ಜನಾರ್ಧನರೆಡ್ಡಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ, ಕಲೆ ಕರಗತ ಮಾಡಿಕೊಂಡಿದ್ದಾರೆ: ಬಿ ನಾಗೇಂದ್ರ
ಜೈಲಿನಲ್ಲಿದ್ದಾಗ ಈಡಿ ಅಧಿಕಾರಿಗಳು ವಾಲ್ಮೀಕಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಇಲ್ಲವೇ ಉಪ ಮುಖ್ಯ,ಮಂತ್ರಿಯ ಹೆಸರು ಹೇಳುವಂತೆ ಒತ್ತಾಯಿಸಿದ್ದು ನಿಜ, ಅದನ್ನು ಸಿದ್ದರಾಮಯ್ಯನವರಿಗೆ ಹೇಳಿದ್ಧೇನೆ, ಮುದೊಂದು ದಿನ ಈ ಪ್ರಕರಣದಿಂದ ಖಲಾಸೆಯಾಗುತ್ತೇನೆ ಎಂದು ನಾಗೇಂದ್ರ ಹೇಳಿದರು.
ಬಳ್ಳಾರಿ: ಜೈಲಿನಿಂದ ಹೊರಬಂದ ನಂತರ ಬಳ್ಳಾರಿಗೆ ವಾಪಸ್ಸಾಗಿರುವ ಮಾಜಿ ಸಚಿವ ಬಿ ನಾಗೇಂದ್ರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಹಿಂದೆ ಬಿಜೆಪಿಯಲ್ಲಿದ್ದಾಗ ಆಪ್ತಮಿತ್ರನಾಗಿದ್ದ ಗಾಲಿ ಜನಾರ್ಧನ ರೆಡ್ಡಿ ತಮ್ಮ ವಿರುದ್ಧ ಮಾಡಿರುವ ಕಾಮೆಂಟ್ ಗೆ ಪ್ರತಿಕ್ರಿಯಿಸಿದ ನಾಗೇಂದ್ರ, ಸುಳ್ಳು ಹೇಳೋದ್ರಲ್ಲಿ ರೆಡ್ಡಿ ಪರಿಣಿತರು, ಆ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ ಎಂದರು. ರೆಡ್ಡಿ ಪ್ರಕಾರ ಬಿಜೆಪಿಯಲ್ಲಿರುವಷ್ಟು ದಿನ ಒಳ್ಳೆಯವನಾಗಿದ್ದ ನಾಗೇಂದ್ರ ಕಾಂಗ್ರೆಸ್ ಸೇರಿದ ಕೂಡಲೇ ಕೆಟ್ಟವನಾಗಿದ್ದಾನೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇಶದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರಗಳ ಅಸ್ಥಿರಕ್ಕೆ ಬಿಜೆಪಿ ಷಡ್ಯಂತ್ರ: ಮಾಜಿ ಸಚಿವ ನಾಗೇಂದ್ರ ಆರೋಪ