ಪಾಕಿಸ್ತಾನಕ್ಕೆ ಭಾರತದ ಶಾಕ್; ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ

Updated on: May 05, 2025 | 3:45 PM

ಜಮ್ಮು ಮತ್ತು ಕಾಶ್ಮೀರದ ರಾಂಬನ್​ನಲ್ಲಿ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ದೃಶ್ಯಗಳು ವೈರಲ್ ಆಗಿದೆ. ಭಾರತವು ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ನೀರಿನ ಹರಿವನ್ನು ಸ್ಥಗಿತಗೊಳಿಸಿದೆ ಮತ್ತು ಝೀಲಂ ನದಿಯ ಕಿಶನ್‌ಗಂಗಾ ಅಣೆಕಟ್ಟಿನಲ್ಲಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಪಾಕಿಸ್ತಾನಕ್ಕೆ ನೀರಿನ ಅಭಾವ ಎದುರಾಗಿದೆ.

ನವದೆಹಲಿ, ಮೇ 5: ಪಾಕಿಸ್ತಾನಕ್ಕೆ ಭಾರತ ಒಂದಾದ ಮೇಲೊಂದು ಶಾಕ್ ನೀಡುತ್ತಿದ್ದು, ಚೆನಾಬ್ ನದಿಯ (Chenab River)  ಬಾಗ್ಲಿಹಾರ್ ಅಣೆಕಟ್ಟಿನಿಂದ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಭಾರತ ಸ್ಥಗಿತಗೊಳಿಸಿದೆ. ಇದರ ಜೊತೆಗೆ ಝೀಲಂ ನದಿಯ ಕಿಶನ್‌ಗಂಗಾ ಯೋಜನೆಯಿಂದ ಹರಿವನ್ನು ತಡೆಯಲು ಸಿದ್ಧತೆ ನಡೆಸುತ್ತಿದೆ. ಸಿಂಧೂ ನದಿ ವ್ಯವಸ್ಥೆಯ ಮೂಲಕ “ಒಂದೇ ಒಂದು ಹನಿ” ನೆರೆಯ ದೇಶ ಪಾಕಿಸ್ತಾನವನ್ನು ತಲುಪುವುದನ್ನು ತಡೆಯಲು ಭಾರತ ನಿರ್ಧರಿಸಿದ್ದು, ಈ ಮೂಲಕ ಎರಡೂ ದೇಶಗಳ ನಡುವೆ ಜಲಯುದ್ಧ ಆರಂಭವಾಗಿದೆ.

ಒಂದು ವಾರದ ಚರ್ಚೆಗಳು ಮತ್ತು ಜಲವಿಜ್ಞಾನದ ಮೌಲ್ಯಮಾಪನಗಳ ನಂತರ, ಭಾರತೀಯ ಅಧಿಕಾರಿಗಳು ಬಾಗ್ಲಿಹಾರ್ ಅಣೆಕಟ್ಟಿನಲ್ಲಿ ಹೂಳು ತೆಗೆಯುವ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಸ್ಲೂಯಿಸ್ ಗೇಟ್‌ಗಳನ್ನು ಕಡಿಮೆ ಮಾಡುವುದರೊಂದಿಗೆ ಪಾಕಿಸ್ತಾನಕ್ಕೆ ನೀರಿನ ಕೆಳಮುಖ ಹರಿವನ್ನು ಶೇ. 90ರಷ್ಟು ಕಡಿಮೆ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ