ವಾಮಾಚಾರ: ಚಲಿಸಿದ ಮನೆ ಮುಂದೆ ಎಸೆದ ಬೆಲ್ಲ, ನಿಂಬೆಹಣ್ಣು ಇದ್ದ ಪೊಟ್ಟಣ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಿರಣ್ ಹನುಮಂತ್​ ಮಾದಾರ್

Updated on: Jul 14, 2024 | 7:36 PM

ಶಿವಮೊಗ್ಗ(Shivamogga)ದ ಮನೆಯೊಂದರ ಬಳಿ ವಾಮಾಚಾರ ನಡೆದಿದೆ ಎನ್ನಲಾದ ಲಿಂಬೆಹಣ್ಣು ಮತ್ತು ಬೆಲ್ಲವಿದ್ದ ಪೊಟ್ಟಣ ಚಲಿಸಿದ್ದನ್ನು ನೋಡಿ ಮನೆಯ ಕುಟುಂಬಸ್ಥರು ಭಯಭೀತರಾದ ಘಟನೆ ನಡೆದಿದೆ. ವಾಮಾಚಾರದ ಪೊಟ್ಟಣ ಚಲಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ, ಜು.14: ವಾಮಾಚಾರ ನಡೆದಿದೆ ಎನ್ನಲಾದ ಲಿಂಬೆಹಣ್ಣು ಮತ್ತು ಬೆಲ್ಲವಿದ್ದ ಪೊಟ್ಟಣ ಚಲಿಸಿದ್ದನ್ನು ನೋಡಿ ಮನೆಯ ಕುಟುಂಬಸ್ಥರು ಭಯಭೀತರಾದ ಘಟನೆ ಶಿವಮೊಗ್ಗ(Shivamogga) ನಗರದ ಕಾಶಿಪುರದ ಎರಡನೇ ತಿರುವಿನಲ್ಲಿರುವ ಕಾಶಿಪುರದ ನಿವಾಸಿ ರವಿಕುಮಾರ್ ಹನುಮಂತಪ್ಪ ಮನೆ ಮುಂದೆ ನಡೆದಿದೆ. ಟಿವಿಎಸ್ ಬೈಕ್​ನಲ್ಲಿ ಬಂದ ಪುರುಷ ಹಾಗೂ ಮಹಿಳೆ,  ನಿಂಬೆಹಣ್ಣು ಹಾಗೂ ಬೆಲ್ಲದ ಪೊಟ್ಟಣವನ್ನು ಎಸೆದು ಹೋಗಿದ್ದಾರಂತೆ.

ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದ ವಾಮಾಚಾರ

ಬಳಿಕ ಎಂದಿನಂತೆ ರವಿ ಕುಮಾರ್ ಪುತ್ರಿ ತುಳಸಿ ಪೂಜೆ ಮಾಡುವ ವೇಳೆ ವಾಮಾಚಾರ ಮಾಡಿದ ಬೆಲ್ಲ ಹಾಗೂ ನಿಂಬೆಹಣ್ಣು ಇದ್ದ ಪೊಟ್ಟಣ ಚಲಿಸಿದೆ. ವಾಮಾಚಾರದ ಪೊಟ್ಟಣ ಚಲಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೃಶ್ಯ ಗಮನಿಸುತ್ತಿದ್ದಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ ಕುಟುಂಬಸ್ಥರು, ವಾಮಾಚಾರ ಮಾಡಿವವರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us