Video: ಶಾಲಾ ನಾಟಕ, ಬುರ್ಖಾ ಧರಿಸಿದವರನ್ನು ಉಗ್ರರೆಂದು ಬಿಂಬಿಸಿದ ಮಕ್ಕಳು, ತೀವ್ರ ಆಕ್ರೋಶ

Updated on: Aug 19, 2025 | 10:50 AM

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಗುಜರಾತ್​ನ ಶಾಲೆಯೊಂದರಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಬುರ್ಖಾ ಧರಿಸಿದವರನ್ನು ಉಗ್ರರು ಎಂದು ಕರೆದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುಜರಾತ್‌ನ ಭಾವನಗರ ಜಿಲ್ಲೆಯ ಕುಂಭಾರ್ವಾಡಾದಲ್ಲಿ ಈ ಘಟನೆ ನಡೆದಿದೆ. ಒಂದು ನಾಟಕದಲ್ಲಿ, ವಿದ್ಯಾರ್ಥಿನಿಯರು ಬುರ್ಖಾ ಧರಿಸಿದ್ದು ಅವರನ್ನು ಉಗ್ರರೆಂದು ಕರೆಯಲಾಗಿತ್ತು. ಈ ಘಟನೆಯನ್ನು ಇಸ್ಲಾಮೋಫೋಬಿಯಾ ಮತ್ತು ಕೋಮು ದ್ವೇಷವನ್ನು ಹರಡುವ ಪ್ರಯತ್ನ ಎಂದು ಕರೆಯಲಾಗಿದೆ.

ಅಹಮದಾಬಾದ್, ಆಗಸ್ಟ್​ 19: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಗುಜರಾತ್​ನ ಶಾಲೆಯೊಂದರಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಬುರ್ಖಾ ಧರಿಸಿದವರನ್ನು ಉಗ್ರರು ಎಂದು ಕರೆದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುಜರಾತ್‌ನ ಭಾವನಗರ ಜಿಲ್ಲೆಯ ಕುಂಭಾರ್ವಾಡಾದಲ್ಲಿ ಈ ಘಟನೆ ನಡೆದಿದೆ. ಒಂದು ನಾಟಕದಲ್ಲಿ, ವಿದ್ಯಾರ್ಥಿನಿಯರು ಬುರ್ಖಾ ಧರಿಸಿದ್ದು ಅವರನ್ನು ಉಗ್ರರೆಂದು ಕರೆಯಲಾಗಿತ್ತು. ಈ ಘಟನೆಯನ್ನು ಇಸ್ಲಾಮೋಫೋಬಿಯಾ ಮತ್ತು ಕೋಮು ದ್ವೇಷವನ್ನು ಹರಡುವ ಪ್ರಯತ್ನ ಎಂದು ಕರೆಯಲಾಗಿದೆ. ದೇಶದ ರಾಷ್ಟ್ರೀಯ ಹಬ್ಬದಂದು ಶಾಲೆಯ ಮೂಲಕ ಸಮಾಜವನ್ನು ವಿಭಜಿಸುವ ನಾಟಕವನ್ನು ಪ್ರಚಾರ ಮಾಡುವುದು ತಪ್ಪು ಎಂದು ಜನರು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ