ಒಂದೇ ಓವರ್ನಲ್ಲಿ 3 ವಿಕೆಟ್: ಟೀಮ್ ಇಂಡಿಯಾಗೆ ರೋಚಕ ಜಯ
Sri Lanka A vs India A: 278 ರನ್ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಂತೆ 43 ಓವರ್ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡ 237 ರನ್ ಕಲೆಹಾಕಿದ್ದರು. ಕೊನೆಯ 7 ಓವರ್ಗಳಲ್ಲಿ ಕೇವಲ 40 ರನ್ಗಳ ಗುರಿ ಹೊಂದಿದ್ದ ಶ್ರೀಲಂಕಾ ತಂಡವು ನಾಟಕೀಯ ಕುಸಿತಕ್ಕೊಳಗಾಯಿತು.
ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ರೋಚಕ ಜಯ ಸಾಧಿಸಿದೆ. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರುತುರಾಜ್ ಗಾಯಕ್ವಾಡ್ (101) ಶತಕ ಸಿಡಿಸಿದರು. ಈ ಶತಕದ ನೆರವಿನೊಂದಿಗೆ ಭಾರತ ಎ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 277 ರನ್ ಕಲೆಹಾಕಿತು.
278 ರನ್ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಂತೆ 43 ಓವರ್ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡ 237 ರನ್ ಕಲೆಹಾಕಿದ್ದರು. ಕೊನೆಯ 7 ಓವರ್ಗಳಲ್ಲಿ ಕೇವಲ 40 ರನ್ಗಳ ಗುರಿ ಹೊಂದಿದ್ದ ಶ್ರೀಲಂಕಾ ತಂಡವು ನಾಟಕೀಯ ಕುಸಿತಕ್ಕೊಳಗಾಯಿತು.
ಅದರಲ್ಲೂ ಅಂತಿಮ 12 ಎಸೆತಗಳಲ್ಲಿ ಶ್ರೀಲಂಕಾ ತಂಡದ ಗೆಲುವಿಗೆ ಬೇಕಿದದ್ದು ಕೇವಲ 9 ರನ್ಗಳು ಮಾತ್ರ. ಈ ಹಂತದಲ್ಲಿ ದಾಳಿಗಿಳಿದ ಎಡಗೈ ವೇಗಿ ಅರ್ಷದ್ ಖಾನ್ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಪಡೆದರು. ಮತ್ತೊಂದೆಡೆ ವಿಜಯಕಾಂತ್ ರನೌಟ್ ಆದರು.
ಪರಿಣಾಮ 48.5 ಓವರ್ಗಳಲ್ಲಿ 269 ರನ್ಗಳಿಸಿ ಶ್ರೀಲಂಕಾ ಎ ತಂಡವು ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 8 ರನ್ಗಳ ರೋಚಕ ಜಯ ಸಾಧಿಸಿದೆ. ಈ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ತಂಡವು ಅಫ್ಘಾನಿಸ್ತಾನ್ ಎ ತಂಡವನ್ನು ಎದುರಿಸಲಿದ್ದು, ಈ ಮ್ಯಾಚ್ ಗುರುವಾರ (ಜೂ.11) ನಡೆಯಲಿದೆ.
ಭಾರತ ‘ಎ’ ಪ್ಲೇಯಿಂಗ್ XI: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಆಯುಷ್ ಬದೋನಿ, ಅನ್ಕುಲ್ ರಾಯ್, ಸೂರ್ಯಂಶ್ ಶೆಡ್ಗೆ, ಅನ್ಶುಲ್ ಕಂಬೋಜ್, ಅರ್ಷಾದ್ ಖಾನ್, ವಿಪ್ರಾಜ್ ನಿಗಮ್.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಸ್ಟಾರ್ ಆಟಗಾರ ಔಟ್: ಕನ್ನಡಿಗ ಎಂಟ್ರಿ!
ಶ್ರೀಲಂಕಾ ‘ಎ’ ಪ್ಲೇಯಿಂಗ್ XI: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಅವಿಷ್ಕ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಸದೀರ ಸಮರವಿಕ್ರಮ, ಸಹನ್ ಅರಾಚಿಂಗೆ (ನಾಯಕ), ಚಾಮಿಕ ಕರುಣಾರತ್ನೆ, ರವಿಂದು ಫೆರ್ನಾಂಡೋ, ವನುಜಾ ಸಹನ್, ವಿಜಯಕಾಂತ್ ವಿಯಾಸ್ಕಾಂತ್, ಮೊಹಮ್ಮದ್ ಶಿರಾಜ್, ಗರುಕ ಸಂಕೇತ್.
