VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
IND vs ENG: ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 358 ರನ್ಗಳಿಸಿ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಪರ ಜೋ ರೂಟ್ 248 ಎಸೆತಗಳಲ್ಲಿ 150 ರನ್ ಕಲೆಹಾಕಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 544 ರನ್ ಕಲೆಹಾಕಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಭರ್ಜರಿ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ 150 ರನ್ ಕಲೆಹಾಕಿರುವ ರೂಟ್ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಲು ಕಾರಣರಾಗಿದ್ದಾರೆ. ಆದರೆ ಇದೇ ರೂಟ್ 22 ರನ್ಗಳಿಸಿದ್ದ ವೇಳೆ ಪೆವಿಲಿಯನ್ ಸೇರಬೇಕಿತ್ತು. 54ನೇ ಓವರ್ನಲ್ಲಿ ಟೀಮ್ ಇಂಡಿಯಾ ಫೀಲ್ಡರ್ಗಳು ಮಾಡಿದ ಎಡವಟ್ಟಿನಿಂದಾಗಿ ಅವರು ಮೂರಂಕಿ ರನ್ ಗಳಿಸುವಂತಾಯಿತು.
ಹೌದು, ಮೊಹಮ್ಮದ್ ಸಿರಾಜ್ ಎಸೆದ ಪಂದ್ಯದ 54ನೇ ಓವರ್ನ 5ನೇ ಎಸೆತದಲ್ಲಿ ಜೋ ರೂಟ್ ಗಲ್ಲಿಯ ದಿಕ್ಕಿನಲ್ಲಿ ಆಡಿದರು. ಚೆಂಡು ಗಲ್ಲಿಯಲ್ಲಿ ನಿಂತಿದ್ದ ಫೀಲ್ಡರ್‌ನ ಕೈಗೆ ತಗುಲಿ ರವೀಂದ್ರ ಜಡೇಜಾರತ್ತ ಸಾಗಿತು. ತಕ್ಷಣವೇ ಚೆಂಡನ್ನು ಎತ್ತಿಕೊಂಡ ಜಡೇಜಾ ನಾನ್ ಸ್ಟ್ರೈಕ್ ಸ್ಟಂಪ್‌ನತ್ತ ಎಸೆದರು.
ಅತ್ತ ಯಾವುದಾದರೂ ಫೀಲ್ಡರ್ ಚೆಂಡು ಹಿಡಿದು ವಿಕೆಟ್ಗೆ ತಾಗಿಸಿದ್ದರೆ ಜೋ ರೂಟ್ ರನೌಟ್ ಆಗುತ್ತಿದ್ದರು. ಏಕೆಂದರೆ ರನ್ ಓಡಬೇಕಾದ ಬೇಡವಾ ಎಂಬ ಗೊಂದಲದೊಂದಿಗೆ ರೂಟ್ ಕ್ರೀಸ್ ಬಿಟ್ಟಿದ್ದರು. ಆದರೆ ಜಡೇಜಾ ಎಸೆದ ಥ್ರೋವನ್ನು ಹಿಡಿಯಲು ವಿಕೆಟ್ ಬಳಿ ಟೀಮ್ ಇಂಡಿಯಾದ ಯಾವುದೇ ಫೀಲ್ಡರ್ ಬರಲಿಲ್ಲ.
ಇತ್ತ ಯಾರು ಸಹ ವಿಕೆಟ್ ಕವರ್ ಮಾಡಿರುವುದರಿಂದ ಜೋ ರೂಟ್ ರನೌಟ್ನಿಂದ ಬಚಾವಾದರು. ಅತ್ತ ಯಾವುದೇ ಫೀಲ್ಡರ್ ವಿಕೆಟ್ ಕವರ್ ಆಗದೇ ಇರುವುದಕ್ಕೆ ರವೀಂದ್ರ ಜಡೇಜಾ ಆಕ್ರೋಶ ಹೊರಹಾಕಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 358 ರನ್ಗಳಿಸಿ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಪರ ಜೋ ರೂಟ್ 248 ಎಸೆತಗಳಲ್ಲಿ 150 ರನ್ ಕಲೆಹಾಕಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 544 ರನ್ ಕಲೆಹಾಕಿದೆ.