ಭಾರತದ ಯುದ್ಧ ತಯಾರಿ: ಮಾಕ್ ಡ್ರಿಲ್ ಹಿನ್ನೆಲೆ ನಾಳೆ ಬೆಂಗಳೂರಲ್ಲಿ ಮೊಳಗಲಿದೆ ಮೂರು ಹಂತದ ಸೈರನ್

Updated on: May 06, 2025 | 4:57 PM

ಬೆಂಗಳೂರು ನಗರದಾದ್ಯಾಂತ 35 ಕಡೆಗಳಲ್ಲಿ ಸೈರನ್ ಗಳನ್ನು ಅಳವಡಿಸಲಾಗಿದ್ದು ಅವುಗಳಲ್ಲಿ 32 ಸೈರನ್ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿವೆ. ಸೈರನ್​ಗಳನ್ನು ಸಿವಿಲ್ ಡಿಫೆನ್ಸ್ ನವರು ನಿರ್ವಹಣೆ ಮಾಡುತ್ತಾರೆ ಮತ್ತು ಅವುಗಳನ್ನು ಮೊಳಗಿಸುವ ಕೆಲಸವನ್ನೂ ಅವರೇ ಮಾಡುತ್ತಾರೆ. ನಾಳೆ ಸಾಯಂಕಾಲ 4 ಗಂಟೆಯಿಂದ ಮೂರು ಹಂತದಲ್ಲಿ ಸೈರನ್ ಮೊಳಗಿಸಲಾಗುವುದು ಎಂದು ವರದಿಗಾರ ಹೇಳುತ್ತಾರೆ.

ಬೆಂಗಳೂರು, ಮೇ 6: ಪಾಕಿಸ್ತಾನದ ಮೇಲೆ ಯುದ್ಧ ಸಿದ್ಧತೆಗಳನ್ನು ಭಾರತ ಮಾಡಿಕೊಳ್ಳುತ್ತಿರುವಂತೆಯೇ (India’s prepares for war against Pakistan) ಯುದ್ಧ ಶುರುವಾದಾಗ ಸಾಮಾನ್ಯ ಜನ ಹೇಗೆ ವರ್ತಿಸಬೇಕು, ಮಾಡಿಕೊಳ್ಳಬೇಕಾದ ತಯಾರಿ ಏನು ಅಂತೆಲ್ಲ ಅರ್ಥಮಾಡಿಕೊಳ್ಳಲು ನಾಳೆ ಸಾಯಂಕಾಲ ಮಾಕ್ ಡ್ರಿಲ್ ನಡೆಯಲಿದೆ. ಅಣುಕು ಪ್ರದರ್ಶನದ ಮುಖ್ಯಾಂಶ ಅಂದರೆ ಸೈರನ್ ಆನ್ ಮಾಡೋದು. ನಮ್ಮ ಬೆಂಳೂರು ವರದಿಗಾರ ಮಾಕ್ ಡ್ರಿಲ್ ಹೇಗೆ ನಡೆಯುತ್ತದೆ ಎಲ್ಲೆಲ್ಲಿ ನಡೆಯುತ್ತದೆ ಅನ್ನೋದನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ನಗರದ ಅಗ್ನಿಶಾಮಕ ದಳದ ಬಳಿಯಿರುವ ಸೈರನ್ 1971 ರಲ್ಲಿ ಅಳವಡಿಸಲಾಗಿದೆ ಮತ್ತು ಅದು ಸದ್ದು ಮಾಡಲಾರಂಭಿಸಿದರೆ ಸುತ್ತಮುತ್ತ ಮೂರು ಕಿಮೀ ವ್ಯಾಪ್ತಿಯವರೆಗೆ ಅದು ಕೇಳಿಸುತ್ತದೆ ಎಂದು ವರದಿಗಾರ ಹೇಳುತ್ತಾರೆ.

ಇದನ್ನೂ ಓದಿ:   ಮಾಕ್ ಡ್ರಿಲ್ ಅಂದ್ರೇನು? ಬೆಂಗಳೂರಿನಲ್ಲಿ ಎಲ್ಲೆಲ್ಲಿ, ಹೇಗೆ ನಡೆಯುತ್ತೆ? ಇಲ್ಲಿದೆ ಸಂಪೂರ್ಣ ವಿವರ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 06, 2025 04:53 PM