Asia Cup 2025: ತಂಡದೊಂದಿಗೆ ಅಭ್ಯಾಸಕ್ಕೆ ಬಾರದ ಸಂಜು ಸ್ಯಾಮ್ಸನ್; ಮೂಡಿತು ಅನುಮಾನ
India vs UAE Asia Cup 2025: ಭಾರತ ಮತ್ತು ಯುಎಇ ನಡುವಿನ 2025ರ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿಯು ಜಿತೇಶ್ ಶರ್ಮಾ ಅವರಿಗೆ ಅವಕಾಶ ದೊರೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ. ಸಂಜು ಅವರು ಐಚ್ಛಿಕ ತರಬೇತಿಯಿಂದ ದೂರ ಉಳಿದಿರುವುದು ಮತ್ತು ಜಿತೇಶ್ ಅವರು ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವುದು ಇದಕ್ಕೆ ಪುಷ್ಠಿ ನೀಡಿದೆ.
2025 ರ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಲಿವೆ. ಆದಾಗ್ಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾ ಯಾವ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಆದರೆ ಈ ಪಂದ್ಯಕ್ಕೂ ಟೀಂ ಇಂಡಿಯಾದಲ್ಲಿ ಒಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಅದೆನೇಂದರೆ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ತಂಡದ ಅಭ್ಯಾಸ ಅವಧಿಗೆ ಗೈರಾಗಿದ್ದಾರೆ.
ವಾಸ್ತವವಾಗಿ ಮಂಗಳವಾರ ಟೀಂ ಇಂಡಿಯಾ ಐಚ್ಛಿಕ ತರಬೇತಿ ಸೆಷನ್ ನಡೆಸಿತು. ಇದಕ್ಕಾಗಿ ಉಪನಾಯಕ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ ಅವರಂತಹ ಆಟಗಾರರು ಅಭ್ಯಾಸದಲ್ಲಿ ಹಾಜರಿದ್ದರಾದರೂ ಸಂಜು ಸ್ಯಾಮ್ಸನ್ ಮಾತ್ರ ದುಬೈ ಕ್ರೀಡಾಂಗಣಕ್ಕೆ ಬಂದಿಲ್ಲ.
ಜಿತೇಶ್ ಇನ್, ಸಂಜು ಔಟ್?
ಜಿತೇಶ್ ಶರ್ಮಾ ಐಚ್ಛಿಕ ಅಭ್ಯಾಸದಲ್ಲಿ ಭಾಗವಹಿಸಿರುವುದು ಮತ್ತು ಸಂಜು ಸ್ಯಾಮ್ಸನ್ ಅದಕ್ಕೆ ಗೈರಾಗಿರುವುದನ್ನು ನೋಡಿದರೆ, ಮೊದಲ ಪಂದ್ಯದಲ್ಲಿ ಸಂಜು ಆಡುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ಕಳೆದ 3 ದಿನಗಳಲ್ಲಿ, ಜಿತೇಶ್ ಶರ್ಮಾ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಇತ್ತ ಸಂಜು ಸ್ಯಾಮ್ಸನ್ ಹೆಚ್ಚು ಅಭ್ಯಾಸ ಮಾಡಿಲ್ಲ, ಅಂದರೆ ಡೆತ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಜಿತೇಶ್ ಶರ್ಮಾಗೆ ಟೀಂ ಇಂಡಿಯಾ ಅವಕಾಶ ನೀಡುವುದು ಖಚಿತವಾದಂತ್ತಾಗಿದೆ.

