ಇಂಗ್ಲಿಷ್ ವಿಚಾರದಲ್ಲಿ ಅವಿನಾಶ್ಗೆ ಆಗಿತ್ತು ಅವಮಾನ; ರಿವೇಂಜ್ ಹೇಗಿತ್ತು ನೋಡಿ
ಹಿರಿಯ ನಟ ಅವಿನಾಶ್ ಅವರು ತಮ್ಮ ಇಂಗ್ಲಿಷ್ ಕಲಿಕೆಯ ಪ್ರೇರಣಾತ್ಮಕ ಕಥೆಯನ್ನು ಹಂಚಿಕೊಂಡಿದ್ದಾರೆ. ಯುವಕನಾಗಿದ್ದಾಗ ಇಂಗ್ಲಿಷ್‌ನಲ್ಲಿ ಅವಮಾನ ಅನುಭವಿಸಿದ ಅವರು, ನಂತರ ಎಂ.ಎ. ಪದವಿ ಪಡೆದು ಇಂಗ್ಲಿಷ್‌ನಲ್ಲಿ ಪಾಠ ಮಾಡುವ ಮಟ್ಟಕ್ಕೆ ಬೆಳೆದರು. ಇದನ್ನು ಅವರು ತಮ್ಮ ಒಂದು ರೀತಿಯ ಪ್ರತೀಕಾರವೆಂದು ಪರಿಗಣಿಸುತ್ತಾರೆ. ಅವರ ಈ ಪ್ರಯಾಣವು ಅನೇಕರಿಗೆ ಸ್ಫೂರ್ತಿಯಾಗಿದೆ.

ಹಿರಿಯ ನಟ ಅವಿನಾಶ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ವಿಲನ್ ಪಾತ್ರಗಳ ಮೂಲಕ, ಒಳ್ಳೆಯ ಪೊಲೀಸ್ ಹಾಗೂ ಕೆಟ್ಟ ಪೊಲೀಸ್ ಅಧಿಕಾರಿಯಾಗಿ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವಿನಾಶ್ ಅವರು ಸಿನಿಮಾದಲ್ಲಿ ಇದ್ದರೆ ಅದಕ್ಕೆ ಬೇರೆಯದೇ ತೂಕ ಬರುತ್ತದೆ ಎಂಬುದು ಗೊತ್ತಿರುವ ವಿಚಾರ. ಈಗ ಅವರ ಹಳೆಯ ಸಂದರ್ಶನದ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರಿಗೆ ಇಂಗ್ಲಿಷ್ ವಿಚಾರದಲ್ಲಿ ಅವಮಾನ ಆಗಿದ್ದಾಗಿಯೂ, ಅದಕ್ಕೆ ಅವರು ರಿವೇಂಜ್ ತೀರಿಸಿಕೊಂಡಿದ್ದಾಗಿಯೂ ಹೇಳಿಕೊಂಡಿದ್ದರು.
ಸಾಮಾನ್ಯವಾಗಿ ಅವಮಾನ ಆದರೆ ಕೆಲವರು ಅದನ್ನು ಮರೆಯುತ್ತಾರೆ. ಅದರಲ್ಲೂ ಇಂಗ್ಲಿಷ್ ಬಂದಿಲ್ಲ ಎಂದು ಯಾರಾದರೂ ನಕ್ಕರೆ, ಏನಾದರೂ ಒಂದು ಸಬೂಬು ಹೇಳಿ ಜೊತೆಯಲ್ಲಿ ನಾವು ನಕ್ಕಿ ಬಿಡುತ್ತೇವೆ. ಆದರೆ, ಅವಿನಾಶ್ ಅವರು ಆ ರೀತಿ ಅಲ್ಲವೇ ಅಲ್ಲ. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ, ಅವರು ನಂತರ ಇಂಗ್ಲಿಷ್ನ ಕಲಿತು ಮಾತನಾಡಿ ತೋರಿಸಿದರು. ಅದೇ ವಿಷಯದಲ್ಲಿ ಪ್ರಾಧ್ಯಾಪಕರು ಕೂಡ ಆದರು.
‘ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಅಕ್ಕನ ಜೊತೆ ಮುದವೆಗೆ ಹೋಗಿದ್ದೆ. ಅಲ್ಲಿ ಯಾರೋ ಬಂದು ‘ವಾಟ್ ಈಸ್ ಯುವರ್ ನೇಮ್’ ಎಂದು ಕೇಳಿದರು. ಅದು ಸಾಮಾನ್ಯವಾಗಿ ಗೊತ್ತಿತ್ತು. ಹೀಗಾಗಿ, ಮೈ ನೇಮ್ ಈಸ್ ರವೀಂದ್ರ (ಹಳೆಯ ಹೆಸರು) ಎಂದೆ. ‘ವೆರ್ ಆರ್ ಯು ಪುಟ್ ಅಪ್’ ಎಂದರು. ನನಗೆ ಗೊತ್ತಾಗಲಿಲ್ಲ. ಅವಮಾನ ಆಗಿ ಹೋಯಿತು’ ಎಂದಿದ್ದರು ಅವಿನಾಶ್.
View this post on Instagram
ಇದಕ್ಕೆ ಅವಿನಾಶ್ ಅವರು ಹಗೆ ತೀರಿಸಿಕೊಂಡ ರೀತಿ ಭಿನ್ನವಾಗಿತ್ತು. ‘ನಾನು ಡಿಗ್ರೀಲಿ ಇಂಗ್ಲಿಷ್ ತೆಗೆದುಕೊಂಡೆ. ಇಂಗ್ಲಿಷ್‌ನಲ್ಲಿ ಎಂಎ ಮಾಡಿದೆ. ಆ ಬಳಿಕ ಇಂಗ್ಲಿಷ್‌ನಲ್ಲಿ ಪಾಠ ಮಾಡಿದೆ. ಇಂಗ್ಲಿಷ್ ನಾಟಕ ಮಾಡಿದೆ. ಇದು ನಾನು ತೆಗೆದುಕೊಂಡ ರಿವೇಂಜ್’ ಎಂದು ಅವಿನಾಶ್ ಅವರು ಹೇಳಿದ್ದರು.
ಇದನ್ನೂ ಓದಿ: ಚಂದ್ರುಮುಖಿ-2 ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ಇದು ಆಪ್ತಮಿತ್ರ 2 ರೀಮೇಕಾ?
ಅವಿನಾಶ್ ಅವರು ‘ಆಪ್ತಮಿತ್ರ’ ಸಿನಿಮಾದಲ್ಲಿ ಮಾಡಿದ ಪಾತ್ರವು ಎಲ್ಲರ ಗಮನ ಸೆಳೆಯುವಂತಿದೆ. ಮಂತ್ರ-ತಂತ್ರ ಓದಿಕೊಂಡ ಜ್ಞಾನಿಯ ರೀತಿಯಲ್ಲಿ ಅವರು ಕಾಣಿಸಿದ್ದರು. ಅವರ ಪಾತ್ರವನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರು ಈ ವಯಸ್ಸಲ್ಲೂ ಹೆಚ್ಚು ಆರೋಗ್ಯವಾಗಿ ಇದ್ದಾರೆ. ಈಗಲೂ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







