ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಶೋ ರೂಮ್‌ನವರು ಹಳೆ ಬೈಕ್‌ಗೆ ಬಣ್ಣ ಬಳಿದು ರೈತನಿಗೆ ಕೊಟ್ಟರಾ ಎಂಬ ಅನುಮಾನ ಮೂಡಿದೆ. ಹೌದು, ತುಮಕೂರು(Tumakuru) ನಗರದ ಸಾಯಿ ಹೀರೋ ಶೋ ರೂಮ್‌ನವರು ಮೋಸ ಮಾಡಿದ್ದೇರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆ ರೈತ ಶೋ ರೂಮ್ ಗೆ ತೆರಳಿ ಸಿಬ್ಬಂದಿಯ ಮೇಲೆ ಜಗಳ ಮಾಡಿದ್ದಾರೆ.
ತುಮಕೂರು, ಸೆ.19: ಶೋ ರೂಮ್‌ನವರು ಹಳೆ ಬೈಕ್‌ಗೆ ಬಣ್ಣ ಬಳಿದು ರೈತನಿಗೆ ಕೊಟ್ಟರಾ ಎಂಬ ಅನುಮಾನ ಮೂಡಿದೆ. ಹೌದು, ತುಮಕೂರು(Tumakuru) ನಗರದ ಸಾಯಿ ಹೀರೋ ಶೋ ರೂಮ್‌ನವರು ಮೋಸ ಮಾಡಿದ್ದೇರೆಂಬ ಆರೋಪ ಕೇಳಿಬಂದಿದೆ. ನಗರದ ಶಿರಾ ಗೇಟ್‌ನಲ್ಲಿರುವ ಸಾಯಿ ಹೀರೋ ಬೈಕ್ ಶೋರೂಮ್ನಲ್ಲಿ ರೈತ ಅನಂತಕುಮಾರ್ ಎಂಬುವವರು 1,11,000 ರೂ. ಬೆಲೆಯ ಸೂಪರ್ ಸ್ಪೆಂಡರ್ ಹೊಸ ಬೈಕನ್ನ ಖರೀದಿ ಮಾಡಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಇದು ಬಳಕೆ ಮಾಡಿದ ಬೈಕ್ ಎಂದು ಗೊತ್ತಾಗಿದೆ. ಇದೀಗ ಹೊಸ ಬೈಕ್ ಬದಲಿಗೆ ಹಳೆ ಬೈಕ್ ಕೊಟ್ಟಿದ್ದಾರೆಂದು ಆರೋಪಿಸಿ, ರೈತ ಶೋ ರೂಮ್ ಗೆ ತೆರಳಿ ಸಿಬ್ಬಂದಿಯ ಮೇಲೆ ಜಗಳ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 19, 2024 10:26 PM