Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಕಟಕ್‌ನಲ್ಲಿ ಅವ್ಯವಸ್ಥೆ; ಅರ್ಧಕ್ಕೆ ನಿಂತ ಪಂದ್ಯ, ಮೈದಾನ ತೊರೆದ ಆಟಗಾರರು..!

IND vs ENG: ಕಟಕ್‌ನಲ್ಲಿ ಅವ್ಯವಸ್ಥೆ; ಅರ್ಧಕ್ಕೆ ನಿಂತ ಪಂದ್ಯ, ಮೈದಾನ ತೊರೆದ ಆಟಗಾರರು..!

ಪೃಥ್ವಿಶಂಕರ
|

Updated on:Feb 09, 2025 | 7:08 PM

IND vs ENG: ಕಟಕ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಪಂದ್ಯ ಪ್ರಸ್ತುತ ಅರ್ಧಕ್ಕೆ ನಿಂತಿದೆ. ಇದಕ್ಕೆ ಕಾರಣ ಮೈದಾನದಲ್ಲಿ ಅಳವಡಿಸಲಾಗಿರುವ ಫ್ಲಡ್ ಲೈಟ್​ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಮಂದ ಬೆಳಕಿನಿಂದಾಗಿ ಅಂಪೈರ್​ಗಳು ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಸಮಸ್ಯೆ ಸರಿಯಾಗಬಹುದೆಂದು ಉಭಯ ತಂಡಗಳ ಆಟಗಾರರು ಸಾಕಷ್ಟು ಸಮಯ ಮೈದಾನದಲ್ಲೇ ಕಾಯುತ್ತ ಕುಳಿತಿದ್ದರು. ಆದರೆ 10 ನಿಮಿಷ ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಕಟಕ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಪಂದ್ಯ ಪ್ರಸ್ತುತ ಅರ್ಧಕ್ಕೆ ನಿಂತಿದೆ. ಇದಕ್ಕೆ ಕಾರಣ ಮೈದಾನದಲ್ಲಿ ಅಳವಡಿಸಲಾಗಿರುವ ಫ್ಲಡ್ ಲೈಟ್​ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಮಂದ ಬೆಳಕಿನಿಂದಾಗಿ ಅಂಪೈರ್​ಗಳು ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಸಮಸ್ಯೆ ಸರಿಯಾಗಬಹುದೆಂದು ಉಭಯ ತಂಡಗಳ ಆಟಗಾರರು ಸಾಕಷ್ಟು ಸಮಯ ಮೈದಾನದಲ್ಲೇ ಕಾಯುತ್ತ ಕುಳಿತಿದ್ದರು. ಆದರೆ 10 ನಿಮಿಷ ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅಂದರೆ ಫ್ಲಡ್ ಲೈಟ್​ಗಳು ಆನ್​ ಆಗಲಿಲ್ಲ. ಹೀಗಾಗಿ ಉಭಯ ತಂಡಗಳ ಆಟಗಾರರು ಮೈದಾನದಿಂದ ಹೊರನಡೆದಿದ್ದಾರೆ.

ಪಂದ್ಯ ಅರ್ಧ ಗಂಟೆ ಸ್ಥಗಿತ

ಭಾರತದ ಇನ್ನಿಂಗ್ಸ್​ನ 7ನೇ ಓವರ್​ ನಡೆಯುವ ವೇಳೆ ಇದಕ್ಕಿದ್ದಂತೆ ಒಂದು ಟವರ್​ನ ಎಲ್ಲಾ ಫ್ಲಡ್​ ಲೈಟ್​ಗಳು ಆಫ್ ಆದವು. ಹೀಗಾಗಿ ಸ್ವಲ್ಪ ಸಮಯ ಕಾಯ್ದ ಬಳಿಕ ಕ್ರೀಸ್​ನಲ್ಲಿದ್ದ ರೋಹಿತ್ ಶರ್ಮಾ ಅಸಮಾಧಾನಗೊಂಡು ಅಂಪೈರ್‌ಗಳೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಇತರ 5 ಟವರ್​ಗಳಿಂದ ಬರುತ್ತಿರುವ ಬೆಳಕು ಆಟ ಮುಂದುವರೆಸಲು ಸಾಕು, ಬ್ಯಾಟಿಂಗ್‌ ಮುಂದುವರೆಸಲು ನಮಗೆ ಯಾವುದೇ ತೊಂದರೆ ಇಲ್ಲ ಎಂದು ರೋಹಿತ್ ಅಂಪೈರ್​ಗೆ ಮನವರಿಕೆ ಮಾಡುತ್ತಿದ್ದಾರೆ ಎಂದು ತೋರುತ್ತಿತ್ತು. ಆದರೆ ಅಂಪೈರ್‌ಗಳು ಇದಕ್ಕೆ ಒಪ್ಪದೆ ಎಲ್ಲಾ ಆಟಗಾರರನ್ನು ಪೆವಿಲಿಯನ್‌ಗೆ ಹಿಂತಿರುಗುವಂತೆ ಸೂಚಿಸಿದರು. ಅಂತಿಮವಾಗಿ, ಸುಮಾರು 35 ನಿಮಿಷಗಳ ವಿರಾಮದ ನಂತರ, ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಯಿತು.

Published on: Feb 09, 2025 06:30 PM