ಆಪರೇಷನ್ ಸಿಂಧೂರ್​​ನಲ್ಲಿ ನಾವೇ ಗೆದ್ದಿದ್ದು ಎಂದ ಪಾಕ್ ಪ್ರಧಾನಿ; ವಿಶ್ವಸಂಸ್ಥೆಯಲ್ಲಿ ನಕ್ಕು ಲೇವಡಿ ಮಾಡಿದ ಭಾರತೀಯ ರಾಜತಾಂತ್ರಿಕ

Updated on: Sep 26, 2026 | 7:10 PM

ಶೆಹಬಾಜ್ ಷರೀಫ್ ಅವರು ಸಾಮಾನ್ಯ ಸಭೆಯಲ್ಲಿ ಮಾತನಾಡುವಾಗ, ಮೇ 2025ರಲ್ಲಿ ಭಾರತದ ಆಪರೇಷನ್ ಸಿಂಧೂರ್‌ಗೆ ಪಾಕಿಸ್ತಾನ ಸೇನೆಯು ನಿಖರತೆ ಮತ್ತು ವೃತ್ತಿಪರತೆಯಿಂದ ಪ್ರತ್ಯುತ್ತರ ನೀಡಿ ಶತ್ರುಗಳನ್ನು ಮಟ್ಟಹಾಕಿತು ಎಂದು ಜಂಭದಿಂದ ಹೇಳಿಕೊಂಡರು. ಈ ವೇಳೆ ಸಭೆಯಲ್ಲಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿ ಆರ್. ಶ್ರೀನಿವಾಸ್ ನಗುತ್ತಾ, ಪಾಕ್ ಪ್ರಧಾನಿಯ ಹೇಳಿಕೆಯನ್ನು ತಾವು ಒಪ್ಪುವುದಿಲ್ಲವೆಂದು ತಲೆಯಾಡಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನ್ಯೂಯಾರ್ಕ್, ಸೆಪ್ಟೆಂಬರ್ 26: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2025ರ ಭಾರತ-ಪಾಕಿಸ್ತಾನದ ನಡುವಿನ ‘ಆಪರೇಷನ್ ಸಿಂಧೂರ್’ ಸಂಘರ್ಷದ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸುಳ್ಳು ಹೇಳಿಕೆ ನೀಡಿ ಮತ್ತೊಮ್ಮೆ ಜಗತ್ತಿನ ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಭಾರತದ ಜೊತೆಗಿನ ಯುದ್ಧದಲ್ಲಿ ಪಾಕಿಸ್ತಾನವೇ ಗೆದ್ದಿತು ಎಂಬ ಅವರ ಕಾಲ್ಪನಿಕ ಹೇಳಿಕೆಗಳಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿ ಆರ್​. ಶ್ರೀನಿವಾಸ್ ನಗುತ್ತಾ ತಲೆಯಾಡಿಸಿದ ವಿಡಿಯೋ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಶೆಹಬಾಜ್ ಷರೀಫ್ ಅವರು ಸಾಮಾನ್ಯ ಸಭೆಯಲ್ಲಿ ಮಾತನಾಡುವಾಗ, ಮೇ 2025ರಲ್ಲಿ ಭಾರತದ ಆಪರೇಷನ್ ಸಿಂಧೂರ್‌ಗೆ ಪಾಕಿಸ್ತಾನ ಸೇನೆಯು ನಿಖರತೆ ಮತ್ತು ವೃತ್ತಿಪರತೆಯಿಂದ ಪ್ರತ್ಯುತ್ತರ ನೀಡಿ ಶತ್ರುಗಳನ್ನು ಮಟ್ಟಹಾಕಿತು ಎಂದು ಜಂಭದಿಂದ ಹೇಳಿಕೊಂಡರು. ಈ ವೇಳೆ ಸಭೆಯಲ್ಲಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿ ಆರ್. ಶ್ರೀನಿವಾಸ್ ನಗುತ್ತಾ, ಪಾಕ್ ಪ್ರಧಾನಿಯ ಹೇಳಿಕೆಯನ್ನು ತಾವು ಒಪ್ಪುವುದಿಲ್ಲವೆಂದು ತಲೆಯಾಡಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More