IND vs NZ: ಅಯ್ಯೋ ರಾಹುಲ್ ಏನಾಯ್ತು..? ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ಕನ್ನಡಿಗ; ರೋಹಿತ್ ಕೆಂಡಾಮಂಡಲ

IND vs NZ: ಅಯ್ಯೋ ರಾಹುಲ್ ಏನಾಯ್ತು..? ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ಕನ್ನಡಿಗ; ರೋಹಿತ್ ಕೆಂಡಾಮಂಡಲ

ಪೃಥ್ವಿಶಂಕರ
|

Updated on:Oct 17, 2024 | 6:58 PM

KL Rahul: ತವರು ನೆಲದಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್​ಗೆ ಮೊದಲ ಇನ್ನಿಂಗ್ಸ್​ನಲ್ಲಿ ಖಾತೆಯನ್ನು ತೆರೆಯಲಾಗಿಲ್ಲ. ಬ್ಯಾಟಿಂಗ್‌ ಹೋಗಲಿ, ಫೀಲ್ಡಿಂಗ್​ನಲ್ಲಾದರೂ ತಂಡಕ್ಕೆ ನೆರವಾಗಬೇಕಿದ್ದ ರಾಹುಲ್, ಕೈಗೆ ಬಂದ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿ ನಾಯಕನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೇವಲ 15 ದಿನಗಳ ಹಿಂದೆ ಎಲ್ಲರೂ ಡ್ರಾದಲ್ಲಿ ಅಂತ್ಯಗೊಳ್ಳುತ್ತದೆ ಎಂದು ಭಾವಿಸಿದ್ದ ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯವನ್ನು ಕೊನೆಯ ಎರಡು ದಿನಗಳಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಇದೀಗ ನ್ಯೂಜಿಲೆಂಡ್ ವಿರುದ್ಧ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ನಾಚಿಕೆಗೇಡಿನ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಿರುವ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಕೇವಲ 46 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಕಿವೀಸ್ ದಾಳಿಯ ಮುಂದೆ ನೆಲಕಚ್ಚಿ ಆಡಲಿಲ್ಲ. ಬೇರೆಯವರನ್ನು ಬಿಡಿ ಸ್ವತಃ ತವರು ನೆಲದಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್​ಗೆ ಮೊದಲ ಇನ್ನಿಂಗ್ಸ್​ನಲ್ಲಿ ಖಾತೆಯನ್ನು ತೆರೆಯಲಾಗಿಲ್ಲ. ಬ್ಯಾಟಿಂಗ್‌ ಹೋಗಲಿ, ಫೀಲ್ಡಿಂಗ್​ನಲ್ಲಾದರೂ ತಂಡಕ್ಕೆ ನೆರವಾಗಬೇಕಿದ್ದ ರಾಹುಲ್, ಕೈಗೆ ಬಂದ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿ ನಾಯಕನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೊಹಮ್ಮದ್ ಸಿರಾಜ್ ಎಸೆತದ 12ನೇ ಓವರ್​ನ 2ನೇ ಎಸೆತ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಅವರ ಬ್ಯಾಟ್​ನ ಅಂಚಿಗೆ ತಾಗಿ ಸ್ಲಿಪ್‌ಗೆ ಹೋಯಿತು. ಆದರೆ ರಾಹುಲ್ ಚೆಂಡನ್ನು ಹಿಡಿಯುವ ಬದಲು ಅದರಿಂದ ದೂರ ಸರಿದರು. ಕೆಎಲ್ ರಾಹುಲ್ ಮಾಡಿದ ಈ ಎಡವಟ್ಟನ್ನು ನೋಡಿದ ರೋಹಿತ್ ಶರ್ಮಾ ತಾಳ್ಮೆ ಕಳೆದುಕೊಂಡಿದಲ್ಲದೆ, ರಾಹುಲ್ ಮೇಲೆ ತುಂಬಾ ಕೋಪಗೊಂಡರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 17, 2024 06:53 PM