‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ ಸುದೀಪ್
ಒಂದಷ್ಟು ಕೆಟ್ಟ ಕಾರಣಗಳಿಂದ ಕನ್ನಡ ಚಿತ್ರರಂಗ ಸುದ್ದಿ ಆಗಿದೆ ಎಂಬುದು ನಿಜ. ಆದರೆ ಚಿತ್ರರಂಗ ಎಂದರೆ ಕೇವಲ ಅಷ್ಟೇ ಅಲ್ಲ. ಅದರ ಹೊರತಾಗಿಯೂ ಇಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಅದರ ಬಗ್ಗೆ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಬ್ಯಾಡ್ಮಿಂಟನ್ ಪಂದ್ಯಗಳ ಸುಲುವಾಗಿ ಚಿತ್ರರಂಗದವರು ಒಂದೆಡೆ ಸೇರುತ್ತಿದ್ದಾರೆ. ಆ ಬಗ್ಗೆ ಸುದೀಪ್ ಮಾತಾಡಿದ ವಿಡಿಯೋ ಇಲ್ಲಿದೆ..
ಕನ್ನಡ ಚಲನಚಿತ್ರ ಕಲಾವಿದರು, ತಂತ್ರಜ್ಞರು, ಕಿರುತೆರೆ ಕಲಾವಿದರು ಹಾಗೂ ಮಾಧ್ಯಮದವರು ಒಟ್ಟಾಗಿ ‘ಸ್ಯಾಂಡಲ್ವುಡ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ನಲ್ಲಿ ಭಾಗಿ ಆಗುತ್ತಿದ್ದಾರೆ. ಜೆರ್ಸಿ ಅನಾವರಣ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು ಶುಭ ಕೋರಿದ್ದಾರೆ. ‘ಕೆಟ್ಟ ಕಾರಣಕ್ಕೆ ನಮ್ಮ ಚಿತ್ರರಂಗ ಸುದ್ದಿ ಆಗುತ್ತಿದೆ. ಅದರ ನಡುವೆ ಇದು ಒಂದು ಸುಂದರ ಕ್ಷಣ. ಎಲ್ಲರೂ ಇಲ್ಲಿ ಜೊತೆಯಾಗಿ ಸೇರಿರುವುದು ಕನ್ನಡ ಚಿತ್ರರಂಗದ ಬಗ್ಗೆ ಉತ್ತಮ ಸಂದೇಶ ನೀಡುತ್ತೆ. ಯಾರು ಏನೇ ಮಾತಾಡಿದರೂ ನಮ್ಮ ಚಿತ್ರರಂಗದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ’ ಎಂದಿದ್ದಾರೆ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos