ಆಟೋಗೆ ಬೈಕ್ ಟಚ್; ಫುಡ್ ಡೆಲಿವರಿ ಬಾಯ್ ಮೇಲೆ ಮನಸೋ ಇಚ್ಛೆ ಹಲ್ಲೆ, ವಿಡಿಯೋ ವೈರಲ್​

ಕಿರಣ್ ಹನುಮಂತ್​ ಮಾದಾರ್

Updated on: Aug 20, 2024 | 3:44 PM

ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯ ಮಿಷಾಂಭ ದೇಗುಲದ ಸಿಗ್ನಲ್ ಬಳಿ ಇಂದು(ಮಂಗಳವಾರ) ಫುಡ್ ಡೆಲಿವರಿ ಬಾಯ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಫುಡ್ ಡೆಲಿವರಿಗೆ ಹೋಗುವಾಗ ಮುಂದೆ ಹೋಗುತ್ತಿದ್ದ ಆಟೋಗೆ ಬೈಕ್ ಟಚ್ ಆಗಿದೆ. ಇದೇ ವಿಚಾರಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಆ.20: ಫುಡ್ ಡೆಲಿವರಿ ಬಾಯ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯ ಮಿಷಾಂಭ ದೇಗುಲದ ಸಿಗ್ನಲ್ ಬಳಿ ಇಂದು(ಮಂಗಳವಾರ) ನಡೆದಿದೆ. ಫುಡ್ ಡೆಲಿವರಿಗೆ ಹೋಗುವಾಗ ಮುಂದೆ ಹೋಗುತ್ತಿದ್ದ ಆಟೋಗೆ ಬೈಕ್ ಟಚ್ ಆಗಿದೆ. ಇದೇ ವಿಚಾರಕ್ಕೆ ಆಟೋ ಚಾಲಕ ಮತ್ತು ಫುಡ್ ಡೆಲಿವರಿ ಬಾಯ್ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಮುಂದಿನ ಸಿಗ್ನಲ್ ಬಳಿ ಫುಡ್ ಡೆಲಿವರಿ ಬಾಯ್ ಹಿಡಿದು ಆಟೋ ಡ್ರೈವರ್ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಈ ಕುರಿತು ಡೆಲಿವರಿ ಬಾಯ್ ಬಾಯ್ ಕರೆದು ಜಯನಗರ ಠಾಣಾ ಪೊಲೀಸರು ಮಾಹಿತಿ ಪಡೆದಿದ್ದು, ಸದ್ಯ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಮದ್ಯ ಸೇವಿಸಿ ಹಲ್ಲೆ

ಇನ್ನು ಈ ಕುರಿತು ಸ್ಥಳೀಯರಾದ ನರಸಿಂಹ ಮೂರ್ತಿ ಮಾತನಾಡಿ, ‘ನಮ್ಮ ಅಂಗಡಿ ಮುಂದೆ ಬೆಳಗ್ಗೆ ಫುಡ್ ಡೆಲಿವರಿ ಬಾಯ್ ಮೇಲೆ ಮೂವರು ಹಲ್ಲೆ ಮಾಡಿದರು. ಆಟೋ ಚಾಲಕ ಮತ್ತು ಜೊತೆಗಿದ್ದವರು ಕುಡಿದು ಈ ಕೆಲಸ ಮಾಡಿದ್ದಾರೆ. ಆತನಿಗೆ ಹೊಡೆದು ಫುಡ್ ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿದರು. ಹೊಸ ಮುಖ, ನಮ್ಮ ಏರಿಯಾದವರಲ್ಲ. ಬೆಳಗ್ಗೆನೇ ಕುಡಿದಿದ್ರು
ರೀಸನ್ ಗೊತ್ತಿಲ್ಲ, ಹೊಡೆದು ಹೋದರು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us