ಶಿವರಾಮ ಕಾರಂತ ಬಿಡಿಎ ಜಾಗದಲ್ಲಿ ಮರಗಳ ಮೇಲೆ ಪ್ರಭಾವಿಗಳ ಕಣ್ಣು, ನೂರಾರು ಮರಗಳನ್ನು ಕ್ಷಣಾರ್ಧದಲ್ಲಿ ಕೊಚ್ಚಿಹಾಕಿದರು

| Updated By: ಸಾಧು ಶ್ರೀನಾಥ್​

Updated on: Aug 07, 2023 | 9:32 AM

ನೂರಾರು ಮರಗಳು.. ಹತ್ತಾರು ವರ್ಷದಿಂದ ಸೊಂಪಾಗಿ ಬೆಳೆದಿದ್ದ ಆ ಮರಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದ್ದವು.. ಸರ್ಕಾರಿ ಜಾಗದಲ್ಲಿದ್ದ ಅದೇ ಮರಗಳ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿತ್ತು.. ಅಷ್ಟೇ ನಡೆದಿದ್ದು ಮಾರಣಹೋಮ..

ನೂರಾರು ಮರಗಳು.. ಹತ್ತಾರು ವರ್ಷದಿಂದ ಸೊಂಪಾಗಿ ಬೆಳೆದಿದ್ದ ಆ ಮರಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದ್ದವು.. ಸರ್ಕಾರಿ ಜಾಗದಲ್ಲಿದ್ದ ಅದೇ ಮರಗಳ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿತ್ತು.. ಅಷ್ಟೇ ನಡೆದಿದ್ದು ಮಾರಣಹೋಮ.. ಇಷ್ಟು ದಿನ ಸೊಂಪಾಗಿ ಬೆಳೆದಿದ್ದ ಮರಗಳು ಹೀಗೆ ನೆಲಕಚ್ಚಿವೆ (Tree Cutting) ವಿಡಿಯೋ ನೋಡಿ.. ಹಾಗಂತ ಇದೇನು ಅಭಿವೃದ್ಧಿ ಹೆಸರಲ್ಲಿ ನಡೆದಿರೋ ಮಾರಣಹೋಮವಲ್ಲ.. ಬಿಡಿಎ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನಲ್ಲೇ ಬೆಳೆಸಲಾಗಿದ್ದ ತೇಗ ಸಿಲ್ವರ್ ಜಾತಿಯ ಬೆಲೆ ಬಾಳುವ ವೃಕ್ಷಗಳು.. ಬೆಂಗಳೂರು ಉತ್ತರ ತಾಲೂಕಿನ ಶಿವರಾಮ ಕಾರಂತ ಬಿಡಿಎ ಜಾಗದಲ್ಲಿ (Bengaluru Uttar taluk Shivaram karanth BDA area) ಬೆಳೆದಿದ್ದ ಇದೇ ಮರಗಳ ಮೇಲೆ ಪ್ರಭಾವಿಗಳ ಕಣ್ಣು ಬಿದ್ದು ಈಗ ಮರಗಳೆಲ್ಲಾ ಧರೆಯ ಪಾಲಾಗಿವೆ..

ಹತ್ತಕ್ಕೂ ಹೆಚ್ಚು ಜನ ದುಷ್ಕರ್ಮಿಗಳು ಮರಗಳನ್ನು ಮಾರಿಕೊಳ್ಳಲು ವುಡ್ ಕಟರ್​ ಮಷಿನ್ ಬಳಸಿ ಕ್ಷಣಾರ್ಧದಲ್ಲೇ ಕಡಿದಿದ್ದಾರೆ.. ಸ್ಥಳೀಯರಾದ ಕುಮಾರ್ ಅನ್ನೋರು ಅನುಮಾನ ಬಂದು ಕೂಡಲೇ ಅಧಿಕಾರಿಗೆ ಮಾಹಿತಿ ತಿಳಿಸಿದ್ದಾರೆ.. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಬಿಡಿಎ ಸಿಬ್ಬಂದಿ ಓಡೋಡಿ ಬಂದಿದ್ದಾರೆ.. ಆದರೆ ಅಧಿಕಾರಿಗಳನ್ನ ನೋಡಿದ ಗುಂಪು ಮರಗಳನ್ನ ಅಲ್ಲೇ ಬಿಟ್ಟು ಎಸ್ಕೇಪ್ ಆಗಿದೆ.. ಇನ್ನು ಈ ಕೃತ್ಯದ ಹಿಂದೆ ಸ್ಥಳೀಯ ಬಿಜೆಪಿ ಶಾಸಕ ಎಸ್.ಮುನಿರಾಜು ಕೈವಾಡದ ಶಂಕೆ ವ್ಯಕ್ತವಾಗಿದೆ.. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿಯೂ ಆಗಿರುವ ಮರಿಸ್ವಾಮಿ ಅವರ ಒಡೆತನದ ಟಿಂಬರ್ ಕಾರ್ಮಿಕರು ಈ ಕೃತ್ಯ ಎಸಗಿರುವ ಆರೋಪ‌ಕೇಳಿ ಬಂದಿದೆ.

ಈ ಜಾಗವನ್ನ ಬಿಡಿಎ ಸ್ವಾಧೀನ ಪಡಿಸಿಕೊಂಡಿದ್ದರೂ ಕ್ಯಾರೆ ಎನ್ನದ ಜನಪ್ರತಿನಿಧಿಗಳು ಮರಗಳ ಮೇಲೆ ಕಣ್ಣಾಕಿದ್ದಾರೆ ಎನ್ನಲಾಗಿದೆ.. 10 ಜನ ಕಾರ್ಮಿಕರು, ಐದು ಮರ ಕತ್ತರಿಸುವ ಯಂತ್ರಗಳನ್ನ ಬಳಸಿ ಸುಮಾರು 70 ಮರಗಳ ಕಟಾವು ಮಾಡಿದ್ದಾರೆ.. ಈ ಹಿಂದೆ ಮರಕಡಿಯುವ ಬಗ್ಗೆ ಮಾಹಿತಿ ಪಡೆದಿದ್ದ ಸ್ಥಳೀಯರು ಬಳಿಕ ರಾಜ್ಯ ಅರಣ್ಯ ಇಲಾಖೆಗೆ ದೂರು ನೀಡಿದ್ದರು.. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳ ಸರ್ವೆ, ಭೂಮಿ ಸರ್ವೆ ಮಾಡಿ ನಂಬರ್ ದಾಖಲಿಸಿದ್ದರು.. ಆದ್ರೆ ಜನಪ್ರತಿನಿಧಿಗಳೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಮರಗಳ ಕಟಾವು ಮಾಡಿದ್ದಾರೆ ಎನ್ನಲಾಗಿದೆ.. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿಂಬರ್‌ಗಾಗಿ ಮರ ಕಟಾವು ಮಾಡಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ… ಆದ್ರೆ ಈ ಅರೋಪವನ್ನ ಮರಿ ಸ್ವಾಮಿ ತಳ್ಳಿಹಾಕಿದ್ದಾರೆ..

ಇಲ್ಲಿ ಜನಪ್ರತಿನಿಧಿಗಳ ಕೈವಾಡವಿದೆಯೋ ಅಥವಾ ಮರಗಳ್ಳರೇ ಕೃತ್ಯ ಎಸಗಿದ್ರಾ ಅನ್ನೋ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯಬೇಕಿದೆ.. ಹಾಗೆ ಯಾರೇ ಕೃತ್ಯ ಎಸಗಿದ್ರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.. ಇಲ್ಲದಿದ್ರೆ ರಾತ್ರೋರಾತ್ರಿ ಮತ್ತಷ್ಟು ಮರಗಳು ಮಾಯವಾದ್ರೂ ಅಚ್ಚರಿ ಪಡಬೇಕಿಲ್ಲ..

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 am, Mon, 7 August 23

Follow us on