ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಬಿಗ್ಬಾಸ್ ನಿಯಮಗಳನ್ನು ಗಾಳಿಗೆ ತೂರಿ ಇಷ್ಟಬಂದಂತೆ ಸ್ಪರ್ಧಿಗಳು ವರ್ತಿಸುತ್ತಿದ್ದಾರೆ. ಈಗ ಮತ್ತೊಮ್ಮೆ ಮನೆಯ ಸ್ಪರ್ಧಿಗಳು ನಾಮಿನೇಷನ್ ನಿಯಮ ಗಾಳಿಗೆ ತೂರಿದಂತೆ ಕಾಣುತ್ತಿದೆ.
ಬಿಗ್ಬಾಸ್ ಪ್ರಾರಂಭವಾದಾಗಿನಿಂದಲೂ ಟಾಸ್ಕ್ಗಳಿಗಿಂತಲೂ ಜಗಳ, ಗುದ್ದಾಟಗಳಿಂದಲೇ ಹೆಚ್ಚು ಸುದ್ದಿಯಾಗಿದೆ. ಲಾಯರ್ ಜಗದೀಶ್, ಮನೆಯೊಳಗೆ ಜಗಳ ಮಾಡಿಕೊಂಡು ಹೊರ ಬಂದಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದರ ನಡುವೆ ಬಿಗ್ಬಾಸ್ ಮನೆಯಲ್ಲಿ ಮತ್ತೆ ಟಾಸ್ಕ್, ಒಳರಾಜಕೀಯ ಪ್ರಾರಂಭವಾಗಿದೆ. ಬಿಗ್ಬಾಸ್ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಸ್ಪರ್ಧಿಗಳೆಲ್ಲ ಟಾಸ್ಕ್ನಲ್ಲಿ ಭಾಗವಹಿಸಿದ್ದರೆ. ಜೊತೆಗೆ ನಾಮಿನೇಷನ್ ರಾಜಕೀಯ ಸಹ ಜೋರಾಗಿಯೇ ನಡೆಯುತ್ತಿದೆ. ಯಾರನ್ನು ನಾಮಿನೇಟ್ ಮಾಡಬೇಕು? ಯಾರನ್ನು ಮಾಡಬಾರದು ಎಂಬ ಬಗ್ಗೆ ಗುಂಪುಗಳಲ್ಲಿ ಚರ್ಚೆ ಆಗುತ್ತಿದೆ. ನಾಮಿನೇಷನ್ ಎಂಬುದು ವೈಯಕ್ತಿಕ ಆಯ್ಕೆ ಆಗಿರಬೇಕು ಎಂದು ಬಿಗ್ಬಾಸ್ ತಿಳಿಸಿದ್ದರೂ ಸಹ ನಾಮಿನೇಟ್ ಮಾಡಲು ಚರ್ಚೆ ನಡೆಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos