ಜೈಲಿಗೆ ಹೋಗುವಂತೆ ಮಾಡಿದ ಬಿಜೆಪಿ ನಾಯಕರ ಹೆಸರು ಅಲ್ಲಿನ ಗೋಡೆ ಮೇಲೆ ಬರೆದಿರುವೆ: ನಾಗೇಂದ್ರ
ತನ್ನನ್ನು ವಿನಾಕಾರಣ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಸಿಲುಕಿಸಿದ ಬಿಜೆಪಿ ನಾಯಕರ ಹೆಸರುಗಳನ್ನು ಜೈಲಿನ ಗೋಡೆಯ ಮೇಲೆ ಬರೆದು ಬಂದಿದ್ದೇನೆ, ಮುಂಬರುವ ದಿನಗಳಲ್ಲಿ ಅವರೆಲ್ಲ ಜೈಲು ಸೇರಲಿದ್ದಾರೆ ಎಂದು ನಾಗೇಂದ್ರ ಹೇಳಿದರು. ಅವರ ಮಾತುಗಳು ತೆಲುಗು ಸಿನಿಮಾದ ಡೈಲಾಗ್ನಂತಿದ್ದವು!
ಬಳ್ಳಾರಿ: ನಗರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯ್ರಕ್ರಮದಲ್ಲಿ ಭಾವುಕರಾಗಿ ಮಾತಾಡಿದ ಮಾಜಿ ಸಚಿವ ಬಿ ನಾಗೇಂದ್ರ, ಯಾವುದೇ ತಪ್ಪು ಮಾಡಿರದ ತಾನು ವಾಲ್ಮೀಕಿ ನಿಗಮ ಹಗರಣದಲ್ಲಿ ದೋಷಮುಕ್ತನಾಗಿ ಹೊರಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ತಪ್ಪು ಮಾಡಿರದ ತನ್ನ ತಲೆ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದ್ದಾರೆ, ಹಲವು ಸಲ ಜೈಲಿಗೆ ಹೋಗಿರುವ ತಾನು ಅದಕ್ಕೆಲ್ಲ ಹೆದರಲ್ಲ, ಆದರೆ ತೊಂದರೆ ಕೊಟ್ಟಿರುವ ಜನರಿಗೆ ಪಶ್ಚಾತ್ತಾಪ ಪಡುವಂತೆ ಮಾಡುತ್ತೇನೆ ಎಂದು ನಾಗೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜನಾರ್ಧನರೆಡ್ಡಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ, ಕಲೆ ಕರಗತ ಮಾಡಿಕೊಂಡಿದ್ದಾರೆ: ಬಿ ನಾಗೇಂದ್ರ
Latest Videos