India-Pakistan War Updates; ಪಾಕಿಸ್ತಾನದ ಸರ್ಗೋಢಾ ವಾಯುನೆಲೆ ಮೇಲೆ ಭಾರತ ದಾಳಿ, ಪಾಕಿಸ್ತಾನಿಗಳು ಕಂಗಾಲು

Updated on: May 10, 2025 | 1:43 PM

ಪಾಕಿಸ್ತಾನದ ಏರ್​ ಬೇಸ್ ಗಳು ನಾಶವಾಗುತ್ತಿವೆ, ಡ್ರೋಣ್ ಗಳು ಒಂದಾದ ಮೇಲೆ ಒಂದರಂತೆ ನೆಲಕ್ಕುರುಳಿತ್ತಿವೆ, ಸೈನಿಕರಿಗೆ ಸಾವುನೋವುಗಳಾಗುತ್ತಿವೆ, ಸಂಸತ್ತನಲ್ಲಿ ಎಂಪಿಗಳು ಪ್ರಧಾನಿ ಶಹಭಾಜ್ ಶರೀಫ್​ರನ್ನು ರಣಹೇಡಿ ಎಂದು ಜರಿಯುತ್ತಿದ್ದಾರೆ, ಮತ್ತು ತನ್ನ ನಾಗರಿಕರಿಂದ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಪಾಕಿಸ್ತಾನ ಇದ್ದರೂ ದರಿದ್ರ ದೇಶವನ್ನು ಆಳುತ್ತಿರುವವರಿಗೆ ಬುದ್ಧಿ ಮಾತ್ರ ಬರುತ್ತಿಲ್ಲ.

ಬೆಂಗಳೂರು, ಮೇ 10: ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದ ಸೇನೆ ನಡೆಸುತ್ತಿರುವ ಕ್ಷಿಪಣಿ ದಾಳಿ ಇಂದು ಮುಂದುವರಿದಿದೆ. ದೃಶ್ಯಗಳಲ್ಲಿ ಕಾಣುತ್ತಿರುವ ಹಾಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಸರ್ಗೋಢಾ ವಾಯುನೆಲೆ ಮೇಲೆ ಭಾರತೀಯ ಸೇನೆಯಿಂದ ಕ್ಷಿಪಣಿ ದಾಳಿಗೊಳಗಾಗಿದೆ. ವಾಯುನೆಲೆಯಿಂದ ಹೊಗೆ ಏಳುತ್ತಿರುವುದನ್ನು ಪಾಕಿಸ್ತಾನಿ ಜನ ಭಯ ಮತ್ತು ಆತಂಕದಿಂದ ವೀಕ್ಷಿಸುತ್ತಿದ್ದಾರೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ರಾಯಲ್ ಏರ್ಫೋರ್ಸ್​​ನಿಂದ ನಿರ್ಮಾಣಗೊಂಡಿರುವ ಸರ್ಗೋಢಾ ಏರ್​ಬೇಸ್ ನಲ್ಲಿ, ಸರ್ಗೋಢಾ, ಛೋಟಾ ಸರ್ಗೋಢಾ, ವಾಗೋವಾಲ್ ಮತ್ತು ಭಾಗಾತನ್ವಾಲಾ ಹೆಸರಿನ ನಾಲ್ಕು ಏರ್ ಸ್ಟ್ರಿಪ್​ಗಳಿದ್ದವು.

ಇದನ್ನೂ ಓದಿ:  ಪಾಕಿಸ್ತಾನದ ಸುಳ್ಳಿನ ಸರಮಾಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭಾರತ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ