IND vs BAN: ಪಟಪಟನೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆರ್​ಸಿಬಿ ವೇಗಿ; ವಿಡಿಯೋ ನೋಡಿ

|

Updated on: Sep 20, 2024 | 7:03 PM

Akash Deep: ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್‌ನಲ್ಲಿ ಆಕಾಶ್ ದೀಪ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ತಮ್ಮ ಖೋಟಾದ ಎರಡನೇ ಓವರ್​ನ ಸತತ ಎರಡು ಎಸೆತಗಳಲ್ಲಿ ಅವರು, ಬಾಂಗ್ಲಾದೇಶದ ಝಾಕಿರ್ ಹಸನ್ ಮತ್ತು ಮೊಮಿನುಲ್ ಹಕ್ ಅವರನ್ನು ಔಟ್ ಮಾಡಿದರು.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಆಕಾಶ್ ದೀಪ್ ತಮ್ಮ ಬೌಲಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ತಮ್ಮ ಖೋಟಾದ ಎರಡನೇ ಓವರ್​ನ ಸತತ ಎರಡು ಎಸೆತಗಳಲ್ಲಿ ಅವರು, ಬಾಂಗ್ಲಾದೇಶದ ಝಾಕಿರ್ ಹಸನ್ ಮತ್ತು ಮೊಮಿನುಲ್ ಹಕ್ ಅವರನ್ನು ಔಟ್ ಮಾಡಿದರು. ಆಕಾಶ್ ಎಸೆದ ಓವರ್​ನ ಮೊದಲ ಎಸೆತದಲ್ಲೇ ಝಾಕಿರ್ ಔಟಾದರೆ, ನಂತರ ಬಂದ ಮೊಮಿನುಲ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಆಕಾಶ್ ಕ್ಲೀನ್ ಬೌಲ್ಡ್ ಮಾಡಿದರು. ಇದು ಆಕಾಶ್ ಅವರ ಎರಡನೇ ಟೆಸ್ಟ್ ಪಂದ್ಯವಾಗಿದ್ದು, ಈ ವರ್ಷದ ಫೆಬ್ರುವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ ಅವರು ತಮ್ಮ ಬೌಲಿಂಗ್‌ನಿಂದ ಆಂಗ್ಲ ತಂಡಕ್ಕೆ ಸಾಕಷ್ಟು ತೊಂದರೆ ಕೊಟ್ಟಿದ್ದರು.

ತತ್ತರಿಸಿದ ಬಾಂಗ್ಲಾ

ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ.. ಪ್ರವಾಸಿ ತಂಡ ಪೂರ್ಣ ದಿನವನ್ನು ಆಡಲಾಗದೆ, ಕೇವಲ ಮೂರನೇ ಸೆಷನ್​ನಲ್ಲಿಯೇ ಆಲೌಟ್ ಆಯಿತು. ಮೊದಲ ದಿನದಂತೆಯೇ ಎರಡನೇ ದಿನದ ಆಟದಲ್ಲೂ ಭಾರತದ ಆಟಗಾರರು ಬಾಂಗ್ಲಾದೇಶದ ಮೇಲೆ ಪಾರುಪತ್ಯ ಸಾಧಿಸಿದರು. ಮೊದಲ ದಿನದ ಆಟದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಜಾದೂ ಕಂಡುಬಂದರೆ ಎರಡನೇ ದಿನ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಬೌಲರ್​ಗಳ ಮ್ಯಾಜಿಕ್ ಕಂಡುಬಂದಿತು. ಇದರಿಂದಾಗಿ ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ 149 ರನ್​ಗಳಿಗೆ ಕೊನೆಗೊಂಡಿತು.

ಬುಮ್ರಾ ಮಾರಕ ಬೌಲಿಂಗ್

ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ 11 ಓವರ್​ಗಳಲ್ಲಿ 50 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ವಿಕೆಟ್ ಪೂರೈಸಿದ ಸಾಧನೆಯನ್ನು ಮಾಡಿದರು. ಉಳಿದಂತೆ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಬ್ಯಾಟಿಂಗ್​ನಲ್ಲಿ ಶತಕ ಬಾರಿಸಿದ್ದ ಅಶ್ವಿನ್​ಗೆ ಬೌಲಿಂಗ್​ನಲ್ಲಿ ಮಾತ್ರ ಯಾವುದೇ ವಿಕೆಟ್ ಸಿಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Fri, 20 September 24

Follow us on