ಯುವತಿ ಜೊತೆ ಗಲಾಟೆ: ಲಾಯರ್ ಖರ್ಚು ಸೇರಿ ಜಾಮೀನಿಗಾಗಿ ಹಣ ಹೊಂದಿಸಲು ಆಟೋ ಚಾಲಕನ ಪೀಕಲಾಟ
ಬುಕ್ ಮಾಡಿದ್ದ ಆಟೋ ರದ್ದು ಮಾಡುವುದಕ್ಕೆ ಚಾಲಕನ ಕಿರಿಕಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಜೊತೆ ಪುಂಡಾಟ ಮಾಡಿದ್ದ ಆಟೋ ಚಾಲಕನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೆ. 4ರಂದು ನಗರದಲ್ಲಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಬಳಿಕ ಯುವತಿ ಕರೆಸಿ ಪೊಲೀಸರು ದೂರು ಪಡೆದಿದ್ದರು.
ಬೆಂಗಳೂರು, ಸೆಪ್ಟೆಂಬರ್ 07: ಓಲಾ ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ರು ಅನ್ನೋ ಕಾರಣಕ್ಕೆ ಯುವತಿ ಮೇಲೆ ಆಟೋ ಚಾಲಕ (auto driver) ಎರ್ರಾಬಿರ್ರಿ ದರ್ಪ ಮೆರೆದಿದ್ದು, ಅಷ್ಟೇ ಅಲ್ಲದೇ ಅವಾಚ್ಯ ಶಬ್ದದಿಂದ ನಿಂದಿಸಿದ್ದ ಘಟನೆ ನಗರದಲ್ಲಿ ನಡೆದಿತ್ತು. ಘಟನೆ ಬಳಿಕ ಯುವತಿ ಕರೆಸಿ ಪೊಲೀಸರು ದೂರು ಪಡೆದಿದ್ದರು. ಈ ಸಂಬಂಧ 5ರಂದು ಆಟೋ ಚಾಲಕನನ್ನು ಮಾಗಡಿರೋಡ್ ಪೊಲೀಸರು ಬಂಧಿಸಿದ್ದು, ನಿನ್ನೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಟೋ ಚಾಲಕ ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಗಲಾಟೆ ಮಾಡಿದ್ದರು. ಆಟೋ ಚಾಲಕ ಮುತ್ತುರಾಜ್ ಒಂದು ರೈಡ್ಗಾಗಿ ಜಗಳ ಮಾಡಿ ಈಗ ಫಜೀತಿಗೆ ಸಿಲುಕಿದ್ದಾರೆ. ಲಾಯರ್ ಖರ್ಚು ಸೇರಿ ಜಾಮೀನಿನ ಪ್ರಕ್ರಿಯೆಗೆ ಅಂದಾಜು 30 ಸಾವಿರ ಹೊಂದಿಸಬೇಕು. ಆದರೆ ಈಗ 30 ಸಾವಿರ ರೂ. ಹೊಂದಿಸಲು ಪೀಕಲಾಟ ನಡೆಸಿದ್ದಾರೆ.
ಯುವತಿ ಕೊಟ್ಟ ದೂರಿನಲ್ಲಿದೆ?
ರಾಜಾಜಿನಗರದ 6ನೇ ಬ್ಲಾಕ್ಗೆ ಬಂದಿದ್ದ ಯುವತಿ ಹಾಗೂ ಆಕೆ ಸ್ನೇಹಿತೆ. ಹೊರಡುವಾಗ ಯುವತಿ ಮತ್ತು ಆಕೆ ಸ್ನೇಹಿತಿಯಿಂದ ಪ್ರತ್ಯೇಕ ಆಟೋಗಳು ಬುಕ್ ಮಾಡಲಾಗಿದೆ. ಈ ವೇಳೆ ದೂರುದಾರೆ ಬುಕ್ ಮಾಡಿದ ಆಟೋ ಮೊದಲು ಬಂದಿದೆ. ಆಕೆಯ ಗೆಳತಿಯ ಬುಕ್ಕಿಂಗ್ ಕ್ಯಾನ್ಸಲ್ ಮಾಡಿ ಮೊದಲು ಬಂದಿದ್ದ ಆಟೋ ಹತ್ತಿದ್ದರು. ಕ್ಯಾನ್ಸಲ್ ಮಾಡಿದ ಬಳಿಕ ಗೆಳತಿ ಬುಕ್ ಮಾಡಿದ್ದ ಆಟೋ ಸ್ಥಳಕ್ಕೆ ಬಂದಿದೆ.
ಇದನ್ನೂ ಓದಿ: ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯವತಿ ಮೇಲೆ ರೇಗಾಡಿದ ಆಟೋ ಚಾಲಕ, ಅಶ್ಲೀಲ ಪದಗಳಿಂದ ನಿಂದನೆ
ಕ್ಯಾನ್ಸಲ್ ಮಾಡಿದ್ದಕ್ಕೆ ಕೋಪಗೊಂಡು ಚಾಲಕ ಮುತ್ತಪ್ಪನಿಂದ ಅವಾಚ್ಯ ಶಬ್ದದಿಂದ ನಿಂದಿಸಲಾಗಿದೆ. ಆಟೋ ಏನು ನಿಮ್ಮ ಅಪ್ಪಂದಾ? ಗ್ಯಾಸ್ಗೆ ಹಣ ಯಾರ್ ಕೊಡುತ್ತಾರೆ ಅಂತ ಬೈದಿದ್ದಾನೆ. ಆಗ ಯುವತಿ ಮೊಬೈಲ್ ರೆಕಾರ್ಡಿಂಗ್ ಶುರು ಮಾಡಿ ಪೊಲೀಸರಿಗೆ ದೂರು ಕೊಡುತ್ತೇನೆ ಎಂದಿದ್ದಾರೆ.
ಆಗ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿ, ಯುವತಿಗೆ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚಪ್ಪಲಿಯಿಂದ ಆಟೋ ಚಾಲಕ ಹೊಡೆಯುತ್ತೇನೆ ಅಂತ ಹೇಳಿದ್ದನಂತೆ. ಈ ವೇಳೆ ಯುವತಿಯರು ಕುಳಿತಿದ್ದ ಆಟೋದ ಚಾಲಕ ಪರಿಸ್ಥಿತಿ ನಿಭಾಯಿಸಿ ಕರೆದೊಯ್ದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಶಿವಾಜಿನಗರದ ರಸೆಲ್ ಮಾರ್ಕೆಟ್ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧ
ಈ ಬಗ್ಗೆ ಓಲಾ ಆ್ಯಪ್ಗೆ ದೂರು ನೀಡಿದರು ಸರಿಯಾಗಿ ಸ್ವಂದಿಸಿಲ್ಲವೆಂದು ದೂರಿನಲ್ಲಿ ಆರೋಪಿಸಲಾಗಿದೆ. ಒಲಾ ಆಟೋ ಡ್ರೈವರ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸರಿಗೆ ಒತ್ತಾಯಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದಲ್ಲಿ ಮಾಗಡಿರಸ್ತೆ ಪೊಲೀಸರಿಂದ ಎಫ್ಐಆರ್ ದಾಖಲಿಸಿ ಚಾಲಕನ ಬಂಧನ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.