ಸೀರಿಯಲ್ ಶೂಟಿಂಗ್ ಹೇಗೆ ಮಾಡ್ತಾರೆ ಅನ್ನೋದು ಕೇಳಿದಾಗ ಭಯ ಆಗಿತ್ತು: ಅವಿನಾಶ್
28 ವರ್ಷಗಳ ನಂತರ ಹಿರಿಯ ನಟ ಅವಿನಾಶ್ ಅವರು ಕಿರುತೆರೆಗೆ ಕಾಲಿಟ್ಟಿದ್ದಾರೆ. ‘ವಸುದೇವ ಕುಟುಂಬ’ ಸೀರಿಯಲ್ನಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಟಿವಿ9 ಜತೆ ಮಾತನಾಡಿದರು. ‘ಅನೇಕ ಬಾರಿ ಧಾರಾವಾಹಿ ಮಾಡಲು ಕರೆದಿದ್ದರು. ನಾನು ಒಪ್ಪುತ್ತಿರಲಿಲ್ಲ’ ಎಂದು ಅವಿನಾಶ್ ಹೇಳಿದ್ದಾರೆ.
28 ವರ್ಷಗಳ ಬಳಿಕ ಹಿರಿಯ ನಟ ಅವಿನಾಶ್ ಅವರು ಕಿರುತೆರೆಗೆ ಕಾಲಿಟ್ಟಿದ್ದಾರೆ. ‘ವಸುದೇವ ಕುಟುಂಬ’ (Vasudeva Kutumba) ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಟಿವಿ9 ಜೊತೆ ಮಾತನಾಡಿದರು. ‘ಹಲವಾರು ಬಾರಿ ಸೀರಿಯಲ್ (Kannada Serial) ಮಾಡಲು ಕರೆದಿದ್ದರು. ನಾನು ಒಪ್ಪುತ್ತಿರಲಿಲ್ಲ. ಯಾಕೆಂದರೆ, ನಾನು ಸಿನಿಮಾದಲ್ಲಿ ಬೆಳೆದವನು. ಧಾರಾವಾಹಿ ಫಾರ್ಮ್ಯಾಟ್ ಬಗ್ಗೆ ನನಗೆ ಗೊತ್ತಿರಲಿಲ್ಲ. ಹೇಗೆ ಶೂಟಿಂಗ್ ಮಾಡುತ್ತಾರೆ ಎಂಬುದನ್ನು ಮಾಳವಿಕಾ ಹೇಳಿದಾಗ ನನಗೆ ಭಯ ಆಗುತ್ತಿತ್ತು. ಬೆಳಗ್ಗೆ ಹೋದರೆ ರಾತ್ರಿ 10 ಗಂಟೆಗೆ ಬರುತ್ತಿದ್ದಳು. ಆ ರೀತಿ ಮಾಡಿ ನನಗೆ ಅಭ್ಯಾಸ ಇಲ್ಲ. ಆದರೆ ವಸುದೇವ ಕುಟುಂಬ ಸೀರಿಯಲ್ ಪಾತ್ರ ನನಗೆ ಇಷ್ಟ ಆಯಿತು. ಮಾಳವಿಕಾ ಕೂಡ ಒತ್ತಾಯಿಸಿದಳು. ಹಾಗಾಗಿ ಒಪ್ಪಿಕೊಂಡೆ’ ಎಂದು ಅವಿನಾಶ್ (Avinash) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
