ರಾಹುಲ್- ಜೈಸ್ವಾಲ್ ಜುಗಲ್ ಬಂದಿಗೆ ಸಲ್ಯೂಟ್ ಹೊಡೆದ ಕಿಂಗ್ ಕೊಹ್ಲಿ..! ವಿಡಿಯೋ ನೋಡಿ
Virat Kohli: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪರ್ತ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 172 ರನ್‌ಗಳ ಮುರಿಯದ ಜೊತೆಯಾಟದ ಮೂಲಕ ಭಾರತ ತಂಡಕ್ಕೆ ಬಲ ತುಂಬಿದರು. ಈ ಇಬ್ಬರ ಆಟವನ್ನು ನೋಡ ಫುಲ್ ಫಿದಾ ಆದ ವಿಶ್ವ ಕ್ರಿಕೆಟ್ನ ರನ್ ಸಾಮ್ರಾಟ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಸಲ್ಯೂಟ್ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪರ್ತ್ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಭಾರತದ ಇನ್ನಿಂಗ್ಸ್ಗೆ ಜೀವ ತುಂಬುವ ಕೆಲಸ ಮಾಡುವಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಜೋಡಿ ಯಶಸ್ವಿಯಾಗಿದೆ. ಭಾರತದ ಈ ಆರಂಭಿಕ ಜೋಡಿ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ 172 ರನ್‌ಗಳ ಮುರಿಯದ ಜೊತೆಯಾಟವನ್ನು ನೀಡಿದೆ. ದಿನದಾಟದಂತ್ಯಕ್ಕೆ ಯಶಸ್ವಿ 90 ರನ್ ಹಾಗೂ ಕೆಎಲ್ ರಾಹುಲ್ 62 ರನ್ ಕಲೆಹಾಕುವ ಮೂಲಕ ಭಾರತದ ಮುನ್ನಡೆಯನ್ನು 218 ರನ್ಗಳಿಗೆ ಕೊಂಡೊಯ್ದಿದ್ದಾರೆ. ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಆರಂಭಿಕ ಜೋಡಿಯನ್ನು ಇದೀಗ ಇಡೀ ಕ್ರಿಕೆಟ್ ಲೋಕವೇ ಕೊಂಡಾಡುತ್ತಿದೆ. ಈ ನಡುವೆ ಈ ಇಬ್ಬರ ಆಟಕ್ಕೆ ಫುಲ್ ಫಿದಾ ಆಗಿರುವ ವಿರಾಟ್ ಕೊಹ್ಲಿ, ಪ್ರೇಕ್ಷಕರ ಮುಂದೆಯೇ ಮೈದಾನಕ್ಕೆ ಬಂದು ಈ ಇಬ್ಬರೂ ಆರಂಭಿಕರಿಗೆ ಸೆಲ್ಯೂಟ್ ಹೊಡೆದಿದ್ದಾರೆ.
ಯಶಸ್ವಿ-ರಾಹುಲ್ ಆಟಕ್ಕೆ ಕೊಹ್ಲಿ ಫಿದಾ
ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕಾಂಗರೂ ಬೌಲಿಂಗ್ ದಾಳಿಯ ಮೇಲೆ ಸವಾರಿ ಮಾಡಿದ ಈ ಇಬ್ಬರು ಆಸ್ಟ್ರೇಲಿಯಾ ವೇಗಿಗಳಿಗೆ ವಿಕೆಟ್ ಪಡೆಯುವ ಯಾವುದೇ ಅವಕಾಶವನ್ನು ನೀಡಲಿಲ್ಲ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಯಶಸ್ವಿ, ರಾಹುಲ್ ಜೊತೆಗೂಡಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಈ ಮೂಲಕ ಈ ಜೋಡಿ ಕಳೆದ 14 ವರ್ಷಗಳಲ್ಲಿ ಆತಿಥೇಯ ತಂಡದ ವಿರುದ್ಧ 150 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದ ದಾಖಲೆ ಬರೆದಿದೆ. ದಿನದಾಟ ಮುಗಿದ ಬಳಿಕ ಯಶಸ್ವಿ ಹಾಗೂ ರಾಹುಲ್ ಡ್ರೆಸ್ಸಿಂಗ್ ರೂಂಗೆ ವಾಪಸಾಗುತ್ತಿದ್ದಾಗ ಮೈದಾನದ ಮಧ್ಯಕ್ಕೆ ಆಗಮಿಸಿದ ವಿರಾಟ್ ಕೊಹ್ಲಿ ಚಪ್ಪಾಳೆ ತಟ್ಟುವ ಮೂಲಕ ಈ ಇಬ್ಬರನ್ನು ಸ್ವಾಗತಿಸಿದರು. ಇದರೊಂದಿಗೆ ವಿರಾಟ್, ಯಶಸ್ವಿ-ರಾಹುಲ್ ಅವರ ಅದ್ಭುತ ಬ್ಯಾಟಿಂಗ್‌ಗೆ ಸೆಲ್ಯೂಟ್ ಕೂಡ ಹೊಡೆದರು.
20 ವರ್ಷಗಳ ದಾಖಲೆ ಉಡೀಸ್
ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಈ 172 ರನ್‌ಗಳ ಮುರಿಯದ ಜೊತೆಯಾಟದ ಮೂಲಕ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದರು. ಕಳೆದ 20 ವರ್ಷಗಳಲ್ಲಿ ಕಾಂಗರೂ ನೆಲದಲ್ಲಿ ಅತ್ಯಧಿಕ ಜೊತೆಯಾಟ ನಡೆಸಿದ ಮೊದಲ ಜೋಡಿ ಎಂಬ ದಾಖಲೆ ಈ ಇಬ್ಬರ ಪಾಲಾಗಿದೆ. ಈ ಮೊದಲು 2004ರಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಆಕಾಶ್ ಚೋಪ್ರಾ 123 ರನ್‌ಗಳ ಜೊತೆಯಾಟ ನೀಡಿದ್ದರು. ಇದೀಗ 2010 ರ ನಂತರ, ರಾಹುಲ್ ಮತ್ತು ಯಶಸ್ವಿ ಆಸ್ಟ್ರೇಲಿಯಾದಲ್ಲಿ 150 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ಮಾಡಿದ ಮೊದಲ ಆರಂಭಿಕ ಜೋಡಿ ಎನಿಸಿಕೊಂಡಿದೆ. ಇದಲ್ಲದೆ 2018ರ ನಂತರ ಆಸ್ಟ್ರೇಲಿಯಾದಲ್ಲಿ ಭಾರತದ ಜೋಡಿ ಸತತ ಎರಡು ಸೆಷನ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ದಾಖಲೆಯನ್ನು ಈ ಜೋಡಿ ತನ್ನ ಖಾತೆಗೆ ಹಾಕಿಕೊಂಡಿತು. ಇದಕ್ಕೂ ಮುನ್ನ 2018ರಲ್ಲಿ ಕೊಹ್ಲಿ ಮತ್ತು ಪೂಜಾರ ಎರಡು ಸೆಷನ್‌ಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ