ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​

|

Updated on: Jun 15, 2024 | 4:04 PM

ಸಫಾರಿ ಕಾರಿನಲ್ಲಿ ಬಿಡಾಡಿ ದನ ಕಳ್ಳತನ ಮಾಡಲು ಯತ್ನಿಸಿದ ಘಟನೆ ಗದಗ(Gadag) ನಗರದ ಶಹಪುರಪೇಟೆಯಲ್ಲಿ ನಿನ್ನೆ(ಜೂ.14) ರಾತ್ರಿ ನಡೆದಿದೆ. ಸಫಾರಿ ಕಾರಿನಲ್ಲಿ ಬರುವ ಇಬ್ಬರು ದನ ಕಳ್ಳರು ಬಿಡಾಡಿ ದನವನ್ನ ಕಾರ್​ನ ಡಿಕ್ಕಿಯಲ್ಲಿ ಹಾಕಲು ಪ್ರಯತ್ನಪಟ್ಟಿದ್ದಾರೆ. ಖದೀಮರ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಗದಗ, ಜೂ.15: ಸಫಾರಿ ಕಾರಿನಲ್ಲಿ ಬಿಡಾಡಿ ದನ ಕಳ್ಳತನ ಮಾಡಲು ಯತ್ನಿಸಿದ ಘಟನೆ ಗದಗ(Gadag) ನಗರದ ಶಹಪುರಪೇಟೆಯಲ್ಲಿ ನಿನ್ನೆ(ಜೂ.14) ರಾತ್ರಿ ನಡೆದಿದೆ. ಸಫಾರಿ ಕಾರಿನಲ್ಲಿ ಬರುವ ಇಬ್ಬರು ದನ ಕಳ್ಳರು ಬಿಡಾಡಿ ದನವನ್ನ ಕಾರ್​ನ ಡಿಕ್ಕಿಯಲ್ಲಿ ಹಾಕಲು ಪ್ರಯತ್ನಪಟ್ಟಿದ್ದಾರೆ. ದನಗಳು ರಸ್ತೆಯಲ್ಲಿ ಮಲಗಿದ್ದನ್ನ ನೋಡಿಕೊಂಡು, ಸಫಾರಿ ಕಾರ್ ನಿಲ್ಲಿಸಿ ಡಿಕ್ಕಿಯಲ್ಲಿ ಬಿಡಾಡಿ ದನವನ್ನ ಹತ್ತಿಸಲು ಹರಸಾಹಸ ಪಟ್ಟಿದ್ದಾರೆ. ಕೊಸರಿಕೊಂಡು ಹೊಗುವ ದನವನ್ನ ಹತ್ತಿಸಲು ಕೆಲ ಹೊತ್ತು ಪ್ರಯತ್ನಿಸಿದರೂ ಆಗದ ಹಿನ್ನಲೆ ನಂತರ ಕಾರ್ ಡಿಕ್ಕಿಯಲ್ಲಿ ಹತ್ತದ ದನವನ್ನ ಬಿಟ್ಟು ಹೋಗಿದ್ದಾರೆ. ಬಳಿಕ ಬೇರೆಡೆಯಿಂದ ದನ ಕಳ್ಳತನ ಮಾಡಿ ಹೋಗಿರುವ ಬಗ್ಗೆ ಅನುಮಾನ ಮೂಡಿದೆ. ಖದೀಮರ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Sat, 15 June 24

Follow us on