ಗುಜರಾತಿನಲ್ಲೂ ಭೀಕರ ಮಳೆ: ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತೊಂದು ಎಮ್ಮೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2022 | 12:37 PM

ಕೊಚ್ಚಿಹೋಗದಂತೆ ಯಾವುದಾದರೂ ವಸ್ತುವಿನ ಆಸರೆ ಪಡೆದುಕೊಳ್ಳುವ ಅದರ ಪ್ರಯತ್ನ ವಿಫಲವಾಗುತ್ತದೆ. ಅಂತಿಮವಾಗಿ ನೀರಿನ ರಭಸ ಅದನ್ನು ಸೆಳೆದುಕೊಂಡು ಹೋಗಿಬಿಡುತ್ತದೆ ಮತ್ತು ಮೂಕಜೀವ ಪ್ರಾಣ ಕಳೆದುಕೊಳ್ಳುತ್ತದೆ.

ಗುಜರಾತ: ದೇಶದೆಲ್ಲೆಡೆ ಮಳೆಯ ಆರ್ಭಟ ಜೋರಾಗಿದೆ. ಗುಜರಾತ (Gujarat) ರಾಜ್ಯದಲ್ಲೂ ಸತತವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ (out of gear). ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಪ್ರವಾಹದಂಥ ಸ್ಥಿತಿ (flood-like situation) ತಲೆದೋರಿದೆ. ಆ ರಾಜ್ಯದಿಂದ ನಮಗೆ ಎಮ್ಮೆಯೊಂದು ಕೊಚ್ಚಿಕೊಂಡು ಹೋಗುತ್ತಿರುವ ಮನಕಲುಕುವ ವಿಡಿಯೋ ಸಿಕ್ಕಿದೆ. ಕೊಚ್ಚಿಹೋಗದಂತೆ ಯಾವುದಾದರೂ ವಸ್ತುವಿನ ಆಸರೆ ಪಡೆದುಕೊಳ್ಳುವ ಅದರ ಪ್ರಯತ್ನ ವಿಫಲವಾಗುತ್ತದೆ. ಅಂತಿಮವಾಗಿ ನೀರಿನ ರಭಸ ಅದನ್ನು ಸೆಳೆದುಕೊಂಡು ಹೋಗಿಬಿಡುತ್ತದೆ ಮತ್ತು ಮೂಕಜೀವ ಪ್ರಾಣ ಕಳೆದುಕೊಳ್ಳುತ್ತದೆ.

ಇದನ್ನೂ ಓದಿ:  Viral Video: ಹಲವು ಅಡಿಗಳಷ್ಟು ಎತ್ತರದಲ್ಲಿ ಕ್ರೇನ್​ನಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿ, ಮುಂದೇನಾಯ್ತು ಎಂದು ಈ ವಿಡಿಯೋ ನೋಡಿ