AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Harmanpreet Kaur: ತಗೋ... ಕೊಡಲ್ಲ... ಹೊಸ ಸೆಲೆಬ್ರೇಷನ್​ಗೆ ನಾಂದಿ ಹಾಡಿದ ಹರ್ಮನ್​ಪ್ರೀತ್ ಕೌರ್

Harmanpreet Kaur: ತಗೋ… ಕೊಡಲ್ಲ… ಹೊಸ ಸೆಲೆಬ್ರೇಷನ್​ಗೆ ನಾಂದಿ ಹಾಡಿದ ಹರ್ಮನ್​ಪ್ರೀತ್ ಕೌರ್

ಝಾಹಿರ್ ಯೂಸುಫ್
| Updated By: Digi Tech Desk|

Updated on:Nov 03, 2025 | 8:01 AM

Share

India Women vs South Africa Women, Final: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ 246 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 52 ರನ್​ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಭಾರತ ಮಹಿಳಾ ತಂಡದ ವಿಶ್ವಕಪ್ ಕನಸು ಕೊನೆಗೂ ನನಸಾಗಿದೆ. ನವಿ ಮುಂಬೈನಲ್ಲಿ ನಡೆದ 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ 246 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 52 ರನ್​ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಚಾಂಪಿಯನ್ ಪಟ್ಟದೊಂದಿಗೆ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಹೊಸ ಸೆಲೆಬ್ರೇಷನ್​ಗೆ ನಾಂದಿಯಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡ ರೊಬೊಟ್ ವಾಕ್​ನೊಂದಿಗೆ ಬಂದು ಟ್ರೋಫಿ ಸ್ವೀಕರಿಸುತ್ತಿದ್ದರು. ಆದರೆ ಹರ್ಮನ್​ಪ್ರೀತ್ ಕೌರ್ ಈ ನಡೆಯನ್ನು ಅನುಕರಿಸಿಲ್ಲ. ಬದಲಾಗಿ ಸಹ ಆಟಗಾರ್ತಿಯರಿಗೆ ಟ್ರೋಫಿ ತಗೋ… ಕೊಡಲ್ಲ ಎನ್ನುವಂತೆ ಸಂಭ್ರಮಿಸಿ ಕಪ್ ಎತ್ತಿ ಹಿಡಿದಿದ್ದಾರೆ. ಇದುವೇ ಮುಂದೆ ಹೊಸ ಟ್ರೆಂಡ್ ಸೃಷ್ಟಿಸುವ ಸಾಧ್ಯತೆಯಿದೆ.

ಇದೀಗ ಹರ್ಮನ್​​ಪ್ರೀತ್ ಕೌರ್ ಅವರ ತಗೋ… ಕೊಡಲ್ಲ… ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

Published on: Nov 03, 2025 07:36 AM