ಹಾವೇರಿ: ಕೈಯಲ್ಲೇ ಬ್ಲಾಸ್ಟ್ ಆಯ್ತು ಮೊಬೈಲ್; ಇಬ್ಬರು ಯುವಕರು ಜಸ್ಟ್​ ಮಿಸ್​, ವಿಡಿಯೋ ವೈರಲ್​

ಹಾವೇರಿ: ಕೈಯಲ್ಲೇ ಬ್ಲಾಸ್ಟ್ ಆಯ್ತು ಮೊಬೈಲ್; ಇಬ್ಬರು ಯುವಕರು ಜಸ್ಟ್​ ಮಿಸ್​, ವಿಡಿಯೋ ವೈರಲ್​

ಕಿರಣ್ ಹನುಮಂತ್​ ಮಾದಾರ್
|

Updated on: Aug 01, 2024 | 7:06 PM

ಒಂದು ಕ್ಷಣವೂ ಕೂಡ ಮೊಬೈಲ್​ ಬಿಟ್ಟು ಇರಲಾರದಷ್ಟು ನಾವು ಅಡಿಕ್ಟ್​ ಆಗಿದ್ದೇವೆ. ಆದರೆ, ಅದೇ ಫೋನ್​ ಎಷ್ಟು ಅಪಾಯಕಾರಿ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹೌದು, ಹಾವೇರಿ(Haveri) ತಾಲೂಕಿನ ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ ಶಾಪ್ ಮುಂದೆ ಕೈಯಲ್ಲಿ ಹಿಡಿದುಕೊಂಡಿದ್ದ ಮೊಬೈಲ್ ಬ್ಲಾಸ್ಟ್ ಆಗಿದ್ದು, ಇಬ್ಬರು ಯುವಕರು ಕೊದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಹಾವೇರಿ, ಆ.01: ಇಬ್ಬರು ಯುವಕರು ಮೊಬೈಲ್​ ಹಿಡಿದುಕೊಂಡು ನೋಡುತ್ತಿದ್ದಾಗ ಕೈಯಲ್ಲಿಯೇ ಬ್ಲಾಸ್ಟ್ ಆಗಿದ್ದು, ಸ್ವಲ್ಪದರಲ್ಲೇ ಯುವಕರು ಅಪಾಯದಿಂದ ಪಾರಾಗಿದ್ದಾರೆ. ಹಾವೇರಿ(Haveri) ತಾಲೂಕಿನ ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ ಶಾಪ್ ಮುಂದೆ ಈ ಘಟನೆ ನಡೆದಿದೆ. ಮೊಬೈಲ್ ರಿಪೇರಿ ಸಂದರ್ಭದಲ್ಲಿ ಅದನ್ನು ಕೈಯಲ್ಲಿ ಹಿಡಿದುಕೊಂಡು ಇಬ್ಬರು ಯುವಕರು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ  ಕೈಯಲ್ಲೇ ಪಟಾಕಿಯಂತೆ ಮೊಬೈಲ್ ಸಿಡಿದಿದೆ. ಇನ್ನು ಬ್ಲಾಸ್ಟ್ ಆದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ