IND vs ENG: ಕಿಂಗ್ ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಪುಟ್ಟ ಬಾಲಕ; ವಿಡಿಯೋ ವೈರಲ್
Virat Kohli: ಕಟಕ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದ ವೇಳೆ ಇಂಗ್ಲೆಂಡ್ ಇನ್ನಿಂಗ್ಸ್ ಸಮಯದಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಗೆರೆ ಬಳಿ ಫಿಲ್ಡಿಂಗ್ ಮಾಡುತ್ತಿದ್ದರು. ಅಲ್ಲಿಯೇ ಇಬ್ಬರು ಹುಡುಗರು ಬಾಲ್ ಬಾಯ್ಗಳಾಗಿ ಬೌಂಡರಿ ಲೈನ್ ಬಳಿ ಕುಳಿತಿದ್ದರು. ಕೊಹ್ಲಿಯನ್ನು ನೋಡಿದ್ದ ಖುಷಿಯಲ್ಲಿ ಈ ಪುಟ್ಟ ಪೋರರಿದ್ದರೆ, ಸ್ವತಃ ಕೊಹ್ಲಿಯೇ ಈ ಇಬ್ಬರ ಬಳಿ ಹೋಗಿ ಕೈಕುಲುಕಿದ್ದಾರೆ.
ವಿರಾಟ್ ಕೊಹ್ಲಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ತನ್ನ ಆಟದ ಮೂಲಕ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿಗೆ ಜೊತೆಗೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಅಥವಾ ಒಂದು ಆಟೋಗ್ರಾಫ್ ಪಡೆಯಬೇಕು. ಕೊನೆಯ ಪಕ್ಷ ಕೊಹ್ಲಿಗೆ ಹಸ್ತಲಾಘವನ್ನಾದರೂ ನೀಡಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಕನಸಾಗಿರುತ್ತದೆ. ಅದರಲ್ಲೂ ಸ್ವತಃ ವಿರಾಟ್ ಕೊಹ್ಲಿಯೇ ನಿಮ್ಮ ಬಳಿ ಬಂದು ಹಸ್ತಲಾಘವ ಮಾಡಿದರೆ ನಿಮಗೆ ಹೇಗನಿಸಬೇಡ ಹೇಳಿ.
ಹೌದು ಸ್ವತಃ ವಿರಾಟ್ ಕೊಹ್ಲಿಯೇ ಪುಟ್ಟ ಕ್ರಿಕೆಟ್ ಅಭಿಮಾನಿಯ ಬಳಿ ಹೋಗಿ ಹಸ್ತಲಾಘವ ಮಾಡಿದ್ದಾರೆ. ವಾಸ್ತವವಾಗಿ ಕಟಕ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದ ವೇಳೆ ಇಂಗ್ಲೆಂಡ್ ಇನ್ನಿಂಗ್ಸ್ ಸಮಯದಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಗೆರೆ ಬಳಿ ಫಿಲ್ಡಿಂಗ್ ಮಾಡುತ್ತಿದ್ದರು. ಅಲ್ಲಿಯೇ ಇಬ್ಬರು ಹುಡುಗರು ಬಾಲ್ ಬಾಯ್ಗಳಾಗಿ ಬೌಂಡರಿ ಲೈನ್ ಬಳಿ ಕುಳಿತಿದ್ದರು.
ಕೊಹ್ಲಿಯನ್ನು ನೋಡಿದ್ದ ಖುಷಿಯಲ್ಲಿ ಈ ಪುಟ್ಟ ಪೋರರಿದ್ದರೆ, ಸ್ವತಃ ಕೊಹ್ಲಿಯೇ ಈ ಇಬ್ಬರ ಬಳಿ ಹೋಗಿ ಕೈಕುಲುಕಿದ್ದಾರೆ. ಕೊಹ್ಲಿಯಿಂದ ಹಸ್ತಲಾಘವ ಪಡೆದ ಆ ಪುಟ್ಟ ಪೋರನ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಕೈಯನ್ನು ಎದೆಯ ಮೇಲಿಟ್ಟು ಆ ಹುಡುಗ ಸ್ವರ್ಗ ಸಿಕ್ಕವಂತೆ ಕುಣಿದಾಡಿದ್ದಾನೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.