ಓಲಾ, ಉಬರ್​ ಬ್ಯಾನ್, ಮುಂದಿನ ಜೀವನ ಗೊತ್ತಿಲ್ಲ: ಆಟೋ ಚಾಲಕ ಮುತ್ತುರಾಜ್​ ಬಿಚ್ಚಿಟ್ರು ಅಸಲಿ ಕಹಾನಿ

ಬೆಂಗಳೂರಿನಲ್ಲಿ ಇತ್ತೀಚೆಗೆ ಓಲಾ ಆಟೋ ಬುಕ್ಕಿಂಗ್ ರದ್ದು ಮಾಡಿದರು ಎಂದು ಯುವತಿ ಮೇಲೆ ರೇಗಾಡಿ, ಅಶ್ಲೀಲ ಪದಗಳಿಂದ ನಿಂದನೆ ಆರೋಪದಲ್ಲಿ ಬಂಧನಕೊಳ್ಳಗಾಗಿದ್ದ ಆಟೋ ಚಾಲಕ ಮುತ್ತುರಾಜ್​ಗೆ ಜಾಮೀನು ಸಿಕ್ಕಿದ್ದು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಸದ್ಯ ಓಲಾ, ಉಬರ್​ಗಳಂತಹ ಆ್ಯಪ್​ಗಳು ಅವರನ್ನು ಬ್ಯಾನ್ ಮಾಡಿದ್ದು, ಅಂದು ನಡೆದ ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿದ್ದಾರೆ.

ಓಲಾ, ಉಬರ್​ ಬ್ಯಾನ್, ಮುಂದಿನ ಜೀವನ ಗೊತ್ತಿಲ್ಲ: ಆಟೋ ಚಾಲಕ ಮುತ್ತುರಾಜ್​ ಬಿಚ್ಚಿಟ್ರು ಅಸಲಿ ಕಹಾನಿ
ಓಲಾ, ಉಬರ್​ ಬ್ಯಾನ್, ಮುಂದಿನ ಜೀವನ ಗೊತ್ತಿಲ್ಲ: ಆಟೋ ಚಾಲಕ ಮುತ್ತುರಾಜ್​ ಬಿಚ್ಚಿಟ್ರು ಅಸಲಿ ಕಹಾನಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Sep 16, 2024 | 8:41 PM

ಬೆಂಗಳೂರು, ಸೆಪ್ಟೆಂಬರ್​ 16: ಓಲಾ ಆಟೋ ಬುಕ್ಕಿಂಗ್ ರದ್ದು ಮಾಡಿದ್ದಕ್ಕೆ ಕೋಪಗೊಂಡು ಯುವತಿ ಮೇಲೆ ಆಟೋ ಚಾಲಕ (Auto Driver) ಹಲ್ಲೆ ನಡೆಸಿದ್ದ ಘಟನೆ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಯುವತಿ ದೂರು ಆಧರಿಸಿ ಆಟೋ ಚಾಲಕ ಮುತ್ತುರಾಜ್​ರನ್ನು ಪೊಲೀಸರು ಬಂಧಿಸಿದ್ದರು. ಅಂದು ಲಾಯರ್ ಖರ್ಚು ಸೇರಿ ಜಾಮೀನಿಗಾಗಿ ಹಣ ಹೊಂದಿಸಲು ಪರದಾಡಿದ್ದ ಆಟೋ ಚಾಲಕ ಇದೀಗ ಜಾಮೀನು ಸಿಕ್ಕಿದ್ದು  ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಘಟನೆ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಆಟೋ ಚಾಲಕ ಮುತ್ತುರಾಜ್​ ಜೈಲಿನಿಂದ ಬಿಡುಗಡೆ ಬಳಿಕ ಯೂಟ್ಯೂಬ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅಂದು ನಡೆದ ಘಟನೆಯ ಅಸಲಿಯತ್ತು ಬಿಚ್ಚಿಟ್ಟಿದ್ದಾರೆ. ಲೊಕೇಷನ್​ಗೆ ಹೊಗುವುದಕ್ಕೂ ಮುಂಚೆ ಪ್ರಯಾಣಿಕರಿಗೆ ಕಾಲ್ ಮಾಡಿದಾಗ ಬನ್ನಿ ಬಯ್ಯಾ ಎಂದರು. ಲೊಕೇಷನ್​ಗೆ ಹೋಗಿ ಕಾಯುತ್ತಿದ್ದೆ. ಐದು ನಿಮಿಷ ಬಿಟ್ಟು ಇಬ್ಬರು ಯುವತಿಯರು ಬಂದರು. ನಾನು ನಿಂತಿದ್ದ ಜಾಗದಿಂದ ಸ್ಪಲ್ಪ ದೂರದಲ್ಲಿ ನಿಂತಿದ್ದ ಇನ್ನೊಂದು ಆಟೋವನ್ನು ಹತ್ತಿದರು. ಬಳಿಕ ಅವರಿಗೆ ಕಾಲ್​ ಮಾಡಿದಾಗ ಕಟ್​ ಮಾಡಿದ್ದು ಕೂಡಲೇ ಬುಕಿಂಗ್​ ರದ್ದು ಮಾಡಿದ್ದಾರೆ ಎಂದು ಮುತ್ತುರಾಜ್ ಹೇಳಿದ್ದಾರೆ.

ಇದನ್ನೂ ಓದಿ: ಯುವತಿ ಜೊತೆ ಗಲಾಟೆ: ಲಾಯರ್ ಖರ್ಚು ಸೇರಿ ಜಾಮೀನಿಗಾಗಿ ಹಣ ಹೊಂದಿಸಲು ಆಟೋ ಚಾಲಕನ ಪೀಕಲಾಟ

ಯುವತಿಯರು ಹತ್ತಿದ್ದ ಇನ್ನೊಂದು ಆಟೋ ಬಳಿ ಹೋಗಿ ವಿಚಾರಿಸಿದ್ದಾಗ ಬುಕ್ಕಿಂಗ್ ಮಾಡಿದ್ದು ಅವರೇ ಎಂದು ಗೊತ್ತಾಗಿದೆ. ಯಾಕೆ ರದ್ದು ಮಾಡಿದ್ದು ಎಂದು ಪ್ರಶ್ನಿಸಿದ್ದಕ್ಕೆ ನನ್ನ ಇಷ್ಟ, ನೀವ್ಯಾರು ಕೇಳುವುದಕ್ಕೆ ಎಂದಿದ್ದಾರೆ. ಆಗ ತಾವು ಕೂಡ ಕೋಪಗೊಂಡ ಬಗ್ಗೆ ತಿಳಿಸಿದ್ದಾರೆ.

ಘಟನೆ ವೇಳೆ ಅವರು ಪೊಲೀಸರಿಗೆ ಫೋನ್ ಮಾಡಬಾರದು ಎಂದು ಫೋನ್ ಕಿತ್ತುಕೊಂಡೆ. ಆದರೆ ಯುವತಿಗೆ ಹೊಡೆದಿದ್ದೇನೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ ಏಕೆಂದರೆ ನಾನು ಯುವತಿ ಫೋನ್ ಕಿತ್ತುಕೊಳ್ಳಬಾರದಿತ್ತು ಎಂದಿದ್ದಾರೆ.

ಇದನ್ನೂ ಓದಿ: ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯವತಿ ಮೇಲೆ ರೇಗಾಡಿದ ಆಟೋ ಚಾಲಕ, ಅಶ್ಲೀಲ ಪದಗಳಿಂದ ನಿಂದನೆ

ಈ ಘಟನೆ ಬಳಿಕ ಆಟೋ ಚಾಲಕ ಮುತ್ತುರಾಜ್​ರನ್ನು ಓಲಾ, ಉಬರ್​ಗಳಂತಹ ಆ್ಯಪ್​ಗಳು ಅವರನ್ನು ಬ್ಯಾನ್ ​ಮಾಡಿವೆ. ಕೆಲ ಬೆದರಿಕೆ ಕರೆಗಳು ಕೂಡ ಮುತ್ತುರಾಜ್ ಅವರಿಗೆ ಬಂದಿವೆ ಎಂದಿದ್ದಾರೆ. ಮುಂದಿನ ಜೀವನ ಗೊತ್ತಿಲ್ಲ, ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ. ಇದು ಬಾಡಿಗೆ ಆಟೋ. ನನ್ನ ಮಾಲೀಕರು ಖಂಡಿತ ನನಗೆ ಆಟೋ ನೀಡುವುದಿಲ್ಲ. ಹೀಗಾಗಿ ಇದಕ್ಕೆ ಪೊಲೀಸರೇ ಪರಿಹಾರ ಸೂಚಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:34 pm, Mon, 16 September 24

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ