6 ಸಿನಿಮಾ ಮಾಡಿದರೂ ದರ್ಶನ್ ನನ್ನ ಬಳಿ ಕಥೆ ಕೇಳಿಲ್ಲ: ಓಂ ಪ್ರಕಾಶ್ ರಾವ್
ಡೈರೆಕ್ಟರ್ ಓಂ ಪ್ರಕಾಶ್ ರಾವ್ ಅವರು ‘ಫೀನಿಕ್ಸ್’ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಿಮಿಕಾ ರತ್ನಾಕರ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ದರ್ಶನ್ ಬಗ್ಗೆ ಓಂ ಪ್ರಕಾಶ್ ರಾವ್ ಮಾತನಾಡಿದರು. ‘ದರ್ಶನ್ ಅವರು ಯಾವತ್ತೂ ನನ್ನ ಬಳಿ ಕಥೆ ಕೇಳಿಲ್ಲ’ ಎಂದು ಅವರು ಹೇಳಿದ್ದಾರೆ.
ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ಅವರು ‘ಫೀನಿಕ್ಸ್’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಿಮಿಕಾ ರತ್ನಾಕರ್ ಅವರು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ದರ್ಶನ್ (Darshan) ಬಗ್ಗೆ ಓಂ ಪ್ರಕಾಶ್ ರಾವ್ ಅವರು ಮಾತನಾಡಿದರು. ‘ದರ್ಶನ್ ಅವರು ಯಾವತ್ತೂ ನನ್ನ ಬಳಿ ಕಥೆ ಕೇಳಿಲ್ಲ. ಅವರ ಜೊತೆ 6 ಸಿನಿಮಾ ಮಾಡಿದ್ದೇನೆ. ಅವರಿಗೆ ಕತೆಯೇ ಗೊತ್ತಿಲ್ಲ. ಅವರು ನನಗೆ ಅಷ್ಟು ಬೆಲೆ ಕೊಡುತ್ತಾರಲ್ಲ ಎಂಬ ಭಯದಿಂದಲೇ ನಾನು ಸಿನಿಮಾ ಮಾಡಿದ್ದೇನೆ. ಆ ಸಿನಿಮಾಗಳಿಂದ ಅವರಿಗೆ ಕಮರ್ಷಿಯಲ್ ಹಿಟ್ ಸಿಕ್ಕಿದೆ, ಸೂಪರ್ ಸ್ಟಾರ್ ಪಟ್ಟ ಸಿಕ್ಕಿದೆ. ಅದು ನನಗೆ ಸಂತೋಷ’ ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

