ರಾಯಚೂರಿನಲ್ಲಿ ಮಳೆ ಅಬ್ಬರ: ಜಿಲ್ಲಾಧಿಕಾರಿ ಕಚೇರಿ ರಸ್ತೆ ಸಂಪೂರ್ಣ ಜಲಾವೃತ
ರಾಯಚೂರು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ರಾಯಚೂರು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯೇ ಮೂರು ದಿನಗಳಿಂದ ಸಂಪೂರ್ಣ ಜಲಾವೃತಗೊಂಡಿದೆ. ಮೊಣಕಾಲು ವರೆಗೆ ಆವೃತವಾಗಿರುವ ನೀರಿನಲ್ಲಿ ಜನ ನಡೆದಾಡುತ್ತಿದ್ದಾರೆ. ಆದಾಗ್ಯೂ, ಅಧಿಕಾರಿಗಳನ್ನು ಡೋಂಟ್ ಕೇರ್ ಅನ್ನುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದೆ. ಜಲಾವೃತ ರಸ್ತೆಯ ವಿಡಿಯೋ ಇಲ್ಲಿದೆ.
ರಾಯಚೂರು, ಆಗಸ್ಟ್ 19: ರಾಯಚೂರಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಕೂಡ ಸಂಪೂರ್ಣ ಜಲಾವೃತಗೊಂಡಿದೆ. ನಗರದ ಯಕ್ಲಾಸಪುರ ಬಳಿಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಕಸ ವಿಲೆವಾರಿ ಘಟಕಕ್ಕೆ ಮಾರ್ಗ ಕಲ್ಪಿಸುವ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ರಸ್ತೆ ಮೂರು ದಿನಗಳಿಂದ ಇದೇ ರೀತಿ ಜಲಾವೃತಗೊಂಡಿದ್ದರೂ ಪಾಲಿಕೆ, ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Latest Videos
