ಸಿದ್ದರಾಮಯ್ಯ ಹರಿಶ್ಚಂದ್ರನಂತೆ ಮಾತಾಡುತ್ತಾರೆಯೇ ಹೊರತು ಸತ್ಯವಂತರಲ್ಲ: ಸಿಟಿ ರವಿ
ಬಿಜೆಪಿ ಸರ್ಕಾರ ಯಾಕೆ ಕೆಂಪಣ್ಣ ವರದಿಯನ್ನು ಮಂಡಿಸಲಿಲ್ಲ ಎಂದು ಸಿದ್ದರಾಮಯ್ಯ ಕೇಳುವಂತೆಯೇ ಇಲ್ಲ, ಯಾಕೆಂದರೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಅವರು ತಮ್ಮಲ್ಲಿ ಧಮ್ಮಿದ್ದಿದ್ದರೆ ಆಯೋಗದ ವರದಿಯನ್ನು ಟೇಬಲ್ ಮಾಡಿ ಅಂತ ಟೇಬಲ್ ಗುದ್ದಿ ಆಗ್ರಹಿಸುತ್ತಿದ್ದರು ಎಂದು ರವಿ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಕೆಂಪಣ್ಣ ಆಯೋಗದ ವರದಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನಂತೆ ಮಾತಾಡುತ್ತಾರೆಯೇ ಹೊರತು ಸತ್ಯವಂತರಲ್ಲ, ಅವರು ಪ್ರಾಮಾಣಿಕರೇ ಆಗಿದ್ದರೆ ಹಲವಾರು ಅಕ್ರಮಗಳನ್ನು ಪಟ್ಟಿ ಮಾಡಿರುವ ಕೆಂಪಣ್ಣ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದರು ಎಂದು ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅರ್ಕಾವತಿ ಡಿನೋಟಿಫಿಕೇಷನ್ ಕೇಸ್: ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸುವಂತೆ ಸಿಎಂಗೆ ಸಿಟಿ ರವಿ ಪತ್ರ
Latest Videos