಯ್ ದೂರು ನೀಡಿದ್ದಾರೆ. ಸದ್ಯ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದು, ವಿವೇಕ್ ಕುಮಾರ್(28),ಚುನಿ ಲಾಲ್ ಕುಮಾರ್ ಎಂದು ತಿಳಿದುಬಂದಿದೆ. ಈ ಬಂಧಿತರಿಂದ ಪೊಲೀಸರು, ವಿವಿಧ ಬ್ಯಾಂಕ್ನ 37 ಎಟಿಎಂ ಕಾರ್ಡ್ ಹಾಗೂ 75 ಸಾವಿರ ಹಣ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ