IND vs ENG: 4,4,6,4,4.. ಒಂದೇ ಓವರ್‌ನಲ್ಲಿ ಅಟ್ಕಿನ್ಸನ್ರನ್ನು ಅಟ್ಟಾಡಿಸಿದ ಸಂಜು; ವಿಡಿಯೋ
Sanju Samson: ಕೋಲ್ಕತ್ತಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ಸುಲಭ ಜಯ ಸಾಧಿಸಿತು. ಅರ್ಷದೀಪ್ ಮತ್ತು ವರುಣ್ ಅವರ ಅತ್ಯುತ್ತಮ ಬೌಲಿಂಗ್‌ನಿಂದ ಇಂಗ್ಲೆಂಡ್ ಕೇವಲ 132 ರನ್‌ಗಳಿಗೆ ಆಲೌಟ್ ಆಯಿತು. ಸಂಜು ಸ್ಯಾಮ್ಸನ್ 26 ರನ್‌ಗಳ ಅಬ್ಬರದ ಇನ್ನಿಂಗ್ಸ್‌ನೊಂದಿಗೆ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು, ವಿಶೇಷವಾಗಿ ಒಂದೇ ಓವರ್‌ನಲ್ಲಿ 22 ರನ್ ಗಳಿಸಿದರು. ಭಾರತ ಸುಲಭವಾಗಿ ಗೆಲುವು ಸಾಧಿಸಿತು.
ಕೋಲ್ಕತ್ತಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಆಲ್ರೌಂಡರ್ ಪ್ರದರ್ಶನದಿಂದ ಸುಲಭ ಜಯ ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತದ ಪರ ಅರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ಇಂಗ್ಲೆಂಡ್ ತಂಡವನ್ನು ಕೇವಲ 132 ರನ್‌ಗಳಿಗೆ ಆಲೌಟ್ ಮಾಡಿತು. ಇತ್ತ 133 ರನ್‌ಗಳ ಸಣ್ಣ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಬಿರುಸಿನ ಆರಂಭ ನೀಡಿದರು. ಭಾರತದ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಸ್ಯಾಮ್ಸನ್ 22 ರನ್ ಕಲೆಹಾಕಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಇಂಗ್ಲೆಂಡ್‌ನ ವೇಗದ ಬೌಲರ್ ಗಸ್ ಅಟ್ಕಿನ್ಸನ್‌ಗೆ ಬೆವರಿಳಿಸಿದರು.
ಒಂದೇ ಓವರ್‌ನಲ್ಲಿ 22 ರನ್
ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾರತದ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್‌ನಲ್ಲಿ ಸಂಜು ಎಲ್ಲಾ ಎಸೆತಗಳನ್ನು ಆಡಿ ಒಂದೇ ಒಂದು ರನ್ ಗಳಿಸಿದರು. ಆದರೆ ಎರಡನೇ ಓವರ್‌ನಲ್ಲಿ ಅವರ ಬ್ಯಾಟ್ ಬಿರುಗಾಳಿ ಎಬ್ಬಿಸಿತು. ಭಾರತೀಯ ಇನ್ನಿಂಗ್ಸ್‌ನ ಎರಡನೇ ಓವರ್ ಅನ್ನು ಗಸ್ ಅಟ್ಕಿನ್ಸನ್ ಬೌಲ್ ಮಾಡಿದರು. ಆದರೆ ಈ ಓವರ್ ಅಟ್ಕಿನ್ಸನ್‌ಗೆ ತುಂಬಾ ದುಬಾರಿಯಾಗಿತ್ತು. ಅಟ್ಕಿನ್ಸನ್ ಅವರ ಮೊದಲ ಎರಡು ಎಸೆತಗಳಲ್ಲಿ ಸಂಜು ಬೌಂಡರಿ ಬಾರಿಸಿದರು. ಮೂರನೇ ಚೆಂಡು ಡಾಟ್ ಆಗಿತ್ತು. ಇದಾದ ನಂತರ ಸ್ಯಾಮ್ಸನ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆ ಬಳಿಕ ಐದು ಮತ್ತು ಆರನೇ ಎಸೆತಗಳಲ್ಲಿ ಬೌಂಡರಿ ಗಳಿಸಿದರು. ಈ ಮೂಲಕ ಸಂಜು ಒಂದೇ ಓವರ್‌ನಲ್ಲಿ ಒಟ್ಟು 22 ರನ್ ಕಲೆಹಾಕಿದರು.
ಬೇಗನೇ ಔಟಾದ ಸ್ಯಾಮ್ಸನ್
ಸ್ಯಾಮ್ಸನ್ ತಮ್ಮ ಇನ್ನಿಂಗ್ಸ್‌ಗೆ ಉತ್ತಮ ಆರಂಭವನ್ನು ನೀಡಿದರಾದರೂ ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ವೇಗದ ಆರಂಭದ ಹೊರತಾಗಿಯೂ ಸಂಜು ಸ್ಯಾಮ್ಸನ್ ಬೇಗನೇ ಪೆವಿಲಿಯನ್ಗೆ ಮರಳಿದರು. ಸಂಜು 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ