ನಿನ್ನೆ ಸಂಪುಟ ಸಭೆ ನಡೆಯುತ್ತಿದ್ದಾಗ ಲಿಂಗಾಯತ ಸಚಿವರ ನಡುವೆ ವಾಗ್ವಾದ ನಡೆದಿದ್ದು ನಿಜ: ಎಂಬಿ ಪಾಟೀಲ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 18, 2025 | 5:17 PM

ಸಭೆಯಲ್ಲಿ ಪಾಲ್ಗೊಳ್ಳುವ ಮೊದಲೇ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಎಂಬಿ ಪಾಟೀಲ್, ಶಿವಾನಂದ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ, ಡಾ ಶರಣಪ್ರಕಾಶ್ ಪಾಟೀಲ್ ಮತ್ತು ಶರಣಬಸಪ್ಪ ದರ್ಶನಾಪುರ್-ಸಭೆಯಲ್ಲಿ ಯಾವೆಲ್ಲ ವಿಷಯಗಳನ್ನು ಚರ್ಚಿಸಬೇಕು, ಸಮುದಾಯದ ಬೇಡಿಕೆಗಳೇನು ಮೊದಲಾದ ಸಂಗತಿಗಳನ್ನು ಮಾತಾಡಿಕೊಂಡಿದ್ದರಂತೆ.

ವಿಜಯಪುರ, ಏಪ್ರಿಲ್ 18: ಜಾತಿ ಗಣತಿ ವರದಿಗೆ ಸಂಬಂಧಿಸಿದಂತೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಲಿಂಗಾಯತ ಸಮುದಾಯದ ಕೆಲ ಸಚಿವರ ನಡುವೆ ಜಟಾಪಟಿ ನಡೆದಿದ್ದು ನಿಜ ಎಂದು ಸಚಿವ ಎಂಬಿ ಪಾಟೀಲ್ ಒಪ್ಪಿಕೊಂಡರಾದರೂ ಅದೇನೂ ದೊಡ್ಡ ವಿಷಯವಲ್ಲವೆಂದರು. ಚರ್ಚೆ ನಡೆಯುತ್ತಿದ್ದಾಗ ಶಿವಾನಂದ ಪಾಟೀಲ (Shivanand Patil) ಲಿಂಗಾಯತ ಸಮುದಾಯವನ್ನು ಸ್ವತಂತ್ರ ಧರ್ಮವಾಗಿ ಮಾಡುವ ವಿಚಾರದಲ್ಲಿ ತಮಗೆ 2018ರಲ್ಲಿ ಹಿನ್ನೆಡೆಯಾಗಿತ್ತು ಅಂತ ಹೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೇನೂ ಇಲ್ಲ, ಎಂಬಿ ಪಾಟೀಲ್ ಗೆದ್ದಿದ್ದು ಹೇಗೆ ಮತ್ತು ಅದೇ ಪ್ರಸ್ತಾಪವನ್ನು ವಿರೋಧಿಸಿದ್ದ ಎಸ್ ಎಸ್ ಮಲ್ಲಿಕಾರ್ಜುನ ಸೋತಿದ್ದು ಯಾಕೆ ಅಂತ ಕೇಳಿದ್ದರಂತೆ. ಆಗ ಈಶ್ವರ್ ಖಂಡ್ರೆ ಸಹ ಶಿವಾನಂದ ಪಾಟೀಲ ಹೇಳಿದ್ದು ನಿಜ ಅಂದಾಗ ವಾಗ್ವಾದ ನಡೆಯಿತಂತೆ.

ಇದನ್ನೂ ಓದಿ:    ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕೋಲಾಹಲ: ಸಚಿವರ ಏರು ಧ್ವನಿ, ಇಲ್ಲಿದೆ ಇನ್​ಸೈಡ್ ಡಿಟೇಲ್ಸ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.