AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಕಾವತಿ ಡಿನೋಟಿಫಿಕೇಷನ್ ಕೇಸ್: ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸುವಂತೆ ಸಿಎಂಗೆ ಸಿಟಿ ರವಿ ಪತ್ರ

ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ 8 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದ್ದು, ಈ ಸಂಬಂಧ ನ್ಯಾ. ಕೆಂಪಯ್ಯ ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದೀಗ ಆ ವರದಿ ಬಹಿರಂಗಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ‌ ಸಿಟಿ ರವಿ ಬಹಿರಂಗ ಪತ್ರ ಬರೆದಿದ್ದಾರೆ.

ಅರ್ಕಾವತಿ ಡಿನೋಟಿಫಿಕೇಷನ್ ಕೇಸ್: ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸುವಂತೆ ಸಿಎಂಗೆ ಸಿಟಿ ರವಿ ಪತ್ರ
ಅರ್ಕಾವತಿ ಡಿನೋಟಿಫಿಕೇಷನ್ ಕೇಸ್: ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸುವಂತೆ ಸಿಎಂಗೆ ಸಿಟಿ ರವಿ ಪತ್ರ
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 24, 2024 | 6:46 PM

Share

ಬೆಂಗಳೂರು, ಆಗಸ್ಟ್​ 24: ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ವಿಧಾನ ಪರಿಷತ್ ಸದಸ್ಯ‌ ಸಿ.ಟಿ.ರವಿ ಬಹಿರಂಗ ಪತ್ರ ಬರೆದಿದ್ದಾರೆ. ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ 8 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದ್ದು, ಈ ಸಂಬಂಧ ನ್ಯಾ. ಕೆಂಪಯ್ಯ ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಪತ್ರದಲ್ಲೇನಿದೆ?

ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಹಾಗೂ ಜನಪ್ರತಿನಿಧಿಯಾಗಿ ಈ ಮೂಲಕ ತಮ್ಮ ಗಮನಸೆಳೆಯಬಯಸುವುದೇನೆಂದರೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸುಮಾರು 852 ಎಕರೆಯಷ್ಟು ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದು ಇದು ಸುಮಾರು 8000 ಕೋಟಿ ರೂ. ಮೊತ್ತದ ಹಗರಣವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: Arkavathy: ಭೂ ಹಗರಣ ಕೇಸ್​ನಲ್ಲಿ ಸಿದ್ದರಾಮಯ್ಯಗೆ ಜೈಲು ಎಂದ ಕಟೀಲ್; ಸಿಎಂ ಬೊಮ್ಮಾಯಿ ರಿಯಾಕ್ಷನ್ ಇಲ್ಲಿದೆ

2014 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ತಾವು ಇದರ ತನಿಖೆಗಾಗಿ ನ್ಯಾಯಮೂರ್ತಿ ಕೆಂಪಣ್ಣರವರ ನೇತೃತ್ವದ ವಿಚಾರಣ ಆಯೋಗವನ್ನು ಕಮಿಷನ್ ಆಫ್ ಎನಕೈರಿ ಆಕ್ಟ್ 1952 ರಂತೆ ರಚಿಸಿದ್ದು, ಅದರಂತೆ ಈ ಆಯೋಗವು ವಿಚಾರಣ ವರದಿಯನ್ನು ಸಹ ನೀಡಿದೆ. ಆಯೋಗಗಳ ತನಿಖಾ ವರದಿಗಳು ಸಾರ್ವಜನಿಕ ದಾಖಲೆಗಳಾಗಿದ್ದು, ಅದನ್ನು ಜನಸಾಮಾನ್ಯರಿಗೆ ದೊರಕುವ ಹಾಗೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ಇದುವರೆಗೂ ಆಯೋಗದ ವರದಿಯನ್ನು ಬಿಡುಗಡೆ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ.

ರಾಜ್ಯದ ಜನಪ್ರತಿನಿಧಿಯಾಗಿ ನಾನು ಸಹ ಈ ವರದಿಯ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ತಮ್ಮ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡದೇ ಮುಚ್ಚಿಡುವ ಕಾರ್ಯ ಮಾಡುತ್ತಿರುವುದು ನಿಮ್ಮ ಮತ್ತು ನಿಮ್ಮ ಸರ್ಕಾರದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಸಂಶಯ ಹಾಗೂ ಸಂದೇಹ ಹುಟ್ಟುವಂತೆ ಮಾಡುತ್ತಿದೆ.

ಇದನ್ನೂ ಓದಿ: ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕೇಸ್​: ಬೊಮ್ಮಾಯಿ-ಸಿದ್ದರಾಮಯ್ಯ ಮಧ್ಯೆ ಮಾತಿನ ಜಟಾಪಟಿ

ನಾನೊಬ್ಬ ಪ್ರಾಮಾಣಿಕ, ಕಳಂಕರಹಿತ ರಾಜಕಾರಣಿ, ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲ ಎಂದು ತಾವು ಸದಾಕಾಲ ಪ್ರತಿಪಾದಿಸುವ ಮಾತಿನ ಬದ್ಧತೆಯನ್ನು ತೋರಿಸುವ ಸಕಾಲ ಇದಾಗಿದೆ. ತಾವು ಸದಾ ನುಡಿದಂತೆ ನಡೆಯುವ ರಾಜಕಾರಣಿ ಎಂದು ರಾಜ್ಯದ ಮತ್ತು ರಾಷ್ಟ್ರದ ಜನರಿಗೆ ಸಿದ್ದಪಡಿಸುವ ಕಾಲ ಇದಾಗಿದೆ. ತಾವು ತಮ್ಮದೇ ಮಾತುಗಳನ್ನು ದೃಢಪಡಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಸಾರ್ವಜನಿಕರ ಪರಿಶೀಲನೆಗೆ ಬಿಡುಗಡೆ ಮಾಡುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟದ ಮಾತುಗಳನ್ನು ಪುನಃ ದೃಢೀಕರಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ