AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶಾರಾಮಿ ಕಾರು ಖರೀದಿಸಿದ ಯಶ್, ವಿಶೇಷವಾಗಿದೆ ರಿಜಿಸ್ಟ್ರೆಷನ್ ಸಂಖ್ಯೆ

Yash new car: ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿರುವ ಯಶ್ ಬಳಿ ಹಲವಾರು ಐಶಾರಾಮಿ ಕಾರುಗಳಿವೆ. ಇದೀಗ ತಮ್ಮ ಕಾರು ಸಂಗ್ರಹಕ್ಕೆ ಹೊಸ ಕಾರೊಂದನ್ನು ಸೇರಿಸಿಕೊಂಡಿದ್ದಾರೆ ನಟ ಯಶ್. ಕೋಟ್ಯಂತರ ಹಣ ನೀಡಿ ಹೊಸ ಕಾರನ್ನು ಯಶ್ ಖರೀದಿ ಮಾಡಿದ್ದಾರೆ. ಯಶ್ ಖರೀದಿ ಮಾಡಿರುವ ಐಶಾರಾಮಿ ಕಾರಿನಷ್ಟೆ ಆ ಕಾರಿನ ಸಂಖ್ಯೆ ಸಹ ಗಮನ ಸೆಳೆಯುತ್ತಿದೆ.

ಐಶಾರಾಮಿ ಕಾರು ಖರೀದಿಸಿದ ಯಶ್, ವಿಶೇಷವಾಗಿದೆ ರಿಜಿಸ್ಟ್ರೆಷನ್ ಸಂಖ್ಯೆ
Yash New Car
ಮಂಜುನಾಥ ಸಿ.
|

Updated on: Jul 01, 2025 | 12:32 PM

Share

ಯಶ್ (Yash) ಈಗ ಪ್ಯಾನ್ ಇಂಡಿಯಾ (Pan India) ಸ್ಟಾರ್. ‘ಕೆಜಿಎಫ್’ ಮೂಲಕ ಸಿಕ್ಕ ಗೆಲುವನ್ನು ಬಳಸಿಕೊಂಡು ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಭಾರತದ ಅತ್ಯುತ್ತಮ ಪ್ರಾಜೆಕ್ಟ್​ಗಳಲ್ಲಿ ಯಶ್ ನಟಿಸುತ್ತಿದ್ದಾರೆ. ದೊಡ್ಡ-ದೊಡ್ಡ ಪ್ರಾಜೆಕ್ಟ್​ಗಳ ಮೇಲೆ ಬಂಡವಾಳ ಹೂಡಿದ್ದಾರೆ. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ಯಶ್, ಅವರ ಸಂಭಾವನೆಗೆ ತಕ್ಕಂತೆ ಐಶಾರಾಮಿ ಜೀವನಶೈಲಿಯನ್ನೂ ಅಳವಡಿಸಿಕೊಂಡಿದ್ದಾರೆ. ಐಶಾರಾಮಿ ಮನೆ, ಕಾರುಗಳಂತೂ ಸಾಕಷ್ಟಿವೆ. ಇದೀಗ ಅವರು ಹೊಸದೊಂದು ಕಾರೊಂದನ್ನು ಖರೀದಿ ಮಾಡಿದ್ದಾರೆ. ಕಾರಿನಷ್ಟೆ, ಕಾರಿನ ನಂಬರ್ ಪ್ಲೇಟ್ ಸಹ ಗಮನ ಸೆಳೆಯುತ್ತಿದೆ.

ಸಿನಿಮಾ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ಹೆಚ್ಚಿನ ಸಮಯವನ್ನು ಯಶ್ ಕಳೆಯುತ್ತಿದ್ದು, ಅಲ್ಲಿನ ಓಡಾಟಕ್ಕಾಗಿ ಎಂದು ಒಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ ಯಶ್. ರಣ್​ಬೀರ್ ಕಪೂರ್, ಶಾರುಖ್ ಖಾನ್ ಅಂಥಹಾ ಸ್ಟಾರ್ ಹೀರೋಗಳ ಮಾತ್ರವೇ ಇರುವ ಲೆಕ್ಸಸ್​ನ ಎಲ್​ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರನ್ನು ಯಶ್ ಖರೀದಿ ಮಾಡಿದ್ದಾರೆ. ಈ ಕಾರು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಅದ್ಭುತವಾದ ಕಂಫರ್ಟ್ ಅನ್ನು ಪ್ರಯಾಣಿಸುವವರಿಗೆ ನೀಡುತ್ತದೆ. ಬೆಲೆಯೂ ಸಹ ಭಾರಿ ದುಬಾರಿ.

ಯಶ್ ಖರೀದಿ ಮಾಡಿರುವ ಲೆಕ್ಸಸ್​ನ ಎಲ್​ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರಿನ ಬೆಲೆ ಸುಮಾರು 3 ಕೋಟಿ ಇದೆ (ಆನ್​ ರೋಡ್) ಈ ಕಾರಿನ ಎಕ್ಸ್ ಶೋರೂಂ ಬೆಲೆಯೇ 2.65 ಕೋಟಿ ರೂಪಾಯಿಗಳಿದೆ. ನೀಲಿ ಬಣ್ಣದ ಕಾರನ್ನು ಯಶ್ ಖರೀದಿ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಈ ಕಾರಿನ ನೊಂದಣಿ ಆಗಿದೆ. ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಈ ಕಾರಿನ ನೊಂದಣಿಯನ್ನು ನಟ ಯಶ್ ಮಾಡಿಸಿದ್ದಾರೆ.

ಇದನ್ನೂ ಓದಿ:ಸಖತ್ ಸ್ವ್ಯಾಗ್; ಮುಂಬೈನಿಂದ ವಿದೇಶಕ್ಕೆ ಹಾರಿದ ಯಶ್

ಕಾರಿನ ಸಂಖ್ಯೆ ಕಾರಿನಷ್ಟೆ ಗಮನ ಸೆಳೆಯುತ್ತಿದೆ. ಯಶ್ ಖರೀದಿಸಿರುವ ಕಾರಿನ ಸಂಖ್ಯೆ ಎಂಎಚ್ 47 ಸಿಬಿ 8055 (MH47CB8055) ಎಂದಿದೆ. 8055 ಸಂಖ್ಯೆಯನ್ನು ‘ಬಾಸ್’ ಸಂಖ್ಯೆ ಎಂದು ಕರೆಯಲಾಗುತ್ತದೆ. 8055 ಸಂಖ್ಯೆ ನೋಡಲು ಇಂಗ್ಲೀಷ್​​ನ BOSS ನಂತೆ ಕಾಣುತ್ತದೆಯಾದ್ದರಿಂದ ಈ ಸಂಖ್ಯೆಗೆ ಬಾಸ್ ಸಂಖ್ಯೆ ಎಂದು ಹೆಸರು. ಮಾತ್ರವಲ್ಲದೆ ಈ 8055 ಸಂಖ್ಯೆ ಬಲು ದುಬಾರಿ ಸಹ ಹೌದು. ಲಕ್ಷಾಂತರ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡಿ 8055 ಸಂಖ್ಯೆಯನ್ನು ಆರ್​​ಟಿಓ ಯಿಂದ ಖರೀದಿ ಮಾಡಬೇಕು. ಯಶ್​ರ ಎಲ್ಲ ಕಾರುಗಳ ಸಂಖ್ಯೆಯೂ 8055 ಆಗಿದೆ. ಅಂದಹಾಗೆ ಯಶ್ ಈಗ ಖರೀದಿ ಮಾಡಿರುವ ಲೆಕ್ಸಸ್ ಕಾರು ಅವರ ನಿರ್ಮಾಣ ಸಂಸ್ಥೆಯಾದ ಮಾನ್​ಸ್ಟರ್ ಮೈಂಡ್ಸ್​ ಹೆಸರಿನಲ್ಲಿ ನೊಂದಣಿ ಆಗಿದೆ.

ಇನ್ನು ಯಶ್ ಖರೀದಿ ಮಾಡಿರುವ ಲೆಕ್ಸಸ್​ನ ಎಲ್​ಎಂ 350ಎಚ್ 4ಎಸ್ ಅಲ್ಟ್ರಾ ಕಾರು ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಂಫರ್ಟ್​ ಕಾರಾಗಿದೆ. ಇದು ಹೈಬ್ರಿಡ್ ಕಾರಾಗಿದ್ದು, ಪೆಟ್ರೋಲ್ ಮತ್ತು ವಿದ್ಯುತ್ ಬಳಸಿಕೊಂಡು ಚಲಿಸುತ್ತದೆ. ಕಾರಿನಲ್ಲಿ ಐಶಾರಾಮಿ ಹೀಟೆಡ್-ವೆಂಟಿಲೇಟೆಡ್ ರಿಕ್ಲೈನ್ ಮಾದರಿ ಸೀಟುಗಳು, ಮಸಾಜರ್​ಗಳು, ಪ್ರತಿ ಸೀಟಿಗೂ ಪ್ರತ್ಯೇಕ ಸ್ಕ್ರೀನ್, ಮಿನಿ ಫ್ರಿಡ್ಜ್, ಆಟೊಮೇಟೆಡ್ ಡೋರ್ ವ್ಯವಸ್ಥೆ ಇನ್ನೂ ಹಲವಾರು ಐಶಾರಾಮಿ ಆಯ್ಕೆಗಳನ್ನು ಈ ಕಾರು ಹೊಂದಿದೆ. ಇದೆಲ್ಲದರ ಜೊತೆಗೆ ಕಾರಿನಲ್ಲಿ ಅತ್ಯುತ್ತಮವಾದ ಭದ್ರತಾ ವ್ಯವಸ್ಥೆಯೂ ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ