ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಇವರು ಸಾಮಾನ್ಯವಾದ ಕಳ್ಳಿಯರಲ್ಲ. ಇವರು ಕತ್ತಲಾದ ನಂತರ ಬೀಗ ಮುರಿದು ದರೋಡೆ ಮಾಡುವ ಕಳ್ಳರಲ್ಲ. ಚಾಕುಗಳಿಂದ ಹಣಕ್ಕೆ ಬೆದರಿಕೆ ಹಾಕುವವರಲ್ಲ. ಸಾಮಾನ್ಯ ಗಿರಾಕಿಗಳಂತೆ ಬಟ್ಟೆ ಅಂಗಡಿಗೆ ಬರುವ ಇವರು ಯಾರಿಗೂ ಗೊತ್ತಾಗದ ಹಾಗೆ ಸೀರೆಗಳನ್ನು ಕದ್ದು ಹೋಗುತ್ತಾರೆ. ಸಿಸಿಟಿವಿಯನ್ನು ಸರಿಯಾಗಿ ನೋಡದಿದ್ದರೆ ಇವರ ಕಳ್ಳತನ ಮಾಲೀಕರಿಗೆ ಗೊತ್ತಾಗುವುದೇ ಇಲ್ಲ!
ತೆಲಂಗಾಣದ ಈ ಮಹಿಳೆಯರು ಖತರ್ನಾಕ್ ಕಳ್ಳಿಯರು. ಇವರು ಖರೀದಿದಾರರ ಸೋಗಿನಲ್ಲಿ ಕಳ್ಳತನ ಮಾಡುತ್ತಾರೆ. ಇತ್ತೀಚೆಗೆ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ಮುಸ್ತಾಬಾದ್ ಮಂಡಲ ಕೇಂದ್ರದಲ್ಲಿ ಈ ಮಹಿಳೆಯರು ಕಳ್ಳತನ ಮಾಡಿದ್ದರು. ಹೊಸ ಬಸ್ ನಿಲ್ದಾಣದಲ್ಲಿ ನರೇಶ್ ಎಂಬುವವರ ಸೀರೆ ಅಂಗಡಿಯಲ್ಲಿ ಕದ್ದ ಬಳಿಕ ಇವರು ಸಿಕ್ಕಿಬಿದ್ದಿದ್ದರು. ಇವರು ಸೀರೆ, ನೈಟಿಗಳನ್ನು ಕದಿಯುವ ಶೈಲಿ ನೋಡಿದರೆ ನೀವೇ ಶಾಕ್ ಆಗುತ್ತೀರ. ಅಂಗಡಿಗೆ ವಾಪಾಸ್ ಬಂದ ಮಾಲೀಕ ತನ್ನ ಹೆಂಡತಿಯ ಬಳಿ ಕೇಳಿದಾಗ ಅವರು ಐವರು ಮಹಿಳೆಯರು ಏನೂ ಖರೀದಿಸದೆ ಹೊರಟರು ಎಂದ ಹೇಳಿದಾಗ ಆತನಿಗೆ ಅನುಮಾನವಾಗಿ ಸಿಸಿಟಿವಿ ನೋಡಿದಾಗ ಈ ಕಳ್ಳತನ ಬೆಳಕಿಗೆ ಬಂದಿದೆ.
ಶುಕ್ರವಾರ ಐವರು ಮಹಿಳೆಯರು ಅಂಗಡಿಗೆ ಬಂದು ಸೀರೆ ಮತ್ತು ವಿವಿಧ ರೀತಿಯ ಬಟ್ಟೆಗಳನ್ನು ತೋರಿಸಲು ಕೇಳಿದರು. ಹಲವು ವೆರೈಟಿಗಳಿವೆ ಎಂದು ಹೇಳಿ ಸೀರೆ ಕೊಳ್ಳುವಂತೆ ನಟಿಸಿದರು. ಐವರು ಮಹಿಳೆಯರ ಪೈಕಿ ಒಬ್ಬ ಮಹಿಳೆ ಅಂಗಡಿ ಮಾಲೀಕನ ಪತ್ನಿಯನ್ನು ಕೌಂಟರ್‌ನಲ್ಲಿ ಮಾತನಾಡಿಸುವ ಮೂಲಕ ಅವರ ಗಮನವನ್ನು ಬೇರೆಡೆ ಸೆಳೆದಳು. ಉಳಿದ ಹೆಂಗಸರು ಸೀರೆಯನ್ನು ನೋಡುತ್ತಾ ಅಕ್ಕಪಕ್ಕದ ಹೆಂಗಸರಿಗೆ ಕಾಣದಂತೆ ಅಡ್ಡ ನಿಂತರು. ಆಗ ಅವರಲ್ಲೊಬ್ಬಬ್ಬರೇ ತಮ್ಮ ಸೀರೆಯೆತ್ತಿ ಅಲ್ಲಿದ್ದ ಸೀರೆಗಳನ್ನು ಒಳಗೆ ತುಂಬಿಸಿಕೊಂಡರು. ನಂತರ ಯಾವ ಸೀರೆಯೂ ಇಷ್ಟವಾಗಲಿಲ್ಲವೆಂದು ಎಲ್ಲರೂ ಅಲ್ಲಿಂದ ಹೊರಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ