ಪೆರೇಡ್‌ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಪುಷ್ಅಪ್‌; ವಿಡಿಯೋ ವೈರಲ್

Updated on: Dec 13, 2025 | 10:45 PM

ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಅಧಿಕಾರಿಗಳೊಂದಿಗೆ ಉಪೇಂದ್ರ ದ್ವಿವೇದಿ ಪುಷ್-ಅಪ್‌ಗಳನ್ನು ಮಾಡುತ್ತಿರುವುದನ್ನು ನೋಡಬಹುದು. ಐತಿಹಾಸಿಕ ಡ್ರಿಲ್ ಸ್ಕ್ವೇರ್‌ನಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ 491 ಕೆಡೆಟ್‌ಗಳು ಭಾಗವಹಿಸಿದ್ದರು. ಇನ್ನು ಅವರನ್ನು ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ನಿಯೋಜಿಸಲಾಗುವುದು. 525 ಕೆಡೆಟ್‌ಗಳು ಭಾಗವಹಿಸಿದ್ದ ಈ ಪೆರೇಡ್‌ನಲ್ಲಿ ಉಪೇಂದ್ರ ದ್ವಿವೇದಿ ಪರಿಶೀಲನಾ ಅಧಿಕಾರಿಯಾಗಿದ್ದರು.

ನವದೆಹಲಿ, ಡಿಸೆಂಬರ್ 13: ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ಯಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ (Upendra Dwivedi) ಯುವ ಅಧಿಕಾರಿಗಳೊಂದಿಗೆ ಪುಷ್ಅಪ್‌ ಮಾಡುವ ಮೂಲಕ ತಮ್ಮ ಫಿಟ್‌ನೆಸ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಅಧಿಕಾರಿಗಳೊಂದಿಗೆ ಉಪೇಂದ್ರ ದ್ವಿವೇದಿ ಪುಷ್-ಅಪ್‌ಗಳನ್ನು ಮಾಡುತ್ತಿರುವುದನ್ನು ನೋಡಬಹುದು.

ಐತಿಹಾಸಿಕ ಡ್ರಿಲ್ ಸ್ಕ್ವೇರ್‌ನಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ 491 ಕೆಡೆಟ್‌ಗಳು ಭಾಗವಹಿಸಿದ್ದರು. ಇನ್ನು ಅವರನ್ನು ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ನಿಯೋಜಿಸಲಾಗುವುದು. 525 ಕೆಡೆಟ್‌ಗಳು ಭಾಗವಹಿಸಿದ್ದ ಈ ಪೆರೇಡ್‌ನಲ್ಲಿ ಉಪೇಂದ್ರ ದ್ವಿವೇದಿ ಪರಿಶೀಲನಾ ಅಧಿಕಾರಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ